ಜೀವನದಲ್ಲಿ ಸೋಲು ಗೆಲವು ಸಾಮಾನ್ಯ ಎಲ್ಲವನ್ನೂ ಧನಾತ್ಮಕ ಚಿಂತನೆ ತೆಗೆದುಕೊಳ್ಳಿ --ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಜೀವನದಲ್ಲಿ ಸೋಲು ಗೆಲವು ಸಾಮಾನ್ಯ ಎಲ್ಲವನ್ನೂ ಧನಾತ್ಮಕ ಚಿಂತನೆ ತೆಗೆದುಕೊಳ್ಳಿ --ಸಚಿವೆ ಲಕ್ಷ್ಮಿ ಹೆಬ್ಬಾಳಕರ
  ಧಾರವಾಡ 03 : 
ದೇಶ ಕಟ್ಟುವಲ್ಲಿ ಇಂದಿನ  ಯುವ ಸಮುದಾಯದ ಮೇಲಿದ್ದು, ಇಂದಿನ ಯುವ ಸಮುದಾಯದವೇ ಭಾರತ ಇಂದು ವಿಶ್ವ ಗುರು ಆಗಲು ಕಾರಣವಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲಿಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಭಿಪ್ರಾಯಪಟ್ಟರು.

ಅವರು ಇಲ್ಲಿನ  ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ‌ಸ್ನಾತ್ತಕೊತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಬೆಂಗಳೂರು ಕಚೇರಿ ಸಹಯೋಗದಲ್ಲಿ ಜನವರಿ 3 ರಿಂದ 5 ರ ವರೆಗೆ ಹುಬ್ಬಳ್ಳಿ-ಧಾರವಾಡ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ 'ಸಾರ್ಥವಾಹ್' ಎಂಬ ವಿಶೇಷ   ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. 
   ಜೀವನದಲ್ಲಿ ಸೋಲು ಗೆಲವು ಸಾಮಾನ್ಯ ಎಲ್ಲವನ್ನೂ ಧನಾತ್ಮಕ ಚಿಂತನೆಯಿಂದ ತೆಗೆದುಕೊಳ್ಳಿ, ಮೊಬೈಲ್ ಬಳಕೆ ಕಡಿಮೆ ಮಾಡಿ. ಹಿಂದಿನ ನಡೆದು ಬಂದ ದಾರಿಯನ್ನು ಮರಿಯಬೇಡಿ. ಸವಾಲುಗಳನ್ನು ಏದುರಿಸಿ ಮುನ್ನಡಿಯಿರಿ ಎಂದರು. ಜೀವನದ ಅನುಭವವೇ ಎಲ್ಲದಕ್ಕೂ ಮೂಲ. ವಿದ್ಯಾರ್ಥಿಗಳ ಸಾಧನೆ ಮಾಡುವ ಕನಸ್ಸನ್ನು ಕಾಣಬೇಕು. ಕಾಲೇಜಿ ಅಧ್ಯಯನ ಮಾಡುವ ಹಂತ ಬಹಳ ಮುಖ್ಯವಾದ ಘಟ್ಟವಾಗಿದೆ ಎಂದರು.
    ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ‌ಸಾಧನೆ ಮಾಡಲು ಪ್ರಯತ್ನಿಸಿ, ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ನಿಮ್ಮ ತಂದೆ ತಾಯಿಗಳು ಶ್ರಮ ದೊಡ್ಡದು, ಅವರ ಶ್ರಮ ವ್ಯರ್ಥಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕೀವಿ ಮಾತು ಹೇಳಿದ ಅವರು ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ ಎಂದ ಅವರು  ಸಾವಿತ್ರಬಾಯಿ ಪುಲೆ ಜನ್ಮದಿನದಂದು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವದು ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು. 
    ಖ್ಯಾನ ನಟ, ನಿರ್ದೇಶಕ ಡಾ.ಯಶವಂತ ಸರದೇಶಪಾಂಡೆ  ಮಾತನಾಡಿ,  ಪ್ರತಿಭೆಯನ್ನು  ಬಿಂಬಿಸಿಕೊಳ್ಳಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಿ ಎಂದ ಅವರು ಕಲಿಕೆ ಜೊತೆಗೆ ಕಲೆ ಮತ್ತು ಸಾಂಸ್ಕೃತಿಕ ಹವ್ಯಾಸಿಗಳು ‌ಬೆಳಸಿಕೊಳ್ಳಿ ಎಂದರು. ಬದುಕಿನಲ್ಲಿ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದರು.
   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ವಹಿಸಿದ್ದರು
ಇದೇ ಸಂದರ್ಭದಲ್ಲಿ ಚಿತ್ತಾರ ಕಲಾ ಬಳಗವು ಏರ್ಪಡಿಸಿದ್ದ ಚಿತ್ರ ಕಲಾ ಪ್ರದರ್ಶನವನ್ನು ಸಚಿವರು ಉದ್ಘಾಟಿಸಿ ಕಲಾ ಕೃತಿಗಳನ್ನು ವಿಕ್ಷಿಸಿದರು.
     ಮೂರು ದಿನಗಳ ಸಾರ್ಥವಾಹ ಸಾಂಸ್ಕೃತಿಕ ಉತ್ಸವದಲ್ಲಿ ಹುಬ್ಬಳ್ಳಿ-ಧಾರವಾಡ ನಗರದ 35 ಕಾಲೇಜುಗಳಿಂದ ಸುಮಾರು 300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿದ್ದಾರೆ.
     ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಡಾ. ಮಂಜುಳಾ ಚಲುವಾದಿ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುಲಿ ಸಾಳುಂಕೆ,  ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ.ಜಗದೀಶ್ .ಕೆ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ವೀರೇಂದ್ರ ಯಾದವ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್.ರಾಜಶೇಖರ ಸೇರಿದಂತೆ ಕರ್ನಾಟಕ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ನವೀನ ಹಳೆಯದು

نموذج الاتصال