ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ - ಶಿಕ್ಷಣ ಸಚಿವ ಮಧು ಬಂಗಾರಪ್ಪ ಸನ್ಮಾನ.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ - 
 ಶಿಕ್ಷಣ ಸಚಿವ ಮಧು ಬಂಗಾರಪ್ಪ ಸನ್ಮಾನ.
 
   ಧಾರವಾಡ :  ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ 
ಡಾ.ಲತಾ.ಎಸ್.ಮುಳ್ಳೂರ. ಅವರ ನೇತೃತ್ವದಲ್ಲಿ ನೂತನ ಶಿಕ್ಷಣ ಸಚಿವರಾದ  ಮಧು ಬಂಗಾರಪ್ಪನವರನ್ನು ಅವರ ನಿವಾಸದಲ್ಲಿ  ಸನ್ಮಾನಿಸಲಾಯಿತು.
      ಡಾ.ಲತಾ .ಮುಳ್ಳೂರ ಅವರು  ಶಿಕ್ಷಕಿಯರ ಬೇಡಿಕೆಗಳನ್ನು ಈಡೇರಿಸುವಂತೆ ಕುರಿತಂತೆ ಮಾತನಾಡಿ, ಹೆಚ್ಚುವರಿ, ಕೋರಿಕೆ ವರ್ಗಾವಣೆಯಲ್ಲಿ ಸೂಕ್ತ ಅವಕಾಶ, ಪರಸ್ಪರ ವರ್ಗಾವಣೆಗೆ ಅವಕಾಶ .PST ಶಿಕ್ಷಕರಿಗೆ ಬಡ್ತಿ, ಹಳೆ ಪಿಂಚಣಿ ಯೋಜನೆ ಜಾರಿ, ನಲಿ-ಕಲಿ  ತರಗತಿ 1 ಹಾಗೂ 2 ತರಗತಿ ಗೆ ಮಾತ್ರ ಸೀಮಿತ ಮಾಡಬೇಕು, ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಶಿಕ್ಷಕಿಯರ ದಿನಾಚರಣೆಯಾಗಿಆಚರಿಸಲು ಸರ್ಕಾರದಿಂದ ಆದೇಶ ಮಾಡಿಲು ಮನವಿ ಮಾಡಿದರು. 
   ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಪೂರೈಕೆ ಇನ್ನೂ ಮುಂತಾದ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
     ಸಚಿವರು ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.
    ಈ ಸಂದಭ೯ದಲ್ಲಿ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳಾದ  ಶ್ರೀಮತಿ ರಾಜೇಶ್ವರಿ ಸಜ್ಜೇಶ್ವರ ,  ಅನಸೂಯಾದೇವಿ  ಮಮತಾ ಬಂಗಾರಪೇಟ,  ,  ಡಾ.ರತ್ನಮ್ಮ,   ಪ್ರಭಾವತಿ,   ತೇಜೋವತಿ.ಕೆ.ಎಂ,  ಜಯಶ್ರೀ,   ಕೆ.ಜಯಶ್ರೀ,  ಅನ್ನಪೂರ್ಣ,   ಸುಮಲತಾ,   ಸವಿತಾ,   ಮಂಜುಳಾ.ಎನ್.ವಿ, , ನಂದಿನಿ,  ಸಿದ್ದಮ್ಮ ಉಪಸ್ಥಿತರಿದ್ದರು.

ಸುದ್ದಿಗಳು ಹಾಗೂ ಜಾಹಿರಾತುಗಳಿಗಾಗಿ ಸಂಪರ್ಕಿಸಿರಿ.:9945564891
ನವೀನ ಹಳೆಯದು

نموذج الاتصال