ಮಹಿಳೆಯರ ಮೇಲಿನ ಅಮಾನುಷ ಕೃತ್ಯಕ್ಕೆ ಕಡಿವಾಣ ಹಾಕಲು, ಕಾನೂನು ತಿದ್ದುಪಡಿಗೆ ಮನವಿ- ಸಾಧನಾ ಮಹಿಳಾ ಮತ್ತು ಮಕ್ಕಳ ಸಂಸ್ಥೆ
ಧಾರವಾಡ:
ಇತ್ತೀಚೆಗೆ ಕರ್ನಾಟಕದಲ್ಲಿ, ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ಕೃತ್ಯಗಳು ಯಾವುದೇ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿಲ್ಲ, ಉಡುಪಿ, ಬೆಂಗಳೂರು,ಕೊಪ್ಪಳ ಹುಬ್ಬಳ್ಳಿ , ಗದಗದಲ್ಲಿಯೂ ಸಹ ಅಮಾನವೀಯ ಕೃತ್ಯಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ, ಇದರಿಂದ ಸಮಾಜದ ಸಮತೋಲನ ಹದಗೆಡುತ್ತಿದೆ.
ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಯಿತು
ಸ್ತ್ರೀಯರ ಮೇಲೆ ಅಮಾನುಷ ಕೃತ್ಯವೆಸಗುವ ತಪ್ಪಿತಸ್ಥರನ್ನು ವಶಕ್ಕೆ ಸಿಕ್ಕ ತಕ್ಷಣ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬೇಕು.
ಸ್ತ್ರೀಯರ ಮೇಲೆ ಅಮಾನವೀಯ ಕೃತ್ಯವೆಸಗಿದ ತಪ್ಪಿತಸ್ಥ ಸಾಬೀತು ಆದ ತಕ್ಷಣ ಗಲ್ಲು ಶಿಕ್ಷೆ ಗಿಂತಲೂ ಮಿಗಿಲಾದ ಕಠಿಣ ಶಿಕ್ಷೆಯ ಹೊಸ ಕಾನೂನು ತರಬೇಕು. ಇತ್ತೀಚಿನ ದಿನಮಾನಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರಗಳು ಹಾಗೂ ಮಹಿಳೆಯರ ಮೇಲೆ ಅಮಾನವೀಯವಾದ ಕೃತ್ಯಗಳು ನಮ್ಮ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿ ಆಗುತ್ತಿರುವದು ಅತ್ಯಂತ ವಿಷಾದಕರ ವಿಷಯ. ಮಹಿಳಾ ಭದ್ರತಾ ಸೂಚ್ಯಂಕದಲ್ಲಿ ಭಾರತ ರಾಷ್ಟ್ರ 177 ರಲ್ಲಿ 128 ನೆಯ ಸ್ಥಾನವೆಂದು ದುಃಖದಿಂದ ಒಪ್ಪಿಕೊಳ್ಳುವವು ಅನಿವಾರ್ಯ.
ಮಣಿಪುರದ ಘಟನೆ ಅಲ್ಲಿ ನಡೆದ ಹೀನಾಯ ಅಮಾನವೀಯ ಕೃತ್ಯಗಳು ಮಾಸುವ ಮುಂಚೆ ಕೆಲವು ತಿಂಗಳುಗಳಲ್ಲಿ ನಮ್ಮ ರಾಜ್ಯ ಕರ್ನಾಟಕದಲ್ಲಿ ಇಂತಹ ಅಮಾನವೀಯ ಕೃತ್ಯಗಳು ಬಹಳ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಪ್ರಮುಖವಾಗಿ ನವೆಂಬರ್2023 ರಲ್ಲಿ ಉಡುಪಿಯಲ್ಲಿ ಹೃದಯ ವಿದ್ರಾವಕ ಮೂರು ಮಹಿಳೆ/ಬಾಲಕಿ ಸೇರಿ 4 ಕೊಲೆಗಳು, ಸಿಲಿಕಾನ್ ಸಿಟಿ ಎಂದು ವಿಖ್ಯಾತಿ ಹೊಂದಿರುವ ಬೆಂಗಳೂರಿನಲ್ಲಿ ಇದೆ ತಿಂಗಳು ನಡೆದ 2 ಅಮಾನುಷ ಘಟನೆಗಳು, ಹುಬ್ಬಳ್ಳಿಯ ಪ್ರಸಿದ್ಧ ಕೆ.ಎಲ್. ಇ. ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹಾಡುಹಗಲೇ ಆವರಣದಲ್ಲೇ ವಿದ್ಯಾರ್ಥಿನಿಯನ್ನು ವಿಫಲ ಪ್ರೀತಿ ವಿಷಯದಲ್ಲಿ ಪ್ರೇಮಿಯೂ ಚಾಕುವಿನಿಂದ ಇರಿದು ಕೊಂಡು ಹಾಕುತ್ತಾನೆ.
ಗದಗ ಜಿಲ್ಲೆಯ ಕುಟುಂಬ ಕೊಲೆ
ಕೊಪ್ಪಳ ಜಿಲ್ಲೆಯ ಬಾಲಕಿಯ ಹತ್ಯೆ ಇಂತಹ ಅಮಾನವೀಯ ಕೃತ್ಯಗಳು ಸಮಾಜದ ಸಮತೋಲನವನ್ನು ಹದಗೆಡಿಸಿ ಬಿಟ್ಟಿದೆ. ಕಾನೂನು ಮತ್ತು ಸುವ್ಯವಸ್ಥೆ ಇದ್ದರೂ ಕೂಡ ಇಂತಹ ಕೃತ್ಯಗಳು ಆಗುತ್ತಿರುವುದಕ್ಕೆ ಕಡಿವಾಣ ಹಾಕಲು ವಿಚಾರಿಸಲೆ ಬೇಕು.
ಇದೆಲ್ಲದರ ಮಧ್ಯೆ ಈ ಹೀನಾಯ ಕೃತ್ಯಗಳನ್ನು ಎಸಗುವ ಕೊಲೆಗಡುಕರು ಯಾವುದೇ ಒಂದು ಸಮುದಾಯ, ಸಂಪ್ರದಾಯ, ಜಾತಿ, ಧರ್ಮಗಳಿಗೆ ಸೀಮಿತರಾಗಿರುವದಿಲ್ಲ ಹಾಗೆಯೇ ಬಲಿಪಶು ಆದವರು ಸಹ ಯಾವುದೇ ಒಂದು ಸಮುದಾಯಕ್ಕೆ ಹೊಂದಿದವರು ಅಲ್ಲ. ಇದನ್ನು ಅರಿತು ಅರಿಯದೆ ಈ ಹೀನಾಯ ಕೃತ್ಯದ ಮೇಲೆಯೂ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗುತ್ತಿರುವದು ಬೇಸರ ಹಾಗು ಸಮಾಜಘಾತುಕ. ಇದನ್ನು ತಡೆಗಟ್ಟಬೇಕು.
ಧಾರವಾಡ ಜಿಲ್ಲೆಯ ವತಿಯಿಂದ ನಮ್ಮ ಜಿಲ್ಲೆ, ನಮ್ಮ ಕರ್ನಾಟಕ ನಾಡು ಹಾಗು ರಾಷ್ಟ್ರದ ಕೀರ್ತಿ ಮಹಿಳಾ ಸುರಕ್ಷತೆ ಅತ್ಯುನ್ನತ ಸ್ಥಾನ ಗಳಿಸಲು ಕೆಳಕಂಡ ರೀತಿಯಲ್ಲಿ ಕಾನೂನು ತಿದ್ದುಪಡಿ ತಂದು ಸುವ್ಯವಸ್ಥೆ ಕಾಪಾಡಬೇಕೆಂದು ಪ್ರತಿ ಭಾರತೀಯ ಪ್ರಜೆಯ ವತಿಯಿಂದ ತಮ್ಮಲ್ಲಿ ಕಳಕಳಿಯ ವಿನಂತಿ
ಅಮಾನುಷ ಕೃತ್ಯವೆಸಗುವ ತಪ್ಪಿತಸ್ಥರನ್ನು ವಶಕ್ಕೆ ಸಿಕ್ಕ ತಕ್ಷಣ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬೇಕು.
ಅಮಾನವೀಯ ಕೃತ್ಯವೆಸಗಿದ ತಪ್ಪಿತಸ್ಥ ಸಾಬೀತು ಆದ ತಕ್ಷಣ ಗಲ್ಲು ಶಿಕ್ಷೆ ಗಿಂತಲೂ ಮಿಗಿಲಾದ ಕಠಿಣ ಶಿಕ್ಷೆಯ ಹೊಸ ಕಾನೂನು ತರಬೇಕು.
ವಿಶ್ವೇಶ್ವರಿ ಹಿರೇಮಠ , ಇಸಾಬೆಲ್ಲಾ ಝೆವೀಯರ ಅಧ್ಯಕ್ಷರು ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಧಾರವಾಡ
ವೆಂಕಮ್ಮ ಪುಷ್ಪ ಸೋಮಾಪುರ
ಉಪಾಧ್ಯಕ್ಷರು ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಕರ್ನಾಟಕ .ಶಂಕರ ಹಲಗತ್ತಿ ಇದ್ದರು.