ಟ್ರಸ್ಟ್ ಗಳಿಗೆ ಹೆಚ್ಚಿನ ಅನುದಾನ
ಬಿಡುಗಡೆಗಾಗಿ ಸಚಿವರಿಗೆ ಮನವಿp
ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರನ್ನು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭೇಟಿ ಯಾಗಿ ಟ್ರಸ್ಟ್ ಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಡಾ ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಶಂಕರ ಕುಂಬಿ ಸಚಿವರ ಗಮನಕ್ಕೆತಂದು ಮನವಿ ಅಪಿ೯ಸಿದರು.
ಗದುಗಿನ ಪಂಚಾಕ್ಷರಿ ಗವಾಯಿ ಗಳ ರಾಷ್ಟ್ರೀಯ ಪ್ರಶಸ್ತಿ ನೀಡಲು ಹಿಂದಿನ ಸರಕಾರ ನಿರ್ವಹಿಸಿದ್ದರು. ಈ ವರ್ಷದಿಂದ ಸದರಿ ಪ್ರಶಸ್ತಿ ಯನ್ನು ರಾಷ್ಟ್ರ ಮಟ್ಟದ ಉತ್ತಮ ಸಂಗೀತಗಾರರನ್ನು ಆಯ್ಕೆ ಮಾಡಿ ನೀಡಬೇಕು ಎಂದು ಶಂಕರ ಕುಂಬಿ ಸಚಿವರ ಗಮನಕ್ಕೆತಂದು ಟ್ರಸ್ಟ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸಚಿವರು ಪಂಚಾಕ್ಷರಿ ಗವಾಯಿ ಗಳು ಸಾಕಷ್ಟು ಸಂಗೀತ ಗಾರರನ್ನು ತಯಾರಿ ಮಾಡಿದ್ದು ಅಲ್ಲದೆ ಸಾವಿರಾರು ಅಂಧರಿಗೆ ದಾರಿದೀಪ ವಾಗಿದ್ದು ಎಂದು ಹೇಳಿ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವದು ಯೋಗ್ಯ ವಿದೆ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ ದ ರಾ ಬೇಂದ್ರೆ ಟ್ರಸ್ಟ್ ನ ಅಧ್ಯಕ್ಷ ಡಿ ಎಂ ಹಿರೇಮಠ, ರಾಜಗುರು ಟ್ರಸ್ಟ್ ನ ಸದಸ್ಯ ಸಂಗೀತಾ ಕುಲಕರ್ಣ,ಹಾಲಭಾವಿ ಟ್ರಸ್ಟ್ ನ ಸುರೇಶ್ ಹಾಲಭಾವಿ, ಪಾರ್ವತಿ ಹಾಲಬಾವಿ,ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಹಾಗೂ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೆರಿ,ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂರ್ಪಕಿಸಿರಿ:9945564891