ಜನ ಕಲ್ಯಾಣೋತ್ಸವ ರಾಜ್ಯ ಮಟ್ಟದ ಕಥಾ ಸ್ಪರ್ಧೆ ಫಲಿತಾಂಶ

ಜನ ಕಲ್ಯಾಣೋತ್ಸವ ರಾಜ್ಯ ಮಟ್ಟದ ಕಥಾ ಸ್ಪರ್ಧೆ ಫಲಿತಾಂಶ
**********

ಯಶಸ್ವಿನಿ ಶ್ರೀಧರಮೂರ್ತಿ ಪ್ರಥಮ
ಸುನಂದಾ ಹಾಲಭಾವಿ ದ್ವಿತೀಯ
ಡಾ.ಪ್ರಕಾಶ ಖಾಡೆ ತೃತೀಯ
ಬೆಳಗಾವಿ: ಬೆಳಗಾವಿಯ ಪ್ರಾದೇಶಿಕ ಪತ್ರಿಕೆ ಹಸಿರು ಕ್ರಾಂತಿ ಸಂಸ್ಥಾಪಕರೂ,ರೈತ ನಾಯಕರೂ ಆಗಿದ್ದ ದಿ. ಕಲ್ಯಾಣರಾವ್ ಮುಚಳಂಬಿ ಸಂಸ್ಮರಣಾರ್ಥ ನಡೆಯಲಿರುವ ಜನಕಲ್ಯಾಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಅಜ್ಜಿಬಳದ ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ. 

ಅದರಂತೆ ಬೆಳಗಾವಿಯ ಹಿರಿಯ ಕತೆಗಾರ್ತಿ ಸುನಂದಾ ಹಾಲಭಾವಿ ಅವರು ಎರಡನೇ ಬಹುಮಾನಕ್ಕೆ ಅರ್ಹರಾಗಿದ್ದಾರೆ. ಬಾಗಲಕೋಟೆಯ ಹಿರಿಯ ಜನಪದ ತಜ್ಞ ಡಾ.ಪ್ರಕಾಶ ಖಾಡೆಯವರು ತೃತೀಯ ಬಹುಮಾನ ಪಡೆದಿದ್ದಾರೆ. ಬಹುಮಾನವು ಕ್ರಮವಾಗಿ 5,000 ರೂ, 3,000 ರೂ ಮತ್ತು 2,000 ರೂ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನ ಒಳಗೊಂಡಿರುತ್ತದೆ‌. ಇದೇ ಅಕ್ಟೋಬರ್ ತಿಂಗಳಲ್ಲಿ ನಡೆಯುವ ದಿ. ಶ್ರೀ ಕಲ್ಯಾಣರಾವ್ ಮುಚಳಂಬಿ ಸಂಸ್ಮರಣ ಕಾರ್ಯಕ್ರಮ ಸಂದರ್ಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುತ್ತದೆ‌.

ಜೊತೆಗೆ ತೀರ್ಪುಗಾರರ ಮೆಚ್ಚುಗೆ ಪಡೆದ ವೀಣಾ ಪಿ ಹರಿಹರ, ದ್ವಾರನಕುಂಟೆ ಪಿ ಚಿತ್ರಣ್ಣ, ಡಿ.ಎಂ.ನದಾಫ್, ಎಸ್.ಎಲ್.ವರಲಕ್ಷ್ಮಿ, ಲಿಂಗರಾಜ್ ಸೊಟ್ಟಪ್ಪನವರ, ಹಾಗೂ ಸಮಾಧಾನಕರ ಬಹುಮಾನ ಪಡೆದ ಕುಮಾರ ಬೇಂದ್ರೆ, ಸಾವಿತ್ರಮ್ಮ ಓಂ.ಅರಸಿಕೆರೆ,  ನಳಿನಿ ಭೀಮಪ್ಪ, ಲಲಿತಾ ಎನ್ ಪಾಟೀಲ ಮತ್ತು ಗೌರಿ ಚಂದ್ರಕೇಸರಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುತ್ತದೆ.

ಜಲತ್ಕುಮಾರ ಪುಣಜಗೌಡ, ಸಂಪತ್ಕುಮಾರ ಮುಚಳಂಬಿ, ರಾಜೇಂದ್ರ ಪಾಟೀಲ, ಸ‌.ರಾ‌.ಸುಳಕೂಡೆ, ಬಸವರಾಜ ಗಾರ್ಗಿ, ಮಹಾಂತೇಶ ಮೆಣಸಿನಕಾಯಿ ಒಳಗೊಂಡ ತೀರ್ಪುಗಾರರ ಸಮಿತಿ ಬಹುಮಾನಿತರನ್ನು ಅಭಿನಂದಿಸಿದ್ದು ಕಾರ್ಯಕ್ರಮ ದಿನಾಂಕ ನಿಗದಿಯಾಗುತ್ತಲೇ ಎಲ್ಲ ಬಹುಮಾನಿತರಿಗೆ ವೈಯಕ್ತಿಕ ಮಾಹಿತಿಯನ್ನೂ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ‌.
ನವೀನ ಹಳೆಯದು

نموذج الاتصال