ಗಣಪತಿ ಕಡಡೇಮನಿಗೆ ಡಾ. ಡಿ.ಸಿ.ಪಾವಟೆ ಪ್ರಶಸ್ತಿ*

*ಗಣಪತಿ ಕಡಡೇಮನಿಗೆ ಡಾ. ಡಿ.ಸಿ.ಪಾವಟೆ ಪ್ರಶಸ್ತಿ*
ಕ.ವಿ.ವಿ. ಸ್ನಾತಕೋತ್ತರ ಪಿ.ಜಿ. ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕ ಗಣಪತಿ ಕಡೆಮನಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯಾದ ಡಾ. ಡಿ.ಸಿ. ಪಾವಟೆ ಎನ್.ಎಸ್.ಎಸ್ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರು ಎನ್.ಎಸ್.ಎಸ್ ನಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಾಲಾಗಿದೆ ಎಂದು ಕವಿವಿ ಎನ್.ಎಸ್.ಎಸ್ ಸಂಯೋಜಕರಾದ ಡಾ. ಎಂ.ಬಿ. ದಳಪತಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗಣಪತಿ ಕಡೆಮನಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ. ಗುಡಸಿ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ, ಕುಲಸಚಿವರಾದ ಪ್ರೊ. ಚಂದ್ರಮ್ಮಾ, ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಪ್ರೊ. ವಾಯ್.ಎನ್.ಮಟ್ಟಿಹಾಳ, ಅನಸೂಯ ಕಾಂಬಳೆ  ಎನ್.ಎಸ್.ಎಸ್ ಪಿ.ಜಿ ಘಟಕದ ಅಧಿಕಾರಿಗಳಾದ ಪ್ರೊ. ಸಂಗಪ್ಪಾ ಚಲವಾದಿ, ಮಿತ್ರನಾದ ಕರ್ನಾಟಕ ಸರ್ಕಾರದ ರಾಜ್ಯ ಎನ್.ಎಸ್.ಎಸ್ ಪ್ರಶಸ್ತಿ ಪುರಸ್ಕೃತ ಶ್ರೀ ಸಂಜಯಕುಮಾರ ಯ ಬಿರಾದಾರ ಹಾಗೂ ಶಿಕ್ಷಕರು, ಊರಿನ ಹಿರಿಯರು, ಸ್ನೇಹಿತರು, ಸಂಬಂಧಿಗಳು ಅಭಿನಂದಿಸಿ ಶುಭಹಾರೈಸಿದ್ದಾರೆ.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ : 9945564891
ನವೀನ ಹಳೆಯದು

نموذج الاتصال