ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಒಟ್ಟು ಅಂದಾಜು 5,60,500/- ರೂ ಕಿಮ್ಮತ್ತಿನ 100 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು 150 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ಜಪ್ತಿ ಮಾಡಿ, 4 ಜನ ಮನೆಕಳ್ಳರ ಬಂಧನ.
ಧಾರವಾಡ ಶಹರ ಪೊಲೀಸ ಠಾಣಾ ವ್ಯಾಪ್ತಿಯ ಧಾರವಾಡ ಮಹಾವೀರ ಕಾಲೋನಿ 05 ನೇ ಕ್ರಾಸ ಸಂಗೋಳ್ಳಿ ಹಾಲ್ ಹತ್ತಿರ ಇರುವ ಶೈಲಾ ಕೋಂ ಚಿದಾನಂದ ಕುಂಬಾರ ರವರು ದಿ 25.12.2023 ರಂದು ರಾಣಿಗೆ ಹಾಜರಾಗಿ ಅವರ ಮನೆಯಲ್ಲಿ ಕಳ್ಳತನವಾದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಇತರೇ ವಸ್ತುಗಳು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದರ ಪ್ರಕರಣವನ್ನು ಪತ್ತೆ ಮಾಡುವ ಕುರಿತು ರೇಣುಕಾ ಕ ಸುಕುಮಾರ ಪೋಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ, ರಾಜೀವ ಎಮ್ ಡಿ.ಸಿ.ಪಿ (ಕಾವಸು) ಹುಬ್ಬಳ್ಳಿ-ಧಾರವಾಡ, ರವೀಶ್ ಸಿ ಆರ್ ಡಿ.ಸಿ.ಪಿ (ಅವಸಂ) ಹಾಗೂ ಚ ಎಸ್. ಬಸವರಾಜ ಎಸಿಪಿ ಧಾರವಾಡ ಶಹರ ಉಪವಿಭಾಗ ಇವರುಗಳ ಮಾರ್ಗದರ್ಶನದಲ್ಲ ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಇವರ ನೇತೃತ್ವದಲ್ಲಿ ಚಂದ್ರಶೇಖರ ಮದರಖಂಡಿ ಪಿ.ಎಸ್.ಐ ಮತ್ತು ಸ್ವಾತಿ ಮುರಾಲಿ ಪಿ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಡಿ.ಬಿ.ತಾಳರ, ಎಮ್.ಟಿ.ಗದ್ದಿಕೇರಿ ಜಿ.ಜಿ.ಚಿಕ್ಕಮಠ ಎನ್.ಹೆಚ್.ಗುಡಿಮನಿ ಹಾಗೂ ಆರ್.ಎಸ್.ಪಾಟೀಲ್, ಐ.ಪಿ ಬರ್ಜಿ , ಬಿ. ಎಮ್. ಮೆಗುಂಡಿ ,ಎಸ್ ಎನ್ ಇರಾದರ , ಪಿ.ಎಸ್.ತಿರ್ಲಾಪೂರ , ಶ್ರೀಧರ.ವಿ.ವಡ್ಡರ, ಎಮ್.ಆರ್.ಜ್ಯಾಟಿ, ಮತ್ತು ತಾಂತ್ರಿಕ ವಿಭಾಗ ಆರ್.ಕೆ.ಭಡಂಕರ ಎಮ್.ಎಸ್.ಚಿಕ್ತಮಠ , ಆರ್.ಎಸ್.ಗೋಮಪ್ಪನವರ, ರವರುಗಳು ದಿ 09 ರಂದು ರಂದು 4 ಜನ ಆರೋಪಿತರಿಗೆ ದಸ್ತಗೀರ ಮಾಡಿ ಅವರಿಂದ ಅಂದಾಜು 5,50,000/- ರೂ ಕಿಮ್ಮತ್ತಿನ ಒಟ್ಟು 100 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಅಂದಾಜು 10,500/- ರೂ ಕಿಮ್ಮತ್ತಿನ 150 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ಹೀಗೆ ಒಟ್ಟು ಅಕ್ಕಿ: 5,60,500/- ರೂ ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಇವುಗಳಲ್ಲಿ ಧಾರವಾಡ ಶಹರ ಪೊಲೀಸ ಠಾಣೆಯ 1 ಪ್ರಕರಣ ಹಾಗೂ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ 1 ಪ್ರಕರಣ ಹೀಗೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿದ್ದು ಇರುತ್ತದೆ. ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರ ರವರು ಸದರಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಯಾ೯ಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿರುತ್ತಾರೆ.