ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಹ್ಲಾದ ಜೋಶಿ ಪರವಾಗಿ ಮತಯಾಚನೆ

ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಹ್ಲಾದ ಜೋಶಿ ಪರವಾಗಿ ಮತಯಾಚನೆ
ಧಾರವಾಡ 

ಧಾರವಾಡ ಲೋಕಸಭಾ ಚುನಾವಣಾ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರ ಪರವಾಗಿ ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಆಡಳಿತದ ಚುಕ್ಕಾಣಿ ಹಿಡಿದು ಪ್ರಧಾನಮಂತ್ರಿಯಾಗಲು ಇಂದು ಮಹಾ ಸಂಪರ್ಕ ಅಭಿಯಾನದ ಅಂಗವಾಗಿ  ಧಾರವಾಡದ ವಾರ್ಡ ಸಂಖ್ಯೆ 3ರಲ್ಲಿ ಮಾಜಿ ಮೇಯರ್ ಈರೇಶ ಅಂಚಟಗೇರಿ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಪಾದಯಾತ್ರೆ ನಡೆಸಲಾಯಿತು.
ವಾರ್ಡ‌ ನಂಬರ್ 3 ರ ವಿವಿಧ ಬಡಾವಣೆಗಳಾದ, ಮಹಾತ್ಮ ಬಸವೇಶ್ವರ ನಗರ, ಜಂಬಗಿ ಓಣಿ, ಕೋಟಿ ಓಣಿ, ಗುಲಗಂಜಿಕೊಪ್ಪ ಭಾಗದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ ತೆರಳಿ ಮತಯಾಚಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ತು ವರ್ಷದ ಸಾಧನೆ ಸಂಸದರು ಪ್ರಲ್ಹಾದ ಜೋಶಿಯವರ ನಾಲ್ಕು ಅವಧಿಯ ಕಾರ್ಯಸಾಧನೆ ಹೊತ್ತ ಕರಪತ್ರಗಳನ್ನ ಮನೆ ಮನೆಗು ನೀಡಿ ಐದನೆ ಬಾರಿಗೆ ಪ್ರಲ್ಹಾದ ಜೋಶಿಯವರನ್ನ ಆಯ್ಕೆ ಮಾಡಲು ತಮ್ಮ ಅಮೂಲ್ಯವಾದ ಮತವನ್ನ ಚಲಾಯಿಸಲು ವಿನಂತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ ಅವರೊಂದಿಗೆ ಪಕ್ಷದ ಮುಖಂಡರಾದ  ರಾಜೇಶ್ವರಿ ಅಳಗವಾಡಿ, ಅಶೋಕ ಶೆಟ್ಟರ, ‌ಬಸು ಬಾಳಗಿ, ಶೋಭಾ ಜಾಧವ ಬಸವರಾಜ ಇಸ್ರಣ್ಣವರ, ಚನ್ನಬಸವ ಕಲಘಟಗಿ,
 ಶಿವಪ್ಪ ಕೋಟಿ, ರಾಜು ಹೆಬ್ಬಳ್ಳಿ, ಕಮ್ಮಾರ ಪಕ್ಕಿರಗೌಡ, ಪಾಟೀಲ ರವಿ ಅವ್ವಣ್ಣವರ,
 ಮಂಜುನಾಥ ಬದ್ಲಿ  ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال