ರವಿಕುಮಾರ ಕಗ್ಗಣ್ಣವರ ಇವರಿಗೆ ಅತ್ಯುತ್ತಮ ಲೇಖನ ಪ್ರಶಸ್ತಿ

ರವಿಕುಮಾರ ಕಗ್ಗಣ್ಣವರ ಇವರಿಗೆ ಅತ್ಯುತ್ತಮ ಲೇಖನ ಪ್ರಶಸ್ತಿ.
ಧಾರವಾಡ :- ಕನ್ನಡಮ್ಮ ದಿನ ಪತ್ರಿಕೆಯ ಧಾರವಾಡ ಜಿಲ್ಲಾ ವರದಿಗಾರ ರವಿಕುಮಾರ ಕಗ್ಗಣ್ಣವರ ಇವರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೊಡ ಮಾಡುವ ೨೦೨೨/ ೨೩ ನೇ ಸಾಲಿನ ಅತ್ಯುತ್ತಮ ಲೇಖನ ವಾರ್ಷಿಕ ಪ್ರಶಸ್ತಿ ಲಭಿಸಿದೆ. 
ಸೌಲಭ್ಯ ಭಾಗ್ಯ ಕಾಣದ ರೋಗಗ್ರಸ್ಥ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾಗಿದೆ ಕಾಯಕಲ್ಪ ಎಂಬ ಕನ್ನಡಮ್ಮ ದಿನ ಪತ್ರಿಕೆ ವರದಿಗೆ ಫಲಶೃತಿ ಲಭಿಸಿತ್ತು. ಯಾವುದೋ ಒಂದು ಸಣ್ಣ ಆರೋಗ್ಯ ಸಮಸ್ಯೆಯಿಂದ ಬಳಲುವ ಬಡ ಕುಟುಂಬದ ಜನರು ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರೆ ಅಲ್ಲಿ ಸಿಬ್ಬಂದಿ ಕೊರತೆ ಮತ್ತು ಖಾಯಂ ವೈದ್ಯಾಧಿಕಾರಿ, ಲ್ಯಾಬ ಟೆಕ್ನಿಷಿಯನ್ ಇಲ್ಲದ ಕಾರಣ ರೋಗಿಗಳು ಅಗತ್ಯ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿಯಿತ್ತು ರೋಗದಿಂದ ನಿದ್ದೆಗೆ ಜಾರಿದ್ದ ಇಲಾಖೆಯನ್ನು ಎಚ್ಚರಿಸುವಲ್ಲಿ ಪತ್ರಕರ್ತ ವರದಿಗಾರ ರವಿಕುಮಾರ ಕಗ್ಗಣ್ಣವರ ಅವರು  ೨೦೨೩ ರ ಫೆ. ೧೬ ರಂದು ವಿಶೇಷ ಲೇಖನವನ್ನು ವರದಿ ಮಾಡಿದ್ದರು.
ಕನ್ನಡಮ್ಮ ದಿನ ಪತ್ರಿಕೆಯಲ್ಲಿ ಪ್ರಕಟವಾದ ಸಮಗ್ರ ವರದಿಯನ್ನು ಗಮನಿಸಿದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ರಾಷ್ಟಿçÃಯ ಆರೋಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ನಮ್ಮ ಕ್ಲಿನಿಕ್ ಯೋಜನೆ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳ ಗುತ್ತಿಗೆ ಆಧಾರದ ಮೇರೆಗೆನೇಮಕಾತಿ ಅಧಿಸೂಚನೆ ಹೊರಡಿಸಿ ಒಟ್ಟು ೧೫ ಹುದ್ದೆಗಳ ಪೈಕಿ ಮೆಡಿಕಲ್ ಆಫಿಸರ್ ೦೬, ನರ್ಸ ೦೬, ಪ್ರಯೋಗಶಾಲಾ ತಂತ್ರಜ್ಞರು ೦೩ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇರೆಗೆ ೧೫ ನೇ ಫೈನಾನ್ಸ್ ಕಮಿಷನ್ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ೨೦೨೩ ರ ಫೆಬ್ರುವರಿ ೨೮ ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗಿತ್ತು. ಈ ವರದಿ ಪರಿಗಣಿಸಿದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ೨೦೨೨/೨೩ ನೇ ಸಾಲಿನಲ್ಲಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ರವಿಕುಮಾರ ಕಗ್ಗಣ್ಣವರ ಭಾಜನರಾಗಿದ್ದು ಸಮಸ್ತ ಮಾಧ್ಯಮ ಬಳಗದ ವರದಿಗಾರರು, ಛಾಯಾಗ್ರಾಹಕರು see ಅವರಿಗೆ ಶುಭ ಕೋರಿದ್ದಾರೆ.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال