ಅತ್ಯುತ್ತಮ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ರಾಜ್ಯ ಪ್ರಶಸ್ತಿಯನ್ನು ಪ್ರದಾನ.
ಹುಬ್ಬಳ್ಳಿ : ಹುಬ್ಬಳ್ಳಿ ಜೈನ್ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾದ ಡಾ. ಎಂ ಎಸ್ ಹುಲಗೂರ ಅವರಿಗೆ ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ನೀಡಲಾಗಿದೆ. ಇವರು ಎನ್ ಎಸ್ ಎಸ್ ನಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಕೊಡ ಮಾಡುವ ಅತ್ಯುತ್ತಮ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ರಾಜ್ಯ ಪ್ರಶಸ್ತಿಯನ್ನು ಗೌರವಾನ್ವಿತ ರಾಜ್ಯಪಾಲರಾದ ತಾವರಚಂದ್ ಗೆಲೋಟ್ ಅವರು ದಿನಾಂಕ 10 ರಂದು ರಾಜ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ಈ ಪ್ರಶಸ್ತಿಯು ಫಲಕ ಮತ್ತು 10,000 ನಗದನ್ನು ಹೊಂದಿದ್ದು, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಮಾಯಾ ಕುಲಹಳ್ಳಿ ಅವರೊಂದಿಗೆ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಸಿ ನಾರಾಯಣ ಗೌಡ, , ಐಎಎಸ್ ಅಧಿಕಾರಿ ಗೋಪಾಲಕೃಷ್ಣ, ಎನ್ಎಸ್ಎಸ್ ನ ಪ್ರಾದೇಶಿಕ ನಿರ್ದೇಶಕರಾದ ಕೆ ವಿ ಖಾದ್ರಿ ನರಸಿಂಹಯ್ಯ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಲಿಂಗರಾಜ್ ಗಾಂದಿ ಹಾಗೂ ರಾಜ್ಯ ಎನ್ಎಸ್ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯ ಮತ್ತು ಡಾ. ಗೋವಿಂದ್ ಗೌಡ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೆ ಡಾ. ಎಂ ಎಸ್ ಹುಲಗೂರ ಅವರು ತಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಹಿಡಿದು ತಾವು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಿಗೆ ಹಲವಾರು ಸಾಮಾಜಿಕ ಕೆಲಸ-ಕಾರ್ಯಗಳಲ್ಲಿ ತೋಡಗಿ ಅದೇಷ್ಟೋ ಬಡವರಿಗೆ, ನೀರಾಶ್ರೀತರಿಗೆ ಸಹಾಯ, ಸಹಕಾರವನ್ನು ಮಾಡಿದ್ದಾರೆ. ಅದೇ ರೀತಿಯಾಗಿ ಹಲವಾರು ಹಳ್ಳಿ ಶಿಬಿರಗಳನ್ನು, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಆರ್. ಡಿ. ಪರೇಡ್ ಗಳಲ್ಲಿ ಒಬ್ಬ ಕಾರ್ಯಕ್ರಮ ಅಧಿಕಾರಿಗಳಿಗಿಂತಲೂ ಹೆಚ್ಚು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಸದಾ ಸ್ವಯಂ ಸೇವಕರಿಗೆ ಮಾರ್ಗದರ್ಶನವನ್ನು ನೀಡುತ್ತಾ ಅವರ ಏಳಿಗೆಗೆ ಕಾರಣಿಭೂತರಾಗಿದ್ದಾರೆ. ಎನ್.ಎಸ್.ಎಸ್ ನಲ್ಲಿ ವಿವಿಧ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿರುವುದರ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿರುವರು.
ಹೀಗೆ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾಗಿ, ಶಿಕ್ಷಕರಾಗಿ, ಒಬ್ಬ ಸಮಾಜ ಸೇವಕರಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಕಂಡು ಅದೇಷ್ಟೋ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ ಹಾಗೂ ಇವರಿಗೆ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರ ಕೊಡಮಾಡುವ ಎನ್.ಎಸ್.ಎಸ್ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೋ. ಕೆ.ಬಿ. ಗುಡಸಿ, ಜೈನ್ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಮಾಯಾ ಕುಲಹಳ್ಳಿ, ಧಾರವಾಡದ ಶಾಸಕರಾದ ಪ್ರಸಾದ್ ಅಬ್ಬಯ್ಯ, ಸಹೋದ್ಯೋಗಿಗಳು, ವಿದ್ಯಾರ್ಥಿ ಮಿತ್ರರು ಹಾಗೂ ಧಾರವಾಡದ ಗಣ್ಯವ್ಯಕ್ತಿಗಳೆಲ್ಲರು ಅಭಿನಂದಿಸಿದ್ದಾರೆ.