*26ನೇ ರಾಷ್ಟ್ರೀಯ ಯುವ ಜನೋತ್ಸವದ ವಿಶೇಷತೆ-2*
*2 ನೇ ದಿನದ ವೈಶಿಷ್ಟ್ಯ:*
*ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರಿಂದ ಯುವ ಕೃತಿ ಉದ್ಘಾಟನೆ;* *ನವೋದ್ಯಮದ ಬಗ್ಗೆ ಭಾರತೀಯ ನೀತಿ ಕುರಿತ ಗೋಷ್ಠಿ ; ಉದ್ಯೋಗದ ಭವಿಷ್ಯ –* *ಕೈಗಾರಿಕೆ ನಾವೀನ್ಯತೆ ಕುರಿತ ವಿಷಯಾಧಾರಿತ ಸಾಂಸ್ಕøತಿಕ ಕಾರ್ಯಕ್ರಮ* *ಆಯೋಜನೆ.*
*ಧಾರವಾಡ (ಕರ್ನಾಟಕ ವಾರ್ತೆ) ಜ.12:* ಅವಳಿ ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವದ 2ನೇ ದಿನದ ಯುವ ಶೃಂಗ ಗೋಷ್ಠಿ, ವಿಷಯಾಧಾರಿತ ಸಾಂಸ್ಕøತಿಕ ವೈಶಿಷ್ಟ್ಯ, ಆಹಾರೋತ್ಸವ, ಸಿರಿಧಾನ್ಯ ಮೇಳಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ.
ಜ.13 ರ ಬೆಳಿಗ್ಗೆ 6 ರಿಂದ 8 ರ ವರೆಗೆ ಕವಿವಿ, ಕೃವಿವಿ ಹಾಗೂ ಗುರುತಿಸಿದ ವಿವಿಧ ಸ್ಥಳಗಳಲ್ಲಿ ಯೋಗ ಮತ್ತು ಧ್ಯಾನ ಶಿಬಿರ ಇರಲಿದೆ. ಬಳಿಕ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಅವರು ಧಾರವಾಡ ಕರ್ನಾಟಕ ಕಾಲೇಜು ಫುಟ್ಬಾಲ್ ಕ್ರೀಡಾಂಗಣದಲ್ಲಿ ಯುವ ಕೃತಿ ಉದ್ಘಾಟಿಸಲಿದ್ದಾರೆ. ಬಳಿಕ ಇದೇ ಕ್ರೀಡಾಂಗಣದಲ್ಲಿ 45 ಮಳಿಗೆಗಳನ್ನೊಳಗೊಂಡ ಆಹಾರೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಮಕ್ಷಮದಲ್ಲಿ ಮುಖ್ಯಮಂತ್ರಿಯವರು ಮತ್ತು ಕೇಂದ್ರ ಸಚಿವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಉಪಸ್ಥಿತರಿರಲಿದ್ದಾರೆ.
ಸಿರಿಧಾನ್ಯಗಳ ಮಳಿಗೆಗಳನ್ನು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಮತ್ತು ಶಾಸಕರಾದ ಅಮೃತ್ ದೇಸಾಯಿ ಉದ್ಘಾಟಿಸಲಿದ್ದಾರೆ.
10 ರಿಂದ 1 ಗಂಟೆವರೆಗೆ ಸೃಜನಾ ರಂಗಮಂದಿರದಲ್ಲಿ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ಅರವಿಂದ ಬೆಲ್ಲದ ಅವರು ಚಾಲನೆ ಕೊಡಲಿದ್ದಾರೆ. ಸುವರ್ಣ ಮಹೋತ್ಸವ ಭವನದಲ್ಲಿ ಜಾನಪದ ಗೀತೆ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10 ರಿಂದ 11 ಗಂಟೆ ಸಮಯದಲ್ಲಿ ಕರ್ನಾಟಕ ವಿವಿಯ ಹಸಿರು ಉದ್ಯಾನದಲ್ಲಿ ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು, ಯುವ ಕಲಾವಿದರ ಶಿಬಿರವನ್ನು ಶುಭಾರಂಭ ಮಾಡಲಿದ್ದಾರೆ.
ಕೃಷಿ ವಿವಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿರುವ ಯುವ ಶೃಂಗ ಸಭೆಯನ್ನು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಉದ್ಘಾಟಿಸಲಿದ್ದು, “ನವೋದ್ಯಮದ ಬಗ್ಗೆ ಭಾರತೀಯ ನೀತಿ” ಕುರಿತ ಗೋಷ್ಟಿ ಏರ್ಪಡಿಸಲಾಗಿದೆ. ಕರ್ನಾಟಕ ನವೋದ್ಯಮಗಳ ರಾಜಧಾನಿಯಾಗಿದ್ದು, ನವೋದ್ಯಮಗಳಲ್ಲಿರುವ ಅವಕಾಶಗಳು, ಯುವ ಸಮೂಹಕ್ಕೆ ಇದರಿಂದಾಗುವ ಲಾಭಗಳ ಕುರಿತು ಗೋಷ್ಠಿಯಲ್ಲಿ ವಿಷಯ ತಜ್ಞರು ಬೆಳಕು ಚೆಲ್ಲಲಿದ್ದಾರೆ.
ಮಧ್ಯಾಹ್ನ 2-30 ರಿಂದ ಸಂಜೆ 5 ಗಂಟೆವರೆಗೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ದೇಶೀಯ ಕ್ರೀಡಾ ಜಾಗೃತಿ ಕಾರ್ಯಕ್ರಮಗಳು ನಡೆಯಲಿದ್ದು, ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇರಳದ ಕಳರಿಪಯಟ್ಟು, ತಮಿಳುನಾಡಿನ ಸಿಲಂಬಮ್, ತೆಲಂಗಾಣದಿಂದ ಕಬಡ್ಡಿ, ಜಾಖರ್ಂಡ್‍ದ ಬಿಲ್ಲುಗಾರಿಕೆ, ಮಹಾರಾಷ್ಟ್ರದಿಂದ ಮಲ್ಲಕಂಬ, ಮಣಿಪುರದಿಂದ ಮುಖ್ಖಾ ಮತ್ತು ತಂಗಟಾ, ಅಸ್ಸಾಂ ಖೋಂ ಮ್ಲೈನೈ, ಪಂಜಾಬ್ ನ ಘಾಟ್ಕಾ ಕುರಿತಂತೆ 101 ಪ್ರತಿನಿಧಿಗಳು ತಮ್ಮ ವಿನೂತನ ಸಾಮಥ್ರ್ಯ ಪ್ರದರ್ಶಿಸಲಿದ್ದಾರೆ.
ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಕರ್ನಾಟಕ ವಿವಿಯಲ್ಲಿ ನಡೆಯುವ ಸಾಹಸ ಕ್ರೀಡಾ ಕಾರ್ಯಾಗಾರದಲ್ಲಿ ಪರ್ವತಾರೋಹಣ ಕಾರ್ಯಾಗಾರಕ್ಕೆ ವಿಧಾನಪರಿಷತ್ತಿನ ಸದಸ್ಯ ಎಸ್.ವಿ. ಸಂಕನೂರು, ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಮಾನಯಾನ ಕಾರ್ಯಾಗಾರಕ್ಕೆ ಶಾಸಕರಾದ ಅಬ್ಬಯ್ಯ ಪ್ರಸಾದ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಎಪಿಎಂಸಿ ಪಕ್ಕದಲ್ಲಿರುವ ಈಜು ಕೋಳದಲ್ಲಿ ಸ್ಕೂಬಾ ಡೈವಿಂಗ್ ಕಾರ್ಯಾಗಾರಕ್ಕೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ, ಧಾರವಾಡದ ಕೆಲಗೇರಿ ಕೆರೆಯಲ್ಲಿ ಅಕ್ವಾ ಸ್ಫೋಟ್ರ್ಸ್ ಗೆ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್, ಕರ್ನಾಟಕ ವಿವಿ ಆವರಣದಲ್ಲಿ ಮೌಂಟೇನ್ ಬೈಕ್ ರೈಡಿಂಗ್‍ಗೆ ಶಾಸಕರಾದ ಕುಸುಮಾವತಿ ಶಿವಳ್ಳಿ, ಕೆಸಿಡಿ ಗ್ರಂಥಾಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನಕ್ಕೆ ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಶಾಸಕರಾದ ಅಮೃತ್ ಅಯ್ಯಪ್ಪ ದೇಸಾಯಿ ಹಾಗೂ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿರುವ ಸೇನೆ ಮತ್ತು ಎನ್.ಸಿ.ಸಿ ಪ್ರದರ್ಶನಕ್ಕೆ ಶಾಸಕ ಸಿ.ಎಂ. ನಿಂಬಣ್ಣವರ್ ಚಾಲನೆ ನೀಡಲಿದ್ದಾರೆ.
ಸಂಜೆ 6 ಗಂಟೆಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆ ಕುರಿತಂತೆ ಜೈನ್ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ವಿಭಾಗದಿಂದ “ಉದ್ಯೋಗದ ಭವಿಷ್ಯ, ಕೈಗಾರಿಕಾ ನಾವಿನ್ಯತೆ” ಕುರಿತ ವಿಷಯಾಧಾರಿತ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ತರುವಾಯ ಯೆನೆಪೆÇೀಯ ಸ್ವಾಯತ್ತ ವಿವಿಯಿಂದ ಇದೇ ಆವರಣದಲ್ಲಿ ಭ್ರೂಣ ಹತ್ಯೆ ತಡೆ ಮತ್ತು ಹೆಣ್ಣು ಮಗುವಿನ ಸಬಲೀಕರಣ ವಿಷಯ ಸಂಭಂದಿಸಿದ “ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಗುವಿನ ಭವಿಷ್ಯ ಕುರಿತ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಬಳಿಕ ರಾಜಸ್ಥಾನ ಮೂಲದ ಮಾಮೆ ಖಾನ್ ತಂಡ ಬಾಲಿವುಡ್ ಗೀತೆಗಳು, ಕೋಕ್ ಸ್ಟುಡಿಯೋ ಸಂಗೀತ, ಜಾನಪದ, ಭಾರತೀಯ ಸಂಗೀತದ ಜೊತೆಗೆ ಸೂಫಿ ಹಾಡುಗಳನ್ನು ಹಾಡಲಿದ್ದಾರೆ. ಎಂ.ಜೆ. 5- ನೃತ್ಯ ತಂಡ ಹಾಗೂ ಮೈಕೆಲ್ ಜಾಕ್ಸನ್ ಪಕ್ಕಾ ಅಭಿಮಾನಿಗಳ ತಂಡದ ನೃತ್ಯ ಗಮನ ಸೆಳೆಯಲಿದೆ.
***
SUBSCRIBE OUR STAR 74 NEWS CHANNEL