ನವಲಗುಂದ ತಾಲೂಾಕಿನ ಜನತೆ ಈ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಲು ಕೋರಿಕೆ

ನವಲಗುಂದ ತಾಲೂಾಕಿನ ಜನತೆ ಈ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಲು ಕೋರಿಕೆ 
   ಧಾರವಾಡ 03 :      ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮ ನವನಗರ, ಹುಬ್ಬಳ್ಳಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಧಾರವಾಡ ಹಾಗೂ ಜಯಪ್ರಿಯಾ ಮೆಡಿಕಲ್ ಫೌಂಡೇಶನ್, ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಹಕಾರಿ ಹಾಗೂ ಮಾಜಿ ಶಾಸಕರಾದ ದಿ.  ಶಂಕರಗೌಡರು ವಿ. ಪಾಟೀಲ (ಶಲವಡಿ) 21 ನೇಯ ಪುಣ್ಯಸ್ಮರಣೆ ಹಾಗಾ ಇವರ ಧರ್ಮಪತ್ನಿಯಾದ ದಿ. ಶ್ರೀಮತಿ ಲಕ್ಷ್ಮೀಬಾಯಿ ಶಂಕರಗೌಡರು ಪಾಟೀಲ ಇವರ 9 ನೇ ಪುಣ್ಯಸ್ಮರಣೆ ಹಾಗೂ ಅಖಂಡ ಧಾರವಾಡ ಜಿಲ್ಲಾ ಪಂಚಾಯತಿಯ ಮಾಜಿ ವಿರೋಧ ಪಕ್ಷದ ನಾಯಕರು ಹಾಗೂ ನವಲಗುಂದ ಪಿ.ಎಲ್.ಡಿ. ಬ್ಯಾಂಕಿನ ಮಾಜಿ ಅಧ್ಯಕ್ಷರಾದ ದಿ। ಶ್ರೀ ದೇಸಾಯಿಗೌಡ ಶಂ. ಪಾಟೀಲ ಇವರ 3ನೇ ಪುಣ್ಯಸ್ಮರಣೆ ಅಂಗವಾಗಿ 32 ನೇ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನೇತ್ರ ತಪಾಸಣೆ ಕಾರ್ಯಕ್ರಮ ಬುಧವಾರ ದಿ. 6 ಬೆಳಿಗ್ಗೆ 9 ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಶಲವಡಿ , ಗುರುವಾರ ದಿ. 7 ರಂದು ಶಸ್ತ್ರ ಚಿಕಿತ್ಸೆ ಜಯಪ್ರಿಯಾ ಮೆಡಿಕಲ್ ಫೌಂಡೇಶನ್, ಹುಬ್ಬಳ್ಳಿಯಲ್ಲಿ ನಡೆಸಲಾಗುವದು.

ಈ ಉಚಿತ ನೇತ್ರ ತಪಾಸಣಿ ಮತ್ತು ಶಸ್ತ್ರ ಚಿಕಿತ್ಸೆಯಲ್ಲಿ ಭಾಗವಹಿಸುವ ವೈದ್ಯಾಧಿಕಾರಿಗಳು

ಡಾ. ಶತಿ ಪಾಟೀಲ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ಧಾರವಾಡ ಡಾ. ಶಶಿಧರ ಜ. ಕಳಸೂರಮಠ, ಕಾರ್ಯಕ್ರಮ ಅಧಿಕಾರಿಗಳು, ಧಾರವಾಡ
ಡಾ. ಭೋವೇರ ಎಫ್. ಎಂ. ತಾಲೂಕ ಆರೋಗ್ಯ ಅಧಿಕಾರಿಗಳು, ನವಲಗುಂದ ಡಾ. ಅಶೋಕ ಅಗರವಾಲ, ಆಡಳಿತ ವೈದ್ಯಾಧಿಕಾರಿಗಳು, ಪಿ.ಎಚ್.ಸಿ., ಶಲವಡಿ ಶ್ರೀಮತಿ ಪದ್ಮಾವತಿ ರತನ, ನೇತ್ರಾಧಿಕಾರಿ, ಪಿ.ಎಚ್.ಸಿ. ಶಲವಡಿ

 ಮಹೇಶ ಕುಲಕರ್ಣಿ, ಸಮುದಾಯ ಉಸ್ತುವಾರಿ, ಜಯಪ್ರಿಯಾ ಮೆಡಿಕಲ್ ಫೌಂಡೇಶನ್, ಹುಬ್ಬಳ್ಳಿ ಸೂಚನೆಗಳು :

ಕಣ್ಣಿನಪೊರೆ ಇರುವ ವ್ಯಕ್ತಿಗಳನ್ನು ಮಾತ್ರ ಶಸ್ತ್ರ ಚಿಕಿತ್ಸೆಗೆ ಆಯ್ದಕೊಳ್ಳಲಾಗುವುದು. . ಇಂಪ್ಲಾಂಟೇಶನ್
    ಶಸ್ತ್ರಚಿಕಿತ್ಸೆಗೆ ಆಯ್ಕೆ ಆದವರಿಗೆ ಅತ್ಯಾಧುನಿಕ ಪದ್ಧತಿ ಐ.ಓ.ಎಲ್ಆಪರೇಶನ್ ಸಲುವಾಗಿ ದವಾಖಾನೆಯಲ್ಲಿ ದಾಖಲು ಮಾಡಿಕೊಳ್ಳಲಾಗುವುದು. ಯಾರಿಗೂ ಹಣವನ್ನು ನೀಡುವ ಅವಶ್ಯಕತೆ ಇಲ್ಲ,
 ಇದು ಸಂಪೂರ್ಣ ಧರ್ಮಾರ್ಥ, ಉಚಿತ ಶಿಬಿರ. ಮಧ್ಯವರ್ತಿಗಳು ಇಲ್ಲ.   ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರು ಆಧಾರ ಕಾಡ೯ ತೆಗೆದುಕೊಂಡು ಬರಬೇಕು,

ನವಲಗುಂದ ತಾಲೂಾಕಿನ ಜನತೆ ಈ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಪ್ರಯೋಜನ ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ಬಾಪುಗೌಡ ಪಾಟೀಲ, ರಾಜುಗೌಡ ಪಾಟೀಲ, ಪ್ರಭುಗೌಡ ಪಾಟೀಲ ಗುರುಪ್ರಸಾದ ದೇಸಾಯಿಗೌಡರು ಪಾಟೀಲ ನಿರ್ದೇಶಕರು, ಪಿ.ಎಲ್.ಡಿ. ಬ್ಯಾಂಕ, ನವಲಗುಂದ ಸದಸ್ಯರು ಮತ್ತು ಅಭಿಮಾನಿ ಬಳಗ

ವಿಶೇಷ ಸೂಚನೆ : ಚಿಕಿತ್ಸೆಗೆ ಒಳಪಟ್ಟಿರುವ ಫಲಾನುಭವಿಗಳನ್ನು ಹುಬ್ಬಳ್ಳಿಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಲಾಗಿದೆ ಮತ್ತು ಆ ಫಲಾನುಭವಿಗಳಿಗೆ ಉಪಹಾರ, ಊಟ ಮತ್ತು ಕನ್ನಡಕಗಳನ್ನು ದಿ. ಶಂಕರಗೌಡರ ಕುಟುಂಬದ ವತಿಯಿಂದ ವಿತರಿಸಲಾಗುವುದು.
9448494055, 9743369234
. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال