ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥ .
ಧಾರವಾಡ 02 : ನಗರದ ಪ್ರತಿಷ್ಠಿತ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯು
ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು
ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ವರ್ಷ ಹಾಗೂ ಪೂಜ್ಯ ಧಮ೯ಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ
ಅವರು 75ನೇ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 75 ಸಮಾಜಮುಖಿ ಕಾಯಕ್ರಮಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪೂಜ್ಯರ ಸಹಾಯ ಮುಟ್ಟುವಂತೆ ಜನತಾ ಶಿಕ್ಷಣ ಸಮಿತಿಯ ವಿವಿಧ ಅಂಗ ಸಂಸ್ಥೆಗಳು ವಿವಿಧ ಕಾಯ೯ಕ್ರಮ ಹಮ್ಮಿಕೊಂಡಿವೆ ಎಂದು ಜೆ.ಎಸ್.ಎಸ್ ಸಂಸ್ಥೆಯ ಕಾಯ೯ದಶಿ೯ ಡಾ.ಅಜೀರ್ಣ ಪ್ರಸಾದ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬೃಹತ ಸಮಾರಂಭ ಹಾಗೂ
50 ವರ್ಷಗಳ ನೆನಪಿಗಾಗಿ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ 500 ಸಸಿಗಳನ್ನು ನೆಡುವದು ಎಂದರು.
ಪ್ರತಿವರ್ಷ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 50 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸುಸಜ್ಜಿತ 400 ಮೀಟರ್ ಟ್ರ್ಯಾಕಿನ ಅಂತರ್‌ರಾಷ್ಟ್ರೀಯ ಮಟ್ಟದ ಆಟದ ಮೈದಾನ ನಿರ್ಮಾಣ, 50 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ. ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಸರಕಾರಿ ಶಾಲಾ ಶಿಕ್ಷಕರಿಗೆ ನುರಿತ ತರಬೇತುದಾರರಿಂದ ಉಚಿತ ಮನಶ್ವೇತನ ಕಾರ್ಯಾಗಾರ. ಸರಕಾರಿ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದೆ ಎಂದರು.
ದಿವಂಗತ ಹುಕ್ಕೇರಿಕರ ರಾಮರಾಯರಿಂದ 1941 ರಲ್ಲಿ ಸ್ಥಾಪಿಸಲ್ಪಟ್ಟ ಧಾರವಾಡದ ಜೆ.ಎಸ್.ಎಸ್. (ಜನತಾ
ಶಿಕ್ಷಣ ಸಮಿತಿ) ಶಿಕ್ಷಣ ಸಂಸ್ಥೆ, ಮನುಷ್ಯನ ಜೀವನದಲ್ಲಿ ಏಳು-ಬೀಳುಗಳಿರುವಂತೆ ಸಂಸ್ಥೆಯ ಚರಿತ್ರೆಯಲ್ಲಿ ಏಳು--ಬೀಳುಗಳು ಉಂಟಾದವು. ಜೆ.ಎಸ್.ಎಸ್. ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಈಡಾಗಿ 1973 ಆಕ್ಟೋಬರ್ 18 ರಂದು ಪೂಜ್ಯ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯಾಧ್ಯಕ್ಷತೆಯಲ್ಲಿ ಉದಯಿಸಿದ ನೂತನ ಆಡಳಿತ ಮಂಡಳಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಬಹುಶಃ ಆ ದಿನವೇ ಉತ್ತರ ಕರ್ನಾಟಕದ ಶೈಕ್ಷಣಿಕ ನಕಾಶೆ ಬದಲಾಯಿತು ಎಂದರೆ ತಪ್ಪಾಗಲಾರದು ಎಂದರು.
1973 ರಲ್ಲಿ 6-7 ಸಂಸ್ಥೆ ಹಾಗೂ 380 ವಿದ್ಯಾರ್ಥಿಗಳಿದ್ದ ಸಂಸ್ಥೆಗಳನ್ನು ಪೂಜ್ಯರು ವಹಿಸಿಕೊಂಡಾಗ ಸಂಸ್ಥೆಯ ಮೇಲಿದ್ದ ಆರ್ಥಿಕ ಸಾಲ, ಶಿಕ್ಷಕರಿಗೆ ನೀಡಬೇಕಾದ ಸಂಬಳ ಮುಂತಾದ ಸಮಸ್ಯೆಗಳನ್ನು ನಿಭಾಯಿಸುತ್ತ ನಡೆದು, ಹಂತ ಹಂತವಾಗಿ ಆರ್ಥಿಕ ಚೇತರಿಕೆ ಕಂಡ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ನೂತನ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕುತ್ತ ಹೋಯಿತು. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ನೈತಿಕ ಹಾಗೂ ಸಂಸ್ಕಾರಭರಿತ ಶ್ರೇಷ್ಟ ಮಟ್ಟದ ಶಿಕ್ಷಣ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಾ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಆದರ್ಶವಾಗಿ ರೂಪಿತವಾಗುವಂತೆ ನೋಡಿಕೊಂಡಿರುವುದು ವಿಶೇಷ. ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಧಾರ್ಮಿಕ ಕೇಂದ್ರವಾದ ಮುರಘಾಮಠ ಪೂಜ್ಯರ ಬೆನ್ನಿಗೆ ನಿಂತದ್ದನ್ನು ನಾವು ಮರೆಯುವಂತಿಲ್ಲ. ಜನರ ಬೇಡಿಕೆಯಂತೆ ನೂತನ ವಿದ್ಯಾಸಂಸ್ಥೆಗಳನ್ನು ಮರು ಸ್ಥಾಪಿಸುತ್ತಾ ಸಾಗಿದರು, ನಂತರ ದಿನಗಳಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಧಾರವಾಡಕ್ಕೆ ಆಗಮಿಸಿ ಆರೋಗ್ಯ ಹಾಗೂ ಉನ್ನತ ಶಿಕ್ಷಣದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಹೆಸರಿಗೆ ತಕ್ಕಂತೆ ಇರುವ ವಿದ್ಯಾಗಿರಿಯಲ್ಲಿ ಇದೀಗ ಕೆ.ಜಿ ಯಿಂದ ಪಿ.ಜಿ ಯವರೆಗೆ ಹಾಗೂ ಪಿ.ಹೆಚ್.ಡಿ. ದ್ಯಾಭ್ಯಾಸದವರೆಗೆ ಅವಕಾಶವಿದೆ. ಕಳೆದ 50 ವರ್ಷಗಳಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಹೆಸರಾಂತ ರಾಜಕಾರಣಿಗಳು, ಯುಧೀಶರು, ಸಮಾಜ ಸೇವಕರು, ವಿಜ್ಞಾನಿಗಳನ್ನು ಶ್ರೇಷ್ಟ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ ಎಂದರು.
ಜನತಾ. ಶಿಕ್ಷಣ ಸಮಿತಿ ಇದೀಗ ಧಾರವಾಡದ ವಿದ್ಯಾಗಿರಿಯ ಕ್ಯಾಂಪಸ್ ಸೇರಿದಂತೆ ಹುಬ್ಬಳ್ಳಿಯೂ ಒಳಗೊಂಡಂತೆ ಒಟ್ಟು 4 ಕ್ಯಾಂಪಸ್‌ನಲ್ಲಿ 22 ವಿದ್ಯಾ ಸಂಸ್ಥೆಗಳಲ್ಲಿ 22,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಒಟ್ಟು 1200 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಸೂರಜ್ ಜೈನ್, ಮಹಾವೀರ ಉಪಾಧ್ಯೆ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891