ಕುಗ್ರಾಮದಲ್ಲಿ ದೀಪದಿಂದ ದೀಪ ಬೆಳಗಿಸಿ ದೀಪಾವಳಿ ಆಚರಿಸಿದ : ಸವಿತಾ ಅಮರಶಟ್ಟಿ

ಕುಗ್ರಾಮದಲ್ಲಿ     ದೀಪದಿಂದ ದೀಪ ಬೆಳಗಿಸಿ ದೀಪಾವಳಿ ಆಚರಿಸಿದ :  ಸವಿತಾ ಅಮರಶಟ್ಟಿ     
ಧಾರವಾಡ 23 : ಧಾರವಾಡ ಜಿಲ್ಲೆಯ ತೇಗೂರ ಪಂಚಾಯತ  ದಿಂದ ಮೂರು ಕಿ ಮೀ ದೂರದಲ್ಲಿ ಇರುವ ಮದಿಕೊಪ್ಪ ಎಂಬ ಎಂಬತ್ತು ಮನೆಗಳಿರುವ ಪುಟ್ಟ ಗ್ರಾಮದಲ್ಲಿ, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶಟ್ಟಿ ದೀಪಾವಳಿ  ಆಚರಣೆ ಮಾಡಿದ್ದು ಗ್ರಾಮದ ಜನರಲ್ಲಿ ಹರುಷದ ವಾತಾವರಣ
 ಸ್ರಷ್ಟಿಸಿತ್ತು, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಲೆ, ಆರೋಗ್ಯ ಕೇಂದ್ರ, ಸಾರಿಗೆ ಇಂಥ ಮೂಲಭೂತ ಸೌಕರ್ಯ ವಂಚಿತ ಗ್ರಾಮ ಇದಾಗಿದ್ದು, ಈ ಎಲ್ಲ ಬವಣೆಗಳು ಇದ್ದರು ಸಹ  ಮದಿಕೊಪ್ಪ ಗ್ರಾಮದಿಂದ  ಭಾರತೀಯ ಸೇನೆಗೆ ಆಯ್ಕೆಯಾದ ಭೀಮಕ್ಕ  ಚವ್ಹಾಣ ನಮ್ಮ ಜಿಲ್ಲೆಯ ಕೀತಿ೯ ಹೆಚ್ಚಿಸಿದ್ದಾಳೆ ಎಂದರು, ಗ್ರಾಮ ದೇವಿ ಕರಿಯಮ್ಮ ದೇವಿ ಗೆ ಹಾರ ಹಾಕಿ ಉಡಿ ತುಂಬಿ , ದೀಪ ಬೆಳಗಿಸಿ ಗ್ರಾಮದ ಪ್ರತಿ ಮನೆಗೆ ತೆರಳಿ ಎರಡು ದೀಪ ಹಚ್ಚಿ, ಸಿಹಿ ವಿತರಿಸಿದರು.        
                         ಅಂಗನವಾಡಿ ಕೇಂದ್ರ ದ ಪುಟ್ಟ ಮಕ್ಕಳು ಕರಿಯಮ್ಮ ದೇವಸ್ಥಾನದ ಆವರಣದಲ್ಲಿ  ದೇಶಭಕ್ತಿ ಗೀತೆಯ ಧ್ವನಿ ಸುರಳಿಗೆ ಹೆಜ್ಜೆ ಹಾಕಿ ಕಾಯ೯ಕ್ರಮಕ್ಕೆ ಮೆರಗನ್ನು ತಂದು ಕೊಟ್ಟರು.      ವಿಶ್ವನಾಥ ಅಮರಶಟ್ಟಿ,      ಶೂಭಾ ನಾಗನೂರ, ಪ್ರಿಯಾ ಅಂಗಡಿ, ಲವಾ ಹುಲಗೊರ, ಮಾರುತಿ
 ಬಡವಣ್ಣೆವರ,ನೇತಾಜಿ ಪಾಟೀಲ್, ಸಿದ್ದಪ್ಪ ರತ್ನಪ್ಪನವರ,ಬಸಪ್ಪ ಗಾಯಕವಾಡ,ಬಸಪ್ಪ ನಾಗೂಜೆ,ಕ್ರಿಷ್ಣಾ ಗಾಯಕವಾಡ,ಹಾಗೂ ಗ್ರಾಮದ  ಸಮಸ್ತ ಗುರು ಹಿರಿಯರು ಕಾಯ೯ಕ್ರಮದಲ್ಲಿ  ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال