ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿಂದ ಸನ್ಮಾನ .
ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಧಾರವಾಡ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ 50 ಸಂಭ್ರಮದ ಕುವೆಂಪು ರವರ ಕಾವ್ಯಗಳಲ್ಲಿ ಕನ್ನಡದ ಕಂಪು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಹು-ಧಾ-ಮಹಾನಗರಪಾಲಿಕೆ ವತಿಯಿಂದ ನೀಡುವ ರಾಜ್ಯೋತ್ಸವದ ಧೀಮಂತ ಪ್ರಶಸ್ತಿ ಪುರಸ್ಕೃತರಾದ ಗಿನ್ನಿಸ್ ದಾಖಲೆಯ ವೀರ ಅಮರ ಕಾಳೆ
ಸೇರಿದಂತೆ ವಿಕ್ರಮ ನಾಡಿಗೇರ,ಕೆ ಎಸ್ ಕೌಜಲಗಿ,ನಿಧಿ ಸುಲಾಖೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ ವಹಿಸಿದ್ದರು.
ಅತಿಥಿಗಳಾಗಿ ಎಸ್ ಕೆ ಅದಪ್ಪನವರ, ಮಹಾಂತೇಶ ನರೇಗಲ್ಲ, ಶ್ರೀಮತಿ ಗೀತಾ ಕುಲಕರ್ಣಿ, ಕಸ್ತೂರಿ ದೇವಿ ಸಿಂದಗಿ. ಮಾರ್ತಾಂಡಪ್ಪ ಕತ್ತಿ, ಡಾ.ಜಿನದತ್ತ ಹಡಗಲಿ ಮೇಘಾ ಹುಕ್ಕೇರಿ ಆಗಮಿಸಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891