*ರಾಯಚೋಟಿಯ ಶ್ರೀವೀರಭದ್ರಸ್ವಾಮಿ ಕ್ಷೇತ್ರಕ್ಕೆ 600 ಕಿ.ಮೀ. ಪಾದಯಾತ್ರೆ* : *ಶ್ರೀಗಳಿಂದ ಗೌರವ ಗುರುರಕ್ಷೆ*

*ರಾಯಚೋಟಿಯ ಶ್ರೀವೀರಭದ್ರಸ್ವಾಮಿ ಕ್ಷೇತ್ರಕ್ಕೆ 600 ಕಿ.ಮೀ. ಪಾದಯಾತ್ರೆ* : *ಶ್ರೀಗಳಿಂದ ಗೌರವ ಗುರುರಕ್ಷೆ* 
 *ಧಾರವಾಡ* : ಇಲ್ಲಿಗೆ ಸಮೀಪದ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪುರವಂತ ಮಲ್ಲಿಕಾರ್ಜುನ ಪ್ರಭಪ್ಪ ಬಳಿಗೇರ (51ವರ್ಷ) ಅವರು ಹುಬ್ಬಳ್ಳಿ ತಾಲೂಕು ಸುಳ್ಳದ ಹಿರಿಯ ಪುರವಂತ ದೇವೇಂದ್ರಪ್ಪ ವಿರುಪಾಕ್ಷ ಪತ್ತಾರ (61 ವರ್ಷ) ಅವರ ಜೊತೆಗೂಡಿ ಆಂಧ್ರಪ್ರದೇಶದ ರಾಯಚೋಟಿ ಶ್ರೀವೀರಭದ್ರಸ್ವಾಮಿ ಕ್ಷೇತ್ರಕ್ಕೆ ಕೈಕೊಂಡ 16 ದಿನಗಳ ಸುಮಾರು 600 ಕಿ.ಮೀ. ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನೆರವೇರಿದೆ.
ಸುಳ್ಳ ಗ್ರಾಮದ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದು ಆರಂಭಸಿದ್ದ ಈ ಪಾದಯಾತ್ರೆಯು ಅಣ್ಣಿಗೇರಿ, ಹುಲಕೋಟಿ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಚಳ್ಳಗುರ್ಕಿ, ಉರನಕೊಂಡ, ಶಿಲ್ಲಿವೆಲ್ಲು, ಬ್ರಾಹ್ಮಣಪಲ್ಲಿ, ಅನಂತಪುರ, ಸೂರ್ಯಚಂದ್ರಪುರಂ, ಕೃಷ್ಣಾಪುರಂ, ಕಾಳಸಮುದ್ರಂ, ಚಿಪ್ಪಲಮುಗುಡು, ಎರಿದಡ್ಡಿ, ಕಾಜುವಾರಿಪಲ್ಲಿ, ಎನ್.ಪಿ. ಕೊಂಟ, ಪ್ರಸಿದ್ಧ ವೆಲ್ಲಿಗಲ್ಲು ಡ್ಯಾಂ, ಗಾಲಿವಿಡು, ಕರೀಂರೆಡ್ಡಿಪಲ್ಲಿ, ರಾಮಾಪುರಂ, ಕಂದರಪಲ್ಲಿ ಮಾರ್ಗವಾಗಿ ಸುಮಾರು ೬೩ ಹಳ್ಳಿ-ಪಟ್ಟಣಗಳಲ್ಲಿ ಸಂಚರಿಸಿ ಫೆ. 22 ರಂದು ರಾಯಚೋಟಿ ಕ್ಷೇತ್ರವನ್ನು ತಲುಪಿ ಸಂಪನ್ನಗೊಂಡಿದೆ.

ಉಭಯತರು ಕಳೆದ ಸುಮಾರು  3 ದಶಕಗಳ ಕಾಲ ಪುರವಂತರಾಗಿ ಶ್ರೀವೀರಭದ್ರ ದೇವರ ಗುಗ್ಗಳ ಮಹೋತ್ಸವಗಳಲ್ಲಿ ಸೇವೆಗೈದಿದ್ದು, ಸುಮಾರು 6000 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ತಮ್ಮ ಸಂಕಲ್ಪ ಸೇವೆಯನ್ನು ಶ್ರೀವೀರಭದ್ರಸ್ವಾಮಿ ಸನ್ನಿಧಿಗೆ ಸಲ್ಲಿಸಿದ್ದಾರೆ.
 *ಗುರುರಕ್ಷೆಯ ಗೌರವ* : ಪಾದಯಾತ್ರೆಯನ್ನು ಯಶಸ್ಸಿಯಾಗಿ ಪೂರೈಸಿದ ದೇವೇಂದ್ರಪ್ಪ ಪತ್ತಾರ ಹಾಗೂ ಮಲ್ಲಿಕಾರ್ಜುನ ಬಳಿಗೇರ ಅವರಿಗೆ ಹುಬ್ಬಳ್ಳಿಯ ರಾಯಚೋಟಿ ಶ್ರೀವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಗುರುರಕ್ಷೆಯ ಗೌರವ ನೀಡಿ ಆಶೀರ್ವದಿಸಿದರು. ವೀರಯ್ಯ ಮುಪ್ಪಯ್ಯನವರಮಠ, ಗಿರೀಶಕುಮಾರ ಬುಡರಕಟ್ಟಿಮಠ, ಸಿ.ಎಂ. ಶಿವಶರಣ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಡಾ. ಗುರುಮೂರ್ತಿ ಯರಗಂಬಳಿಮಠ, ರಮೇಶಕುಮಾರ ಬುಡರಕಟ್ಟಿಮಠ, ವ್ಹಿ.ಎಸ್. ಸಾಲಿಮಠ ಇದ್ದರು.
 *ಅಭಿನಂದನೆ* : ಬಹುದೂರದ ಪಾದಯಾತ್ರೆಯಲ್ಲಿ ಯಶಸ್ವಿಯಾದ ಉಭಯ ಪುರವಂತರನ್ನು ಮರೇವಾಡ ಗ್ರಾಮದ ಹಿರಿಯ ಪುರವಂತ ಬಸವಂತಪ್ಪ ಕಮ್ಮಾರ ಅಭಿನಂದಿಸಿದ್ದಾರೆ.
------------------------------------------------------------
ಫೋಟೋ : 24 dwd (paadayaatre)
ಧಾರವಾಡ ತಾಲೂಕು ಹೆಬ್ಬಳ್ಳಿಯ ಮಲ್ಲಿಕಾರ್ಜುನ ಬಳಿಗೇರ ಹಾಗೂ ಹುಬ್ಬಳ್ಳಿ ತಾಲೂಕು ಸುಳ್ಳದ ದೇವೇಂದ್ರಪ್ಪ ಪತ್ತಾರ ಅವರು ಆಂಧ್ರಪ್ರದೇಶದ ರಾಯಚೋಟಿ ಶ್ರೀವೀರಭದ್ರಸ್ವಾಮಿ ಕ್ಷೇತ್ರಕ್ಕೆ ಕೈಕೊಂಡಿದ್ದ ಪಾದಯಾತ್ರೆಯನ್ನು ಯಶಸ್ಸಿಯಾಗಿ ಪೂರೈಸಿದ ಸಂದರ್ಭದಲ್ಲಿ ಅವರಿಗೆ ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಗುರುರಕ್ಷೆಯ ಗೌರವ ನೀಡಿ ಆಶೀರ್ವದಿಸಿದರು. ವೀರಯ್ಯ ಮುಪ್ಪಯ್ಯನವರಮಠ, ಗಿರೀಶಕುಮಾರ ಬುಡರಕಟ್ಟಿಮಠ, ಸಿ.ಎಂ. ಶಿವಶರಣ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಡಾ. ಗುರುಮೂರ್ತಿ ಯರಗಂಬಳಿಮಠ, ರಮೇಶಕುಮಾರ ಬುಡರಕಟ್ಟಿಮಠ, ವ್ಹಿ.ಎಸ್. ಸಾಲಿಮಠ ಇದ್ದರು.

ನವೀನ ಹಳೆಯದು

نموذج الاتصال