ತಂದೆ, ತಾಯಿ ಗುರು ನಿಮ್ಮ ಏಳಿಗೆಗಾಗಿ ಶ್ರಮಿಸುವವರು ಗೌರವ ಕೋಡಿ : ಮುಖ್ಯ ಮಂತ್ರಿ ಚಂದ್ರು.

ತಂದೆ, ತಾಯಿ ಗುರು ನಿಮ್ಮ ಏಳಿಗೆಗಾಗಿ ಶ್ರಮಿಸುವವರು ಗೌರವ ಕೋಡಿ : ಮುಖ್ಯ ಮಂತ್ರಿ ಚಂದ್ರು.        
ಧಾರವಾಡ :   ತಂದೆ, ತಾಯಿ ಮತ್ತು ಗುರುವಿಗೆ ಎಂದೂ ದ್ರೋಹ ಬಗೆಯಬೇಡಿ, ಅವರಿಗೆ ಗೌರವ ಕೊಡುವುದನ್ನು ಮರೆಯಬೇಡಿ. ಅವರೆಂದೂ ನಿಮಗೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು    ಮೇರು ನಟ ಮುಖ್ಯಮಂತ್ರಿ ಚಂದ್ರು ನುಡಿದರು 
ಅವರು       ಭಾರತ ಸಂವಿಧಾನ ದಿನ ಅಂಗವಾಗಿ  ಕಮಲಾಪುರದ   ಗುಬ್ಬಚ್ಚಿ ಗೂಡು ಶಾಲೆಯ ಮಕ್ಕಳಿಗೆ ಸಂವಿಧಾನದ ಮೇಲೆ ನಡೆದ ಕ್ವಿಜ್ ದಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಬಹುಮಾನ ನೀಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು, ಸಂವಿಧಾನದ ಆಶಯದಂತೆ ಮಕ್ಕಳು ಬೇಧಭಾವ ತೋರದೇ ಎಲ್ಲರೊಟ್ಟಿಗೆ ಬೆಳೆಯಿರಿ, ನಾನೂ ಸಾಮಾನ್ಯ ಕುಟುಂಬದಿಂದ ಬಂದವನಾಗಿದ್ದು, ಶಾಲೆಯಲ್ಲಿ ಕಡಿಮೆ ಅಂಕ ಪಡೆಯುತ್ತಿದ್ದೆ, ಫೇಲಾಗುತ್ತಿದ್ದೆ,ಆದರೆ ಕಲೆಯ ಬೆನ್ನುಹತ್ತಿ ದೇಶವೇ ಗಮನಿಸುವಂತೆ ಬೆಳೆದೆ ಎಂದರು , 
 ಎರಡುಬಾರಿ ಶಾಸಕನಾದೆ ಮೂರುಬಾರಿ ಎಮ್ ಎಲ್ ಸಿ ಆದೆ. ನಟನಾದೆ. ಎಲ್ಲ ಮುಖ್ಯಮಂತ್ರಿ ಪದನಾಮ  ಖಾಯಂ ಆಗಿ ಇರೋದಿಲ್ಲ   ಆದರೆ ನನ್ನ ನಟನೆಯ ಪಾತ್ರದಿಂದ  ನಾನು ಖಾಯಂಮಾಗಿ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುತ್ತಿದ್ದೇನೆ, 
ಮಕ್ಕಳು ಎಂದೂ ಸೋಲು ಒಪ್ಪಿಕೊಳ್ಳಬೇಡಿ. ಪ್ರಯತ್ನ ಮಾತ್ರ ನಿರಂತರ ಇರಬೇಕು. ಜಯದ ಮಾಲೆ ನಿಮ್ಮನ್ನು ಹುಡಿಕಿಕೊಂಡು ಬರುವುದು ,
 ನಿಮಗಾಗಿ ನಿಮ್ಮ ತಂದೆ ತಾಯಿಗಳು ಭರವಸೆ ಇಟ್ಟುಕೊಂಡಿರುವುದನ್ನು ಮರೆಯಬೇಡಿ. ಎಂದೂ  ಶಾಲೆಗೆ ನಿಮ್ಮ‌ಮನೆಗೆ ಕೀರ್ತಿ ತರುವಂತೆ ಬೆಳೆಯಿರಿ ಎಂದರು.
ಶಂಕರ ಹಲಗತ್ತಿ ಗುಬ್ಬಚ್ಚಿ ಗೂಡು ಶಾಲೆಯ ಅಧ್ಯಕ್ಷ, ಎಂ.ಎಂ.ಚಿಕ್ಕಮಠ, ಪ್ರಕಾಶ ಬಾಳಿಕಾಯಿ, ಸಿಕಂದರ ದಂಡೀನ, ಮಂಜುನಾಥ ಭಜಂತ್ರಿ, ವಿಜಯಲಕ್ಷ್ಮಿ ಸುಭಾಂಜಿ, ಲಕ್ಷ್ಮಿ ಜಾಧವ ಹಾಗೂ ಮಕ್ಕಳು ಕಾಯ೯ಕ್ರಮದಲ್ಲಿ  ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال