ಹುಬ್ಬಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರ.
ಹುಬ್ಬಳ್ಳಿ : ಶ್ರೀ ನಗರ ಸಾಂಸ್ಕೃತಿಕ ಸಮಿತಿ ಹಾಗೂ ಎಂ.ಎಂ.ಜೋಶಿ ನೇತ್ರಲಯ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ನಗರ ಬಡಾವಣೆ ಹಾಗೂ ಸುತ್ತ ಮುತ್ತಲಿನ ಜನರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮವನ್ನು ಪಾಲಿಕೆ ಸದಸ್ಯರಾದ ರಾಜಣ್ಣಾ ಕೊರವಿ ಉದ್ಘಾಟಿಸಿ ನೇತ್ರ ಬಹುಮುಖ್ಯವಾದ ಅಂಗ ಅದರ ಕಾಳಜಿ ನಿರಂತರವಾಗಿ ಮಾಡಬೇಕೆಂದು ತಿಳಿಸಿದರು, ಮತ್ತು ಜೋಶಿಯವರ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಸ್ಮರಿಸಿದರು ಕೇಶವ್ ದೇಶಪಾಂಡೆ, ಸತ್ಯಭೋದ ಮುಳಗುಂದ ಪ್ರದೀಪ್ ಮಣ್ಣೂರ ರಾಮಚಂದ್ರ ಹೆಗಡೆ, ಸತೀಶ್ ಸಿಡೇನೂರ, ರಮೇಶ್, ಪ್ರದೀಪ್ ಕುಲಕರ್ಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು ಸುಮಾರು ನೂರಾರು ಜನರು ತಮ್ಮ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಪಡೆದರು ಕಾರ್ಯಕ್ರಮವು ಶ್ರೀ ರಂಗ ಮುತಾಲಿಕ ದೇಸಾಯಿ ಅವರ ವಂದನಾರ್ಪಣೆ ಯೊಂದಿಗೆ ಮುಕ್ತಾಯವಾಯಿತು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891