*ಸಾವಯವ ಉತ್ಪಾದನೆಗಳಿಂದ ದೇಶಿಯ ಉದ್ಯೋಗ ಹೆಚ್ಚಾಗುತ್ತದೆ; ದೇಶಿಯತೆ ನಮ್ಮತನ ಉಳಿಸುತ್ತದೆ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು*
*ಧಾರವಾಡ, ಜೂ.28:* ಸಾವಯವ ಉತ್ಪನ್ನಗಳಿಗೆ ಪೆÇ್ರತ್ಸಾಹ ನೀಡುವದರಿಂದ ದೇಶಿಯ ಉದ್ಯೋಗ ಮತ್ತು ರಾಷ್ಟ್ರದ, ಸಮಾಜದ ಆರೋಗ್ಯ ಹೆಚ್ಚುತ್ತದೆ ಎಂದು ಕೊಲ್ಹಾಪುರ ಕನ್ನೆರಿಯ ಸಿದ್ದಗಿರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಸರಕಾರಿ ನೌಕರ ಭವನದ ಸಾಂಸ್ಕøತಿಕ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರಾಜೀವ ದಿಕ್ಷೀತ ವಿಚಾರ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕ ಆಯೋಜಿಸಿದ್ದ ಶೀತಲತಂತ್ರಜ್ಞಾನ ಮೂಲಕ ಅಡುಗೆ ಗಾಣದ ಎಣ್ಣೆ ತಯಾರಿಕೆ ಉದ್ಯಮದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದರು.
ಕಲಬರಕೆ ಉತ್ಪನ್ನಗಳನ್ನು ಅದರಲ್ಲೂ ಕಡಿಮೆ ಗುಣಮಟ್ಟದ ಅಡುಗೆ ಎಣ್ಣೆ ಬಳಕೆಯಿಂದಾಗಿ ವಯೋಮಾನದ ತಾರತಮ್ಯವಿಲ್ಲದೆ ಎಲ್ಲರಲ್ಲೂ ಅನಾರೋಗ್ಯ ಕಾಡುತ್ತಿದೆ. ಅದನ್ನು ಗುಣಪಡಿಸಲು ಮತ್ತೇ ಇಂಗ್ಲಿμï ಮೆಡಿಸನ್ ಬಳಸಲಾಗುತ್ತಿದೆ. ಒಟ್ಟಾರೆ ದೇಶಿಯ ಉತ್ಪನ್ನ, ಔಷಧಿ, ಆಹಾರಗಳನ್ನು ಮರೆತು ಮುನ್ನಡೆದಿರುವುದು ನಮ್ಮ ಹಾಗೂ ನಮ್ಮತನದ ದಿವಾಳಿಗೆ ಸಾಕ್ಷಿ ಆಗುತ್ತಿದೆ ಎಂದು ಶ್ರೀಗಳು ವಿμÁದಿಸಿದರು.
ಕಳೆದ ಕೆಲವು ವರ್ಷಗಳಿಂದ ಶೀತಲ ತಂತ್ರಜ್ಞಾನ ಮೂಲಕ ಅಡುಗೆ ಗಾಣದ ಎಣ್ಣೆ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಸಾವಯವ ಮೂಲಕ ಬೆಳೆದ ಶೇಂಗಾ, ಕೊಬ್ಬರಿ, ಎಳ್ಳು, ಖುಷಿಬೆ, ಸಾಸಿವೆ, ಬದಾಮ ಸೇರಿದಂತೆ ಸ್ಥಳಿಯ ಕೃಷಿ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಇದರಿಂದ ನಮ್ಮ ರೈತರಿಗೆ ಆರ್ಥಿಕ ಅನುಕೂಲ ಹಾಗೂ ನಮ್ಮವರಿಗೆ ಉತ್ತಮ ಆರೋಗ್ಯ ಸಾಧ್ಯವಾಗುತ್ತದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ತಿಳಿಸಿದರು.
ರೈತರಾಗಲಿ, ವ್ಯಾಪಾರಿಗಳಾಗಲಿ ಆಸೆ ಪಡಬೇಕು ಹೊರತು ದುರಾಸೆ ಅಲ್ಲ. ಉತ್ಪನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಾಮಾಣಿಕತೆ ಇರಬೇಕು. ಮೋಸವಿರಬಾರದು. ಭಾರತವು ಪ್ರತಿಯೊಬ್ಬರಿಗೂ ತಮ್ಮ ಬದುಕು ಸುಂಧರಗೊಳಿಸಲು ಅವಕಾಶ ನೀಡಿದೆ. ಸ್ಥಳಿಯ ಉತ್ಪನ್ನ, ಸಂಪ್ರದಾಯ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಅಳವಡಿಸಿಕೊಂಡು ಉಳಿಸಿ, ಬೆಳೆಸಿದರೆ ಮಾತ್ರ ಭಾರತ ಭಾರತವಾಗಿ ಉಳಿಯುತ್ತದೆ ಎಂದು ಶ್ರೀಗಳು ತಿಳಿಸಿದರು.
ಅಡುಗೆ ಗಾಣದ ಎಣ್ಣೆ ತಯಾರಿಸಲು ಸಾವಯವ ಕೃಷಿ ಮಾಡಲು ಆಸಕ್ತ ರೈತರ ಒಕ್ಕೂಟ ರಚಿಸಬೇಕು. ಒಬ್ಬರೆ ಸಾವಯವ ಆರಂಭಿಸಿದರೂ ಆಸಕ್ತರನ್ನು ಸೇರಿಸಿಕೊಂಡು ಬೆಳೆಸಬೇಕು ಎಂದು ಸ್ವಾಮಿಜಿ ಹೇಳಿದರು.
ದೇಶದ ಆರೋಗ್ಯ ರಕ್ಷಣೆ ಜವಾಬ್ದಾರಿ ಗ್ರಾಮೀಣರಲ್ಲಿದೆ. ಕಷ್ಟವಾದರೂ ಸಹ ಇಷ್ಟಪಟ್ಟು ಮಾಡಬೇಕು ಎಂದರು.
ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಅವರು, ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳನ್ನು ಸತ್ಕರಿಸಿ, ಮಾತನಾಡಿ, ಸರಕಾರಿ ನೌಕರರು ದೇಶಿಯ ಉತ್ಪನ್ನ ಬಳಕೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದು, ಸಂಘದ ಆವರಣದಲ್ಲಿ ದೇಶಿಯ ಮತ್ತು ಸಾವಯವದ ಆಹಾರ ಉತ್ಪನ್ನಗಳ ಮಾರಾಟಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶವಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಗುಣಮಟ್ಟದ ಎಲ್ಲ ರೀತಿಯ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಶಾಶ್ವತ ಮಳಿಗೆ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು. ಕನ್ಬೆರಿ ಮಠದ ಶ್ರೀಗಳು ದೇಶಿಯತೆಗೆ ಒತ್ತು ಕೊಟ್ಟು ಜಾಗೃತಿ ಮೂಡಿಸುತ್ತಿದ್ದಾರೆ ಇದರಿಂದ ಕೃಷಿ, ಕೃಷಿಕರು ಮತ್ತು ಗ್ರಾಮಗಳು ಬಲವರ್ಧನೆ ಆಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸ್ವದೇಶಿ ಆಹಾರ ಉತ್ಪಾದನೆಯ ಹಿರಿಯ ಉದ್ಯಮಿ ಪುಣೆ ನಗರದ ಹನುಮಂತ ಮಾನೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಅಡುಗೆ ಗಾಣದ ಎಣ್ಣೆ ಉದ್ಯಮದ ಪ್ರಮುಖರಾದ ಪುರುμÉೂೀತ್ತಮ ಮಾಡಿಕರ ಸ್ವಾಗತಿಸಿದರು. ಸ್ವದೇಶಿ ಉದ್ಯಮಿ ಮಲ್ಲನಗೌಡ ಡಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕುಂಬಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮುಮ್ಮಿಗಟ್ಟಿಯ ಡಾ. ಬಸವಾನಂದ ಸ್ವಾಮಿಜಿ, ಉದ್ಯಮಿಗಳಾದ ಶ್ರೀಶೈಲ ಬದಾಮಿ, ರಾಜ್ಯ ನೌಕರ ಸಂಘದ ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ನೌಕರಭವನದ ಕಾರ್ಯದರ್ಶಿ ಗಿರೀಶ ಚೌಡಕಿ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು.
ಶೀತಲತಂತ್ರಜ್ಞಾನ ಮೂಲಕ ಅಡುಗೆ ಗಾಣದ ಎಣ್ಣೆ ತಯಾರಿಸುವ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಸುಮಾರು 200 ಜನ ರೈತರು ಭಾಗವಹಿಸಿದ್ದರು. ಕಾರ್ಯಗಾರದಲ್ಲಿ ಶೀತಲ ತಂತ್ರಜ್ಞಾನ ಮೂಲಕ ಅಡುಗೆ ಎಣ್ಣೆ ತಯಾರಿಕಾ ಉದ್ಯಮ ಸ್ಥಾಪಿಸಲು ಅಗತ್ಯವಿರುವ ಆರ್ಥಿಕ ಅನುಕೂಲ, ಬ್ಯಾಂಕ್ ಸಾಲ ಸೌಲಭ್ಯ, ಕೃಷಿ ಉತ್ಪನ್ನಗಳು, ಕಚ್ಚಾ ಪದಾರ್ಥಗಳು, ಕಾರ್ಮಿಕರ ಅಗತ್ಯತೆ ಮತ್ತು ಮಾರಾಟ ವ್ಯವಸ್ಥೆ ಕುರಿತು ನುರಿತ ಅನುಭವಿ ಉದ್ಯಮಿಗಳು ವಿಷಯ ಮಂಡಿಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ :9945564891.