ಹಿಂದಿ ಪ್ರಚಾರ ಸಭಾಡಿಸೆಂಬರ್ 10 ರಂದು ಪದವಿ ಪ್ರಧಾನ ಕಾರ್ಯಕ್ರಮ

ಹಿಂದಿ ಪ್ರಚಾರ ಸಭಾ
ಡಿಸೆಂಬರ್ 10 ರಂದು ಪದವಿ ಪ್ರಧಾನ ಕಾರ್ಯಕ್ರಮ
ಧಾರವಾಡ (ಕರ್ನಾಟಕ ವಾರ್ತೆ) ಡಿ.07: ನಗರದ  ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಎರಡು ವೈದ್ಯಕೀಯ ಕಾಲೇಜುಗಳಾದ ಶ್ರೀ. ಬಿ.ಡಿ. ಜತ್ತಿ ಹೋಮಿಯೋಪಥಿಕ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಶ್ರೀ. ಸಿ.ಬಿ ಗುತ್ತಲ್ ಆರ್ಯುವೇದಿಕ ಕಾಲೇಜು ಮತ್ತು ಆಸ್ಪತ್ರೆಯ ಪದವಿ ಪ್ರಧಾನ ಕಾರ್ಯಕ್ರಮವನ್ನು  ಡಿಸೆಂಬರ್ 10 ರಂದು ಬೆಳ್ಳಿಗೆ 10 ಗಂಟೆಗೆ  ಕೃಷಿ ವಿಶ್ವವಿದ್ಯಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರ  ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಚೇರಮನ್ ಈರೇಶ ಅಂಚಟಗೇರಿ ಅವರು ತಿಳಿಸಿದರು.
ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ  ಕರ್ನಾಟಕ  ರಾಜ್ಯಪಾಲರಾದ  ಥಾವರ ಚಂದ್ ಗೆಹ್ಲೂಟ್ ಅವರು ಭಾಗವಹಿಸುವರು. ಜೊತೆಗೆ ಕೇಂದ್ರೀಯ ಮಂತ್ರಿಗಳಾದ ಪ್ರಹ್ಲಾದ್ ಜೋಶಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂದು ಪದವಿ ಪ್ರಧಾನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದರು.
ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಅಂದು ರ್ಯಾಂಕ್ ಪಡೆದ ಒಟ್ಟು 50 ವಿದ್ಯಾರ್ಥಿಗಳನ್ನೊಳಗೊಂಡು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ 135 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.
 
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಎರಡು ವೈದ್ಯಕೀಯ ಕಾಲೇಜುಗಳಾದಂತಹ ಶ್ರೀ. ಬಿ.ಡಿ. ಜತ್ತಿ ಹೋಮಿಯೋಪಥಿಕ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಶ್ರೀ. ಸಿ.ಬಿ ಗುತ್ತಲ್ ಆರ್ಯುವೇದಿಕ ಕಾಲೇಜುಗಳನ್ನು ಅತ್ಯಂತ. ವ್ಯವಸ್ಥೆಯುತವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಕಾಲೇಜುಗಳಿಗೆ ಪ್ರವೇಶ ಒದಗಿಸಲಾಗುತ್ತಿದೆ ಎಂದರು.
     
     ಪತ್ರಿಕಾಗೋಷ್ಠಿಯಲ್ಲಿ ಅರುಣ ಜೋಶಿ, ಡಾ.ಎಸ್.ಬಿ.ಹಿಂಚಗೇರಿ, ಎಸ್.ರಾಧಾಕೃಷ್ಣನ್, ಡಾ.ವೈಷ್ಣವಿ ಡಿ.ಸತೀಶ, ಡಾ.ಎಸ್.ಟಿ. ಹೊಂಬಳ ಉಪಸ್ಥಿತರಿದ್ದರು.

STAR 74 NEWS CHANNEL SUBSCRIBE LIKE SHERE
ನವೀನ ಹಳೆಯದು

نموذج الاتصال