ಕಳಸ ಗ್ರಾಮದಲ್ಲಿ
ಕೃಷಿ ಪತ್ತಿನ ಸಹಕಾರಿ ಸಂಘ ಕಾನೂನು ಬಾಹಿರ ಹಾಗೂ ಅವ್ಯವಹಾರ ಖಂಡಿಸಿ ಪ್ರತಿಭಟನೆ
ಧಾರವಾಡ
ಜಯಕರ್ನಾಟಕ ಸಂಘಟನೆಯ ಕಳಸ ಗ್ರಾಮ ಘಟಕದ ವತಿಯಿಂದ ಕೃಷಿ ಪತ್ತಿನ ಸಹಕಾರಿ ಸಂಘ ಕಳಸ, ಸದರಿ ಸಹಕಾರಿ ಸಂಘದಲ್ಲಿ ರೈತರಿಗಾಗಿ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗಾಗಿ ಅನೇಕ ರೀತಿಯ ಆರ್ಥಿಕ ಹಾಗೂ ಹಣಕಾಸಿನ ಸಾಲಸೌಲಭ್ಯಗಳು ಇರುವುದು ಎಲ್ಲರಿಗೂ ತಿಳಿದ ವಿಷಯ. ಈ ಸಾಲಸೌಲಭ್ಯಗಳು ಕೇವಲ ಗ್ರಾಮದಲ್ಲಿ ಸಿಗದೇ ನಮ್ಮ ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಕ್ಕೆ ಸಾಲಸೌಲಭ್ಯ ಒದಗಿಸಿದ್ದು ಹಾಗೂ ಗ್ರಾಮದಲ್ಲಿ ಸಾಮಾನ್ಯ ರೈತರಿಗೆ ಸಾಲಸೌಲಭ್ಯ ಕೊಡುವುದು ಬಿಟ್ಟು ಇನ್ನಿತರೇ ಬಡ್ಡಿ ವ್ಯವಹಾರ ಮಾಡುವವರಿಗೆ ಸಾಲ ಒದಗಿಸಿರುತ್ತಾರೆ. ಬ್ಯಾಂಕ್ ಗಳಲ್ಲಿ ಕಟಬಾಕಿದಾರರಿಗೆ ಸಾಲ ಒದಗಿಸಿರುತ್ತಾರೆ ಅವಶ್ಯಕತೆ ಇರುವವರಿಗೆ ಸಾಲ ಸಿಗದೇ, ಸಹಕಾರಿ ಸಂಘದ ಹಾಲಿ ನಿರ್ದೇಶಕರು ಅಧ್ಯಕ್ಷರು ಹಾಗೂ ಮಾಜಿ ನಿರ್ದೇಶಕರು ಅಧ್ಯಕ್ಷರು ತಮಗಿಷ್ಟ ಬಂದಷ್ಟು ಹಣವನ್ನು ಸಾಲದ ರೂಪದಲ್ಲಿ ಕಾನೂನುಬಾಹಿರವಾಗಿ ತೆಗೆದುಕೊಂಡಿರುತ್ತಾರೆ, ಹೀಗಾಗಿ ಸಾಲದ ಅವಶ್ಯಕತೆ ಇದ್ದವರಿಗೆ ಬೇರೆ ರೀತಿಯ ಕಾನೂನು ಹೇಳಿ ಸಾಲ ಕೊಡದಿರುವ ರೀತಿ ನಡೆದುಕೊಳ್ಳುತ್ತಿರುತ್ತಾರೆ. ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಾವಳಿ (ಬೈಲಾ) ಪ್ರಕಾರ ಉದ್ಯೋಗ ನೇಮಕಮಾಡದೆ ನಿವೃತ್ತಿ ಹೊಂದಿದವರ ಮತ್ತು ನಿವೃತ್ತಿ ಹೊಂದುವವರ ಮಕ್ಕಳಿಗೆ ಉದ್ಯೋಗದ ಅವಕಾಶ ನೀಡಿರುತ್ತಾರೆ ಇದು ಕಾನೂನು ಬಾಹಿರ ಆಗಿದ್ದು.
ಜಯಕನಾಟಕ ಸಂಘಟನೆ ವಿರೋದಿಸುತ್ತದೆ. ನಾವು ಕೃಷಿಪತ್ತಿನ ಸಹಕಾರಿ ಸಂಘ ಕಳಸ ಗ್ರಾಮದಲ್ಲಿ ಮನವಿಯನ್ನು ಕೊಟ್ಟಿದ್ದು ಇರುತ್ತದೆ ಆದರೂ ಇರತ್ತಕ್ಕಂತ ಅಧಿಕಾರಿಗಳು ಯಾವೂದ ರೀತಿ ಸ್ಪಂದನೆ ಮಾಡದೆ ಇದ್ದುದ್ದರಿಂದ ದಿ ೨೯ ರಂದು ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿಗೆ ಜಯ ಕನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕಳಸಗ್ರಾಮದಲ್ಲಿ ಮುತ್ತಿಗೆ ಹಾಕುವ ಮುಖಾಂತರ ಹೋರಾಟವನ್ನು ಹಮ್ಮಿಕೊಂಡಿರುತ್ತವೆ ಈ ಮುಖಾಂತರವಾಗಿ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳು ಧಾರವಾಡ ಇವರಿಗೆ ಮನವಿಯನ್ನು ಸಲ್ಲಿಸುತ್ತೇವೆ.
ಈ ನಿಟ್ಟಿನಲ್ಲಿ ನೀರ್ದೇಶಕ ಮಂಡಳಿ ರಾಜಿನಾಮೆ ಕೊಡದಿದ್ದಲ್ಲಿ ಮುಂದೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುತ್ತದೆ , ತಾಲೂಕು ದಂಢಾಧಿಕಾರಿಗಳು ಕುಂದಗೋಳ ಜಿಲ್ಲಾಧಿಕಾರಿಗಳು ಧಾರವಾಡ ತನಿಖೆಯನ್ನು ಮಾಡಿ ಸೂಕ್ತ ಕಾನೂನು ಕೈಗೋಳ್ಳಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾದ್ಯಕ್ಷರಾದ ಸುಧೀರ ಎಮ್ ಮುಧೋಳ ಹಾಗೂ ಕುಂದಗೋಳ ತಾಲೂಕ, ಶಿರಹಟ್ಟಿ ತಾಲೂಕು ಹಾಗೂ ಲಕ್ಷೇಶ್ವರ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು, ಕಳಸ ಗ್ರಾಮ ಘಟಕದ ಅಧ್ಯಕ್ಷರು ಸಮೀರ ಮುಲ್ಲಾ, ಸಂಜಿವ ಪೊತರಾಜ, ಅನ್ವರ, ಸ ಹಸನಅಲಿ, ರಮೇಶ ಹಂಗನಕಟ್ಟಿ, ರಬ್ಬಾನಿ ಗೌ ಮರ್ದಾನಿ, ಜಿಯಾವುಲ್ ಹಕ್ಕ ಕಮಡೊಳ್ಳಿ, ಮಲ್ಲನಗೌಡ ಪಾಟೀಲ, ರಬ್ಬಾನಿ ಮ ಮರ್ದಾನಿ, ರಾಜುಗೌಡ ಪಾ ಸುಲೆಮಾನ ಮೌ ಮರ್ದಾನಿ, ಸದ್ಧಾಮ ಅಲಿ ಮುಲ್ಲಾ, ದಾವಲ ಸವಣೂರ, ಮದಪ ರವಾಟನವರ, ಇಮಾಮಹುಸೆನ ಚಾಂದಖಾನವರ, ನಿಂಗಪ್ಪ ದೊಡಮನಿ, ಮಲಿ- ಮರ್ದಾನಿ, ಮಂಜುನಾಥ ಇಚ್ಚಂಗಿ, ದುರಗಪ್ಪ ಹಳ್ಳಿಕೇರಿ, ಇಸಮಾಯಿಲ್ ಮರ್ದಾನಿ, ಈ ಅ ಮಿರಾನವರ, ಬಸುವರಾಜ ಮೆಲ್ಮುರಿ, ಹಾಲಪ್ಪ ಬಂಢಾರಿ, ಶರಣಪ್ಪ ಬಸ್ ಉಸ್ಮಾನಗನಿ, ಪುಟ್ಟಪ್ಪ ಹರಿಜನ, ಮಾರುತಿ ಭಜಂತ್ರಿ, ಗುರುಪಾದಯ್ಯ ಹೀರ ವಿಯಾನಂದ ಮ ಹೀರೆಮಠ, ಮುಂತಾದವರು ಉಪಸ್ತಿತರಿದ್ದರು.