11 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಮಹಿಳಾ ಸಾಂಸ್ಕೃತಿಕ ಸಮ್ಮೇಳನ

11 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಮಹಿಳಾ ಸಾಂಸ್ಕೃತಿಕ ಸಮ್ಮೇಳನ.
ಧಾರವಾಡ  09 : 
ಜಾನಪದ ಸಂಶೋಧನ ಕೇಂದ್ರ, ಧಾರವಾಡ ಹಾಗೂ ಗಾನ ಗಾರುಡಿಗ ಬಸವಅಂಗಯ್ಯ ಹಿರೇಮಠ
ಪ್ರತಿಷ್ಠಾನ, ಬೈಲೂರು ಸಹಯೋಗದಲ್ಲಿ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ
ಮಹಿಳಾ ಸಾಂಸ್ಕೃತಿಕ ಸಮ್ಮೇಳನ ಹಾಗೂ ಉಪನ್ಯಾಸ
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆ ಮಾಡಲಾಗಿದೆ ಎಂದು
ಜಾನಪದ ಸಂಶೋಧನ ಕೇಂದ್ರ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ 
ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 
ಉದ್ಘಾಟನೆಯನ್ನು ರಜಿಸ್ಟಾರ್, ಕಾನೂನು ವಿಶ್ವವಿದ್ಯಾಲಯ, ಧಾರವಾಡದ ಶ್ರೀಮತಿ ಅನುರಾಧ ವಸ್ತ್ರದ ಹಿರೇಮಠ ಆಗಮಿಸುವರು.
ಆಧುನಿಕ ಜಗತ್ತಿನಲ್ಲಿ ಮಹಿಳೆ ವಿಷಯದ ಬಗ್ಗೆ ಮಾತನಾಡುವರು.
ಮುಖ್ಯ ಅತಿಥಿಗಳಾಗಿ  ಸಿಂಡಿಕೇಟ್ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯ,
ಶ್ರೀಮತಿ ರತ್ನಾ ಪಾಟೀಲ ಮಹಿಳಾ ಶಿಕ್ಷಣದಲ್ಲಿ ಪ್ರಗತಿ ವಿಷಯವಾಗಿ ಮಾತನಾಡುವರು.ಉಪಾಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘದ
ಪ್ರೊ. ಮಾಲತಿ ಪಟ್ಟಣಶೆಟ್ಟ ಅಧ್ಯಕ್ಷತೆ ವಹಿಸುವರು.
ಉಪಸ್ಥಿತಿ ಅಧ್ಯಕ್ಷರು, ಜಾನಪದ ಸಂಶೋಧನ ಕೇಂದ್ರದ
ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಇರುವರು ಎಂದು ತಿಳಸಿದರು.

ಪತ್ರಿಕಾಗೋಷ್ಟಿಯಲ್ಲಿ  ನಾಗಭೂಷಣ ಹಿರೇಮಠ, ಆಶಾ ಸೈಯದ ಇದ್ದರು.
ನವೀನ ಹಳೆಯದು

نموذج الاتصال