ಯಡಿಯೂರಪ್ಪ ಪ್ರಕರಣ ಪಾರದರ್ಶಕ ತನಿಖೆ -- ಸಚಿವ ಲಾಡ್
ಧಾರವಾಡ:--ಮಾಜಿ ಸಿ.ಎಮ್. ಯಡಿಯೂರಪ್ಪನವರ ಮೇಲೆ ದೂರು ದಾಖಲಾದ ಬಗ್ಗೆ ನನಗೆ ಮಾಹಿತಿ ಇದೆ . ಕಾನೂನು ಪ್ರಕಾರ ಕ್ರಮ ಆಗಲಿದೆ . ಇದರ ಬಗ್ಗೆ ಪಾರದರ್ಶಕ ತನಿಖೆ ಆಗಲಿ . ಯಾವುದು ಸರಿ ಯಾವುದು ತಪ್ಪು ಎಂದು ನಾನು ಹೇಳಲು ಆಗುವುದಿಲ್ಲ . ಯಡಿಯೂರಪ್ಪನವರ ಮೇಲೆ ನನಗೆ ಅಪಾರ ಗೌರವವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತಾಯಿಯೇ ದೂರು ಕೊಟ್ಟಿದ್ದಾಳೆ . ಯಾರೇ ದೂರು ಕೊಡಲು ಬಂದರೂ ಅದನ್ನು ತೆಗೆದುಕೊಳ್ಳಲೇಬೇಕು . ಅದು ಯಾವುದೇ ಸರ್ಕಾರವಿರಲಿ ದೂರು ತೆಗೆದುಕೊಳ್ಳಲೇಬೇಕು ಎಂದರು.
ಲೋಕಸಭಾ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು , ನಮ್ಮಲ್ಲಿ ಕೂಡ ಹೆಚ್ಚು ಪೈಪೋಟಿ ಇದೆ . ಇನ್ನೆರಡು ದಿನಗಳಲ್ಲಿ ನಮ್ಮ ಕ್ಷೇತ್ರದ ಟಿಕೆಟ್ ಫೈನಲ್ ಆಗಲಿದೆ ಎಂದರು . ಈ ಬಾರಿ ಜೋಶಿ ಅವರ ಲೀಡ್ ನೋಡಬೇಕಾದರೆ ಮೋದಿ ಅವರ ಬಗ್ಗೆ ಬರುವ ಪ್ರಚಾರದ ಟಿವಿಗಳನ್ನು ಬಂದ್ ಮಾಡಬೇಕು . ಒಂದು ತಿಂಗಳು ಟಿವಿ ಬಂದ್ ಮಾಡಿ ನೋಡಲಿ . ಟಿವಿಯಲ್ಲಿ ಎರಡೂ ಪಕ್ಷದ ಬಗ್ಗೆ ಸರಿಯಾದ ಸಮಯ ಸಿಗಬೇಕು . ಸರ್ಕಾರದಿಂದ ಸಾಕಷ್ಟು ಹಣ ಜಾಹೀರಾತಿಗೆ ಖರ್ಚು ಮಾಡುತ್ತಿದ್ದಾರೆ . ಆರೂವರೆ ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ . ಆದರೆ , ಮಾಧ್ಯಮದವರು ಅದನ್ನೆಲ್ಲ ತೋರಿಸುವುದಿಲ್ಲ ಎಂದರು .