ಕೇಂದ್ರದಲ್ಲಿರುವುದು ಗುರಿ ಸಾತ ಸರ್ಕಾರ -ಸಚಿವ ಜೋಶಿ
ಧಾರವಾಡ :
ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಚಾಲನೆ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ ಆಯುಕ್ತರು
ಧಾರವಾಡ : ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಹೊಸ ನಿಯಮಗಳನ್ನು ರೂಪಿಸಿಕೊಂಡಿದ್ದು, ಮಾಡುವುದನ್ನು ಹೇಳುವುದು ಮತ್ತು ಹೇಳಿದ್ದನ್ನೆ ಮಾಡಿ ತೋರಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಕಚೇರಿ ನವೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮುಂಚೆಯೇ ಸಂಬಂಧಪಟ್ಟ ಸಚಿವರು ಮತ್ತು ಅಽಕಾರಿಗಳು ಮೊದಲೆ ಆಯಾ ಕೆಲಸಗಳಿಗೆ ದಿನಾಂಕ ನಿಗದಿ ಮಾಡುತ್ತಾರೆ. ಯಾವ ದಿನದಂದು ಕಾಮಗಾರಿ ಆರಂಭಗೊಳ್ಳಬೇಕು ಮತ್ತು ಅದು ಮುಗಿದು ಲೋಕಾರ್ಪಣೆಗೊಳ್ಳಬೇಕು ಎನ್ನುವುದನ್ನು ನಿಶ್ಚಯಿಸಿರುತ್ತಾರೆ ಎಂದರು.
ಇದರ ಭಾಗವಾಗಿಯೇ ಇಂದು ದೇಶದಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಿತ್ತು. ರಾಮ ಮಂದಿರಕ್ಕೆ ಶಿಲಾನ್ಯಾಸವನ್ನು ನಾವೇ ಹಾಕಿದ್ದೇವು. ಅದರ ಉದ್ಘಾಟನೆಯನ್ನು ಕೂಡ ಇತ್ತೀಚೆಗೆ ನಾವೇ ಮಾಡಿದೇವು. ಸರ್ಕಾರಿ ಅಽಕಾರಿಗಳು ಮಾಡುವ ಕೆಲಸ ತಕ್ಕಮಟ್ಟಿಗೆ ಇರುತ್ತದೆ. ಅಗತ್ಯಕ್ಕೆ ತಕ್ಕಂತೆ ಅಽಕಾರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಕಟ್ಟಡ ನವೀಕರಣಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದೇವು. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುದಾನ ನೀಡಿದೆ. ಇನ್ನುಳಿದ ಎರಡನೇ ಹಂತದ ಕಾಮಗಾರಿಗೂ ಅಗತ್ಯ ಅನುದಾನ ಲಭಿಸಬೇಕಿದೆ. ಈ ನಿಟ್ಟಿನಲ್ಲಿಯೂ ಪ್ರಯತ್ನ ಮಾಡುತ್ತೇನೆ. ಗಿಲ್ಡ್‌ನಲ್ಲಿ ಪತ್ರಕರ್ತರು ಉತ್ತಮ ಚಟುವಟಿಕೆಗಳಿಗೆ ಮಾತ್ರ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ.ಬಸವರಾಜ್ ಹೊಂಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಪತ್ರಕರ್ತರಿಗೆ ಉತ್ತಮ ಪತ್ರಿಕಾ ಭವನ ಇರಲಿಲ್ಲ. ಕಳೆದ ಒಂದು ವರ್ಷದಲ್ಲಿ ಪತ್ರಿಕಾ ಭವನ ಸಾಕಷ್ಟು ಚಟುವಟಿಕೆ ಮಾಡುತ್ತಿದೆ. 4 ನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಸರ್ಕಾರಗಳು ಒದಗಿಸಬೇಕು ಎಂದರು.
ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.
ಪತ್ರಿಕೋಧ್ಯಮ ವಿದ್ಯಾರ್ಥಿಗಳು ಭಾಗಿ ಪತ್ರಿಕಾ ನವೀಕರಣ ಕಾಮಗಾರಿ ಚಾಲನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಕೆಸಿಡಿ,ಅಂಜುಮನ್,ಮಹಾಂತ ಕಾಲೇಜು, ಕಿಟೆಲ್ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಧಾರವಾಡ ಜರ್ನಅಸ್ಟ್ ಗಿಲ್ಡ್
ಕಾರ್ಯಕಾರಿ ಸಮಿತಿ ಸದಸ್ಯರಾದ
ಮಿಲಿಂದ ಪಿಸೆ,ಶಿವಲಿಂಗ ಪಾಟೀಲ
,ವಿಶ್ವನಾಥ ಕೋಟಿ,ಸದ್ದಾಂ ಮುಲ್ಲಾ
,ಮಹಾಂತೇಶ ಕಣವಿ,ರಾಜು ಕರಣಿ
ಮಲ್ಲಿಕಾರ್ಜುನ ಹಿರೇಮಠ ,ಹಾಗೂ ಸದಸ್ಯರಾದ ,ಧನ್ಯಪ್ರಸಾದ್
,ಶಶಿಧರ ಬುದ್ದಿ,ರಾಮಚಂದ್ರ ಕುಲಕರ್ಣಿ,ಪ್ರಶಾಂತ ಲೋಕಾಪುರ
,ಮಂಜುನಾಥ ಗಿರಿಯಾಲ,,ಪುಂಡಲೀಕ ಹಡಪದ ,ರವಿಕುಮಾರ ಕಗ್ಗಣ್ಣವರ ,ಮಲ್ಲಿಕಾರ್ಜುನ ಬಾಳನಗೌಡರ ,ಬಸವರಾಜ ಪಟಾತ ಇದ್ದರು.
ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಸುಧಿಂದ್ರ ಪ್ರಸಾದ ಕ್ರೀಡಾ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಮಹಾಂತೇಶ ಕಣವಿ ವಂದಿಸಿದರು.