ವಿಶ್ವೇಶ್ವರಯ್ಯ ಜೀವನ ಮೌಲ್ಯ, ಅವರ ಬುದ್ಧಿವಂತಿಕೆ, ಶ್ರಮಿಕ ಮನೋಭಾವವನ್ನು ಯುವಜನತೆ ಅಳವಡಿಸಿಕೊಳ್ಳಲು ಸಂಜಯ ಕಬ್ಬೂರ ಕರೆ

ವಿಶ್ವೇಶ್ವರಯ್ಯ ಜೀವನ ಮೌಲ್ಯ, ಅವರ ಬುದ್ಧಿವಂತಿಕೆ, ಶ್ರಮಿಕ ಮನೋಭಾವವನ್ನು  ಯುವಜನತೆ ಅಳವಡಿಸಿಕೊಳ್ಳಲು  ಸಂಜಯ ಕಬ್ಬೂರ ಕರೆ        

  
 ಧಾರವಾಡ   : ವಿಶ್ವೇಶ್ವರಯ್ಯ ಜೀವನ ಮೌಲ್ಯ, ಅವರ ಬುದ್ಧಿವಂತಿಕೆ, ಶ್ರಮಿಕ ಮನೋಭಾವವನ್ನು ನಾವು ಅದರಲ್ಲೂ ಯುವಜನತೆ ಅನುಸರಿಸಬೇಕಾಗಿದೆ. ರೈತರು, ಕಾರ್ಮಿಕ ವರ್ಗ ಹೊಲದಲ್ಲಿ ಕೆಲಸ ಮಾಡುವ ಶ್ರಮಜೀವಿಗಳು ದೇಶದ ಆರ್ಥಿಕತೆಯನ್ನು ಹೆಚ್ಚಿಸುವವರು, ಅವರ ಪ್ರತಿನಿಧಿಯಾಗಿ ಸರ್ ಎಂ ವಿಶ್ವೇಶ್ವರಯ್ಯನವರು ಕಾಯ೯ಮಾಡಿದ್ದರು  ಎಂದು ಇಂಜಿನಿಯರ್  ಸಂಜಯ ಕಬ್ಬೂರ  ಹೇಳಿದರು
ಅವರು ನಗರದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜನಿಯರ್ಸ, ಲೋಕಲ್ ಸೆಂಟರ್ ಧಾರವಾಡ ವತಿಯಿಂದ ಕವಿವ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಂಡ ಡಾ.ಸರ್.ಎಮ್.ವಿಶ್ವೇಶ್ವರಯ್ಯನವರ ಅವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವೇಶ್ವರಯ್ಯ ರವರ ಕಾರ್ಯತಂತ್ರ ಆಡಳಿತ ವೈಖರಿ ಪ್ರಮುಖವಾದದು, ಶಿಕ್ಷಣ ನೀರಾವರಿ, ಕೃಷಿ, ಔದ್ಯಮಿಕ, ವಾಣಿಜ್ಯ, ಕೈಗಾರಿಕೋದ್ಯಮ, ಕಾರ್ಖಾನೆ, ವಿದ್ಯುತ್ ಸ್ಥಾವರ ಕನ್ನಡ ಭಾಷಾ ಕೊಡುಗೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಕವಿವಿಯ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ ಭಾರತ ರತ್ನ ವಿಶ್ವೇಶ್ವರಯ್ಯ ಅವರು ಜಗತ್ತು ಕಂಡ ಅದ್ಭತ ಎಂಜಿನಿಯರ್‌. ಅವರ ಕೊಡುಗೆಗಳು ಭಾರತಕ್ಕಷ್ಟೇ ಸೀಮಿತವಾಗಿಲ್ಲ, ವಿದೇಶಗಳಲ್ಲೂ ಅವರನ್ನು ನೆನೆಯುತ್ತಾರೆ. ಮುಂಬೈ ನಗರ ನಿರ್ಮಾಣಕ್ಕೆ ಅವರು ಮೂರು ಯೋಜನೆ ರೂಪಿಸಿದ್ದರು. ಗಂಗಾನದಿಗೆ ಅತ್ಯಂತ ಉದ್ದದ ಸೇತುವೆ ನಿರ್ಮಾಣಕ್ಕೆ ತಮ್ಮ 95ನೇ ವಯಸ್ಸಿನಲ್ಲೂ ನೀಲನಕ್ಷೆ ರೂಪಿಸಿದ್ದರು. ಪಂಚವಾರ್ಷಿಕ ಯೋಜನೆಯಲ್ಲಿ ಅವರ ಪಾತ್ರ ಪ್ರಮುಖವಾದುದು. ಇಡೀ ದೇಶದಲ್ಲಿ ಮೊದಲ ಬಾರಿಗೆ ಕೆಆರ್‌ಎಸ್‌ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್‌ ಅಳವಡಿಸಿದ್ದರು’ ಎಂದು ಹೇಳಿದರು.
ಅತಿಥಿಗಳಾದ ಕೈಗಾರಿಕಾ ನಿಗಮದ ನಿರ್ದೇಶಕರಾದ  ರಾಜು ಪಾಟೀಲ ಮಾತನಾಡಿ ಸೈದಾಪುರ ಗೌಡರ ಮನೆತನದ ಇಂಜಿನಿಯರ್
ಚೆನ್ನವೀರ ಗೌಡ ಪಾಟೀಲ್ ಅವರ ಧಾರವಾಡದ ನಿರ್ಮಾಣದ ಕುರಿತು ಮತ್ತು ಅವರ ಬಗ್ಗೆ ಮಾತನಾಡಿದರು.
ಇಂಜನಿಯರಿಂಗ್  ಅಸೋಸಿಯೇಷನ್ ಅಧ್ಯಕ್ಷರಾದ ಸುನೀಲ ಬಾಗೇವಾಡಿ ಮಾತನಾಡಿ ಮೈಸೂರನ್ನು ಜಗತ್ತಿನ ಶ್ರೇಷ್ಠ ರಾಜ್ಯವನ್ನಾಗಿ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನಿರ್ಮಿಸಿದ ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್‌ ಪ್ರಮುಖವಾಗಿವೆ. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಅವರು ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಆಧುನಿಕ ರಾಜ್ಯದಲ್ಲಿ ಅವರು ಶಿಲ್ಪಿಯಾಗಿ ಗುರುತಿಸಿಕೊಂಡಿದ್ದಾರೆ. ಶತಮಾನ ಕಾಲ ಜೀವಿಸಿದ ಅವರು ವಿಶ್ವಕ್ಕೆ ಮಾದರಿ ಸೇವೆ ಮಾಡಿದ್ದಾರೆ’ ಹಾಗಾಗಿ ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂದು ಹೇಳಿದರು. 
ಅಸೋಸಿಯೇಷನ್ ಇಂಜಿನಿಯರಗಳಾದ ವಿಜಯ್ ಹಳ್ಳಿಕೇರಿ, ಅಶೋಕ ಕೌಜಗೇರಿ, ರಾಜು ಇಟಗಿ, ಜುಬೇರ್ ಅಬ್ಬಿಹಾಳ,ಸತ್ಯನಾರಾಯಣ ಸಿಂಗ್,ಸಂಜಯ ಲೋಂಡೆ ಬಸವರಾಜ ಲಂಗೋಟಿ, ಮಂಜುನಾಥ ಸಿಂಪಿಗೇರ, ಬಸವರಾಜ ನರೇಗಲ, ವಿಜಯ ತೋಟಗೇರ, ಶಶಿಧರ ಚಕ್ರವರ್ತಿ, ಅಬುಲ್ ಹಸನ್, ರಿಯಾಜ್ ಕರಿಕಟ್ಟಿ, ಸುಮಿತ್ ಸುಣಗಾರ, ತಾಹೀರ್ ಹುಸೇನ, ದೀಪಕ್ ಕುಲಕರ್ಣಿ, ಸಂಶುದ್ದೀನ ದಿಡಗೂರು, ಪವನ್ ಬೆಟಗೇರಿ ಸೇರಿದಂತೆ ಇತರರು  ಕಾಯ೯ಕ್ರಮದಲ್ಲಿ ಇದ್ದರು.  ಕಬೀರ ನಧಾಫ್,  ಸಿದ್ದನಗೌಡ ಕೆ.ಪಾಟೀಲ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯ  ಇಂಜಿನಿಯರ್ ವಿಜಯೇಂದ್ರ ಪಾಟೀಲ ನಿರೂಪಿಸಿ, ಸಂಘದ ಕಾರ್ಯದರ್ಶಿ  ಅರುಣ ಶೀಲವಂತ ವಂದಿಸಿದರು.
ನವೀನ ಹಳೆಯದು

نموذج الاتصال