ದಿ 10 ರಂದು ವೈದ್ಯರಿಗಾಗಿ ಒಂದು ದಿನದ
ವಿಚಾರ ಸಂಕಿರಣ .
ಧಾರವಾಡ 08 :
ಸಂಸ್ಥೆಯ ಚಟುವಟಿಕೆಗಳ ಭಾಗವಾಗಿ ನಾವು ಹುಬ್ಬಳ್ಳಿ ಧಾರವಾಡ ಮತ್ತು ಸುತ್ತಮುತ್ತಲಿನ ENT ವೈದ್ಯರಿಗೆ ಶ್ರವಣ, ಧ್ವನಿ ಮತ್ತು ನುಂಗುವ ಅಸ್ವಸ್ಥತೆಗಳ ಪರೀಕ್ಷೆ ಮತ್ತು ನಿರ್ವಹಣೆ ಕುರಿತು ವಿಚಾರ ಸಂಕಿರಣವನ್ನು ದಿ 10 ಕೆಲಗೇರಿಯ
ಜೆ ಎಸ್ ಎಸ್ ಸಿಬಿಎಸ್ ಸಿ ಶಾಲೆಯಲ್ಲಿ ಆಯೋಜಿಸುತ್ತಿದ್ದೇವೆ ಎಂದು
ಪ್ರಾಂಶುಪಾಲ
ಡಾ. ಜಿಜೋ ಪಿ ಎಂ, ತಿಳಸಿದರು .
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಜೆ ಎಸ್ ಎಸ್ ಮಹಾವಿದ್ಯಾಪೀಠ ಮೈಸೂರು, ಉತ್ತರ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮಾತು ಭಾಷೆ ಮತ್ತು ಶ್ರವಣ ಸಮಸ್ಯೆಗಳನ್ನು ಕಂಡು ಧಾರವಾಡದಲ್ಲಿ ಎರಡನೇ ವಾಕ್ ಶ್ರವಣ ಸಂಸ್ಥೆಯನ್ನು 2014ರಲ್ಲಿ ಸ್ಥಾಪಿಸಿದ. ಉತ್ತರ ಕರ್ನಾಟಕದ ಜನರಿಗೆ ಸುಲಭವಾಗಿ ಈ ಸೇವೆ ಲಭಿಸಲು ಸಂಸ್ಥೆಯು ಕಿವಿ ಮತ್ತು ಮಾತಿನ ಪರೀಕ್ಷೆಗಳನ್ನು ಅತಿ ಕಡಿಮೆ ದರದಲ್ಲಿ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ B.ASLP ಕೋರ್ಸ್‌ಗಳು ಹಾಗು ಕ್ಲಿನಿಕಲ್ ಸೇವೆಗಳು ಎರಡು ಲಭ್ಯವಿದೆ, ಸುಮರು 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ದಿನಕ್ಕೆ ಸುಮರು 15 ಕ್ಕೂ ಹೆಚ್ಚಿನ ಮಾತು ಮತ್ತು ಶ್ರವಣ ಸಮಸ್ಯೆ ಹೊಂದಿರುವ ಜನ ಪರೀಕ್ಷೆಗೆ ಬರುತ್ತಾರೆ. ಸಂಸ್ಥೆಯಲ್ಲಿ ಹಲವಾರು ಸೇವೆಗಳು ಲಭ್ಯವಿದೆ. ಶಿಶುಗಳ ಶ್ರವಣ ತಪಾಸಣೆ, ವಯಸ್ಸಿನಾದ್ಯಂತ ಶ್ರವಣ ಪರೀಕ್ಷೆ, ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಶಾಲಾ ಮಕ್ಕಳ ತಪಾಸಣೆ, ಉಚಿತ ಶ್ರವಣ ಸಾಧನ ವಿತರಣೆ ಶಿಬಿರಗಳು, ಶ್ರವಣ ಸಾಧನದ ಫಿಟ್ಟಿಂಗ್, ಮಾತಿನ ತೊಂದರೆಗಳು, ನುಂಗುವ ಸಮಸ್ಯೆಗಳು, ಧ್ವನಿ ಸಮಸ್ಯೆಗಳು, ಹಾಗು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರೀಕ್ಷೆಗಳನ್ನು ಇಲ್ಲಿ ಮಾಡಲಾಗುತ್ತದೆ. ತೊದಲುವಿಕೆ, ಸ್ವಲೀನತೆ, ಪಾರ್ಶ್ವವಾಯು, ಕ್ಯಾನ್ಸರ್ ಮುಂತಾದ ವಿವಿಧ ಸಮಸ್ಯೆಗಳಿರುವ ಮಕ್ಕಳು ಮತ್ತು ವಯಸ್ಕರಿಗೆ ಸೂಕ್ತ ಚಿಕಿತ್ಸೆ ಇಲ್ಲಿ ನೀಡಲಾಗಿದೆ. ಧಾರವಾಡದಲ್ಲಿ ಲಭ್ಯವಿರುವ ಈ ಸಮಸ್ಯೆಗಳು ಮತ್ತು ಸೇವೆಗಳ ಬಗ್ಗೆ ಅರಿವು ತುಂಬಾ ಸೀಮಿತವಾಗಿದೆ. ಆದರಿಂದ ಸಾರ್ವಜನಿಕರಿಗೆ ತಿಳಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ವೈದ್ಯರು ನಮಗೆ ಈ ಸಮಸ್ಯೆಗಳಿರುವ ರೋಗಿಗಳನ್ನು ಪರೀಕ್ಷೆ ಮಾಡಲು ಮತ್ತು ಚಿಕಿತ್ಸೆ ನೀಡಲು ಕಳುಹಿಸುತ್ತಿದ್ದಾರೆ. ಆದ್ದರಿಂದ ನಮಗೆ ನಿರಂತರವಾಗಿ ಬೆಂಬಲ ನೀಡಿದ ಮತ್ತು ಸಹಾಯ ಮಾಡಿದ ಎಲ್ಲಾ ವೈದ್ಯರಿಗೆ ನಾವು ಧನ್ಯವಾದಗಳನ್ನು ಅರ್ಪಿಸಲು ಈ ಅವಕಾಶವನ್ನು ತೆಗೆದುಕೊಳ್ಳುತ್ತೇವೆ.
ಹುಬ್ಬಳ್ಳಿ ಧಾರವಾಡದಿಂದ ನಾವು ಅನೇಕ ENT ವೈದ್ಯರನ್ನು ಆಹ್ವಾನಿಸಿದ್ದೇವೆ ಮತ್ತು ಗದಗ, ಕಿಮ್ಸ್, ಹುಬ್ಬಳ್ಳಿ, ಬಾಗಲಕೋಟ, ಬೆಳಗಾವಿಯ ಅನೇಕ ವೈದ್ಯರು ಈಗಾಗಲೇ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ. ಈ ಪತ್ರಿಕಾಗೋಷ್ಠಿಯ ಮೂಲಕ ನಾವು ಹುಬ್ಬಳ್ಳಿ ಧಾರವಾಡ ಪ್ರದೇಶದ ಎಲ್ಲಾ ENT ವೈದ್ಯರನ್ನು ಸ್ವಾಗತಿಸುತ್ತೇವೆ ಮತ್ತು ನಿಮ್ಮೆಲ್ಲರ ಬೆಂಬಲದೊಂದಿಗೆ ನಮ್ಮ ಕಾರ್ಯಕ್ರಮ ಯಶಸ್ವಿಯಾಗಬೇಕೆಂದು ನಾವು ಬಯಸುತ್ತೇವೆ' ಎಂದರು , ಸಹಾಯಕ ಪ್ರಾಧ್ಯಾಪಕರು ಪವನ್ ಕಟ್ಟಿ ,ಪ್ರಾಧ್ಯಾಪಕ ದಶ೯ನ ಪತ್ರಿಕಾಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891