ಅಮ್ಮಿನಭಾವಿಯಲ್ಲಿ ಶಿವಲೀಲಾ ಕುಲಕರ್ಣಿ ಭರ್ಜರಿ ಮತಶಿಕಾರಿ*

*ಅಮ್ಮಿನಭಾವಿಯಲ್ಲಿ ಶಿವಲೀಲಾ ಕುಲಕರ್ಣಿ ಭರ್ಜರಿ ಮತಶಿಕಾರಿ*
ಧಾರವಾಡ: *ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ  ಹೂ ಮಳೆ ಸುರಿಸಿದ ಗ್ರಾಮಸ್ಥರು.*

 ಶಿವಲೀಲಾ ಕುಲಕರ್ಣಿ ಅವರು ಭರ್ಜರಿ ರೋಡ್ ಶೋ ನಡೆಸುವ ಮುಖಾಂತರ ಮತಶಿಕಾರಿ ನಡೆಸಿದರು. 

ಅಮ್ಮಿನಭಾವಿಯ ಪ್ರಮುಖ ರಸ್ತೆಗಳಲ್ಲಿ ಶಿವಲೀಲಾ ಕುಲಕರ್ಣಿ ಅವರು ಅದ್ಧೂರಿ ರೋಡ್ ಶೋ ನಡೆಸಿ ಮತಯಾಚನ ಮಾಡಿದರು. ಅಲ್ಲದೇ ಮನೆ, ಮನೆಗೆ ತೆರಳಿ ಕರಪತ್ರಗಳನ್ನು ನೀಡುವ ಮುಖಾಂತರ ವಿನಯ್ ಕುಲಕರ್ಣಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಶಿವಲೀಲಾ ಕುಲಕರ್ಣಿ ರೋಡ್ ಶೋ ವೇಳೆ ಕಾರ್ಯಕರ್ತರು ಪುಷ್ಪಮಳೆಗರೆದು ವಿನಯ್ ಕುಲಕರ್ಣಿ ಪರ ಘೋಷಣೆಗಳನ್ನು ಕೂಗಿದರು.

ನಂತರ ಮಾತನಾಡಿದ ಶಿವಲೀಲಾ ಕುಲಕರ್ಣಿ, ಅಮ್ಮಿನಭಾವಿಯಲ್ಲಿ ಈ ಹಿಂದೆ ಯಾವ್ಯಾವ ಕೆಲಸಗಳಾಗಿದ್ದವು, ಬಿಜೆಪಿ ಶಾಸಕರ ಅವಧಿಯಲ್ಲಿ ಯಾವ್ಯಾವ ಕೆಲಸಗಳು ಆಗಿವೆ ಎಂಬುದು ಜನರ ಮುಂದೆ ಇದೆ. ಸ್ವಂತ ಪ್ರಚಾರಕ್ಕೆ ಬರದ ಬಿಜೆಪಿ ಶಾಸಕರು ಸ್ಟಾರ್ ನಟರನ್ನು ಕರೆದುಕೊಂಡು ಬಂದು ಇಲ್ಲಿ ಪ್ರಚಾರ ಮಾಡಿ ಹೋಗಿದ್ದಾರೆ. ಇವರ ಕಾರ್ಯವೈಖರಿ ಹೇಗಿತ್ತು ಎಂಬುದು ಅಮ್ಮಿನಭಾವಿ ಗ್ರಾಮದ ಜನತೆಗೆ ಗೊತ್ತಿದೆ. ವಿನಯ್ ಕುಲಕರ್ಣಿ ಅವರು ಅಮ್ಮಿನಭಾವಿ ಗ್ರಾಮದ ಮೇಲೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದರು.

ಕ್ಷೇತ್ರದ ಎಲ್ಲೆಡೆ ವಿನಯ್ ಕುಲಕರ್ಣಿ ಅವರ ಪರವಾದ ಅಲೆಯೇ ಇದೆ. ಬಿಜೆಪಿ ಶಾಸಕರ ಕಾರ್ಯವೈಖರಿಗೆ ಈಗಾಗಲೇ ಜನ ಬೇಸತ್ತು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಯಾವುದೇ ಸ್ಟಾರ್ ಪ್ರಚಾರಕರು ಬಂದರೂ ವಿನಯ್ ಕುಲಕರ್ಣಿ ಅಬ್ಬರ ತಡೆಯಲು ಆಗುವುದಿಲ್ಲ ಎಂದರು. 

ಈ ರೋಡ್ ಶೋ ವೇಳೆ ಅಮ್ಮಿನಭಾವಿ ಗ್ರಾಮದ ನೂರಾರು ಜನ ಪಾಲ್ಗೊಂಡು ವಿನಯ್ ಕುಲಕರ್ಣಿ ಪರ ಘೋಷಣೆಗಳನ್ನು ಕೂಗಿದರಲ್ಲದೇ ಶಿವಲೀಲಾ ಕುಲಕರ್ಣಿ ಅವರ ರೋಡ್ ಶೋಕ್ಕೆ ಅಭೂತಪೂರ್ವ ಬೆಂಬಲ ನೀಡಿದರು.

CELL:9945564891
ನವೀನ ಹಳೆಯದು

نموذج الاتصال