ರಾಷ್ಟ್ರೀಯ ಯುವ ಜನೋತ್ಸವದ ಪ್ರದರ್ಶನ “ಯುವ ಕೃತಿ” ಗೆ ಚಾಲನೆ: ಎಲ್ಲಾ ರಂಗಗಳಲ್ಲೂ ಯುವ ಸಮೂಹಕ್ಕೆ ಉತ್ತಮ ವೇದಿಕೆ – ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್*

*ರಾಷ್ಟ್ರೀಯ ಯುವ ಜನೋತ್ಸವದ ಪ್ರದರ್ಶನ  “ಯುವ ಕೃತಿ” ಗೆ ಚಾಲನೆ: ಎಲ್ಲಾ ರಂಗಗಳಲ್ಲೂ ಯುವ ಸಮೂಹಕ್ಕೆ ಉತ್ತಮ ವೇದಿಕೆ – ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್*
ಧಾರವಾಡ, ಜ, 13; ದೇಶದ ಯುವ ಸಮೂಹಕ್ಕೆ ಇಂದು ಎಲ್ಲಾ ವಲಯಗಳಲ್ಲೂ ಅತ್ಯುತ್ತಮ ವೇದಿಕೆ ಇದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಇಲ್ಲಿನ ಕೆ.ಸಿ.ಡಿ. ಮೈದಾನದಲ್ಲಿ ರಾಷ್ಟ್ರೀಯ ಯುವ ಜನೋತ್ಸವದ ಅಂಗವಾಗಿ ಏರ್ಪಡಿಸಿರುವ ವೈವಿಧ್ಯಮ ಆಹಾರ, ವಸ್ತ್ರ, ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ “ಯುವ ಕೃತಿ”ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಅತ್ಯುತ್ತಮ ವೇದಿಕೆಯನ್ನು  ಯುವ ಸಮೂಹ ಸಮರ್ಥವಾಗಿ ಬಳಸಿಕೊಂಡು ದೇಶಕ್ಕೆ ಕೀರ್ತಿ ತರಬೇಕು ಎಂದರು.
ಯುವ ಜನಾಂಗ ಕಲೆ, ಸಂಸ್ಕೃತಿ, ನೃತ್ಯ, ಕ್ರೀಡೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು. ಬಹುತೇಕ ಮಂದಿ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದಾರೆ. ಜೊತೆಗೆ ತಮ್ಮ ರಾಜ್ಯಗಳ ವೈಶಿಷ್ಟ್ಯತೆಗಳನ್ನು ಹೊತ್ತು ತಂದಿದ್ದಾರೆ. ಇದು ಉತ್ತಮ ವೇದಿಕೆಯಾಗಿದ್ದು, ಯುವ ಜನತೆ ತಮ್ಮ ಕೌಶಲ್ಯ, ಪ್ರತಿಭೆಯನ್ನು ಹೊರ ತರಲು ಇಂತಹ ಉಜ್ವಲ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಭಾರತ ಕಲೆ. ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಭಾರತ ಸಾಂಸ್ಕೃತಿಕ ಪರಂಪರೆಗೆ ಒತ್ತು ನೀಡುತ್ತಿದೆ. ಇಲ್ಲಿ ವಿಶೇಷ ಆಹಾರ ಮೇಳ ಕೂಡ ಇದ್ದು, ವಿಶೇಷ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಬಳಿಕ ನಿಮ್ಮ ಸೇನೆಯ ಬಗ್ಗೆ ತಿಳಿಯಿರಿ [ನೋ ಯುವರ್ ಆರ್ಮಿ] ಗ್ಯಾಲರಿ ಉದ್ಘಾಟಿಸಿದರು. ಸೃಜನ ರಂಗ ಮಂದಿರದಲ್ಲಿ ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಸೃಜನ ರಂಗ ಮಂದಿರದ ಎದುರುಗಡೆ ಬೆಂಗಳೂರಿನ ಜಕ್ಕೂರಿನಿಂದ ತರಲಾಗಿರುವ 32 ಅಡಿ ಕೃತಕ ಗೋಡೆ ಬಳಿ ಪರ್ವತಾರೋಹಣ ಶಿಬಿರಕ್ಕೆ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಶ‍್ರೀ ಪ್ರಹ್ಲಾದ್ ಜೋಶಿ ಅವರೊಂದಿಗೆ ರಾಜ್ಯಪಾಲರು ಉದ್ಘಾಟಿಸಿದರು.  
ಮಾನ್ಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ, ಪ್ರಧಾನಮಂತ್ರಿ ಅವರು ಯುವ ಸಮೂಹಕ್ಕೆ ಉತ್ತುಮ ಕರೆ ನೀಡಿದ್ದು, ಇದು ಯುವ ಸಮೂಹದ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ. ಅವಳಿ ನಗರದಲ್ಲಿ ಯುವ ಪ್ರತಿಭೆಗಳು, ಸಾಹಸ ಕ್ರೀಡೆಗಳು ಮಕ್ಕಳಿಗೆ ಉತ್ತೇಜನ ದೊರೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕ್ರೀಡಾ ಇಲಾಖೆ ಆಯುಕ್ತರಾದ ಮುಹೈ ಮುಹಿಲನ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು


SUBSCRIBE OUR STAR 74 NEWS CHANNEL
ನವೀನ ಹಳೆಯದು

نموذج الاتصال