*ಅರವಿಂದ ಬೆಲ್ಲದ ಗುದ್ದಲಿ,ಸಲಿಕೆ ಶಾಸಕರು*
ಮಾನ್ಯರೇ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡಗಳಲ್ಲಿ ಚುನಾವಣೆ ಪ್ರಚಾರದ ಗುದ್ದಲಿ ಪೂಜೆ ನಡೆಯುತ್ತಿವೆ ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ, ನೀರಾವರಿ ಇಲಾಖೆ ಬೇಕಾಬಿಟ್ಟಿ ಸುಮಾರು 300 ಕೋಟಿ ರೂ ಗಳ ಟೆಂಡರ್ ಕರೆಯಲಾಗಿದ್ದು ಗುತ್ತಿಗೆದಾರರಿಂದ ಯಾವುದೇ ಎಫ್ ಡಿ ಆರ್ ಪಡೆಯದೇ ವರ್ಕ್ ಆರ್ಡರ್ ಇಲ್ಲದೆ ಶಾಸಕರು ಅರವಿಂದ ಬೆಲ್ಲದ ರವರು ತಮ್ಮ ಕಾರಿನಲ್ಲಿಯೇ ಗುದ್ದಲಿ, ಸಲಿಕೆ ತೆಗೆದುಕೊಂಡು ಬಂದು ಚುನಾವಣೆ ಪ್ರಚಾರದ ಪುಜೆ ಮಾಡಿ ಸಾರ್ವಜನಿಕರ ಕಣ್ಣಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ ಇದರಿಂದ ಮುಂದೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸುವದು ಗ್ಯಾರಂಟಿ
15 ದಿನಗಳಲ್ಲಿ ಶಾಸಕ ಅರವಿಂದ್ ಬೆಲ್ಲದ ರವರ ಅವಧಿ ಮುಕ್ತಾಯ ವಾಗಲಿದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಪಕ್ಕಾ ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ತನಿಖೆ ಮಾಡಲಾಗುವುದು ಯಾವುದೇ ಕಾರಣಕ್ಕೆ ಸಾರ್ವಜನಿಕರ ತೆರಿಗೆಯ ಹಣವನ್ನು ಪೋಲು ಮಾಡಲು ಬಿಡುವುದಿಲ್ಲ
*ಅರವಿಂದ ಬೆಲ್ಲದ ಎಲೆಕ್ಷನ್ ಕಲೆಕ್ಷನ್ ಶಾಸಕರು*
ಉದಾಹರಣೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಧಾರವಾಡದ ಶಿವಾಜಿ ನಗರದ 35 ಲಕ್ಷ ರೂ ಗಳ ಟೆಂಡರ್ ಕರೆಯಲಾದ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಎಲ್ ಓ ವಿ ನೀಡಿ ಎಫ್ ಡಿ ಆರ್ ನೀಡಿದರು ವರ್ಕ್ ಆರ್ಡರ್ ನೀಡಲು ಶಾಸಕರ ಸಹಾಯಕ ಆಪ್ತರು 20% ಕೋಡಿ ಇಲ್ಲವಾದಲ್ಲಿ ಟೆಂಡರ್ ರೀ ಕಾಲ್ ಮಾಡುವುದಾಗಿ ನೇರವಾಗಿ ಗುತ್ತಿಗೆದಾರರಿಗೆ ಹೇಳುತ್ತಿದ್ದಾರೆ ಹಾಗೂ ಟೆಂಡರ್ ರೀ ಕಾಲ್ ಮಾಡಲು ಅಧಿಕಾರಿಗಳಿಗೆ ಅದೇಶಿಸುತ್ತಿದ್ದಾರೆ ಹೀಗೆ ಶಾಸಕರು ಅಧಿಕಾರಿಗಳ ಮೂಲಕ ಶಾಸಕರು ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ಅಧ್ಯಕ್ಷರು ನಾಗರಾಜ ಗೌರಿ ಆರೋಪಿಸಿದ್ದಾರೆ
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕವಿತಾ ಕಬ್ಬೆರ್, ಗಣೇಶ ಮುದೋಳ ಮುಖಂಡರು ಆತ್ಮನಂದ್ ತಳವಾರ್, ಚಂದ್ರು ಪೂಜಾರ, ಹರೀಶ್ ಮುಂದಿನಮನಿ ಇನ್ನೀತರರು ಉಪಸ್ಥಿತರಿದ್ದರು