ಲಿಂಗಾಯತರಿಂದ ಕಲ್ಯಾಣ ಮಾದರಿಯ ಕ್ರಾಂತಿಯಾಗದಂತೆ ರಾಷ್ಟ್ರೀಯ ಪಕ್ಷಗಳು ಎಚ್ಚರಿಕೆ ವಹಿಸಬೇಕು



ಲಿಂಗಾಯತರಿಂದ ಕಲ್ಯಾಣ ಮಾದರಿಯ ಕ್ರಾಂತಿಯಾಗದಂತೆ ರಾಷ್ಟ್ರೀಯ ಪಕ್ಷಗಳು ಎಚ್ಚರಿಕೆ ವಹಿಸಬೇಕು ಎಂದು ಡಾ. ಶರಣಪ್ಪ ಕೊಟಗಿ 
ಕರ್ನಾಟಕ,  ಮಹಾರಾಷ್ಟ್ರ ,ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಭಾರತದೇಶದ  ನಾನಾ ಭಾಗಗಳಲ್ಲಿ ಹರಡಿರುವಂತಹ ವೀರಶೈವ ಲಿಂಗಾಯತ ಧರಮಿಯರನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಬಾರದು 12 ನೆ ಶತಮಾನದಲ್ಲಿ ಲಿಂಗಾಯತ ವರ್ಗವನ್ನು ದ್ವೆಸಿಸಿದ ಹಿನ್ನಲೆಯಲ್ಲಿ ಕಲ್ಯಾಣ ಕ್ರಾಂತಿ ನಡೆದು ಹೋಯಿತು ಅಂತಹ ಮತ್ತೊಂದು ಕ್ರಾಂತಿಯಾಗದಂತೆ ರಾಷ್ಟ್ರೀಯ ಪಕ್ಷಗಳು ಎಚ್ಚರಿಕೆ ವಹಿಸಬೇಕಾಗಿದ್ದು ತೀರಾ ಅವಶ್ಯವಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಅವರು ಉಣಕಲ ಚನ್ನಬಸವ ಸಾಗರ ದಡದಲ್ಲಿರುವ ಉಳವಿ ಶ್ರೀಚನ್ನಬಸವೇಶ್ವರ ದೇವಸ್ತಾನದ ಗರ್ಭಗುಡಿಯಲ್ಲಿ ಉಳವಿ ಶ್ರೀಚನ್ನಬಸವೇಶ್ವರ ಅಮೃತ ಶೀಲಾಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಿಳಿಸಿದರು .
ವೀರಶೈವ ಲಿಂಗಾಯತ ಸಮುದಾಯಗಳ ಎಲ್ಲ ಒಳಪಂಗಡದ  ಶೈಕ್ಷಣಿಕ ಸಾಮಾಜಿಕ ಆರ್ಥಿಕ ಅಭಿರುದ್ದಿಗಾಗಿ ೨ ಎ ಮೀಸಲಾತಿಯನ್ನು ನೀಡಬೇಕು ಹಾಗೂ ಈಗಾಗಲೇ ನಿಗದಿ ಪಡಿಸಿದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಸರಕಾರ ಅನುಷ್ಠಾನ ಗೋಲಿಸಿದರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಅಭೀರುದ್ದಿಗೆ ಸಹಕಾರಿಯಾಗುತ್ತದೆ ಎಂದು ವೀರಶೈವ ಒಳಪಂಗಡಗಳ ಅಧ್ಯಕ್ಷರಾದ ಡಾ. ಶರಣಪ್ಪ ಕೊಟಗಿ ಯವರು ಮುಖ್ಯ ಅಥಿತಿಗಳಾಗಿ ಮುಂದುವರಿದು ಮಾತನಾಡಿದರು

ಈ  ಸಂದರ್ಭದಲ್ಲಿ ಉನಕಲದ ಉಳವಿ ಶ್ರೀಚನ್ನಬಸವೇಶ್ವರ  ಸಾಗರದಲ್ಲಿ ಪ್ರತಿಷ್ಟಾಪಿಸುತ್ತಿರುವ ಉಳವಿ ಶ್ರೀಚನ್ನಬಸವೇಶ್ವರ ಅಮೃತ ಶೀಲಾಮೂರ್ತಿ ಪ್ರತಷ್ಠಾಪನೆ ಸಮಿತಿಯ ಅಧ್ಯಕ್ಷರಾದ ಶ್ರೀ ಗಂಗಾಧರ ದೊಡ್ಡವಾಡ್ ಮತ್ತು ಗಣ್ಯರಿಂದ  ಡಾ.  ಶರಣಪ್ಪ ಕೊಟಗಿ ದಂಪತಿಗಳನ್ನು ಸನ್ಮಾನಿಸಲಾಯಿತು ....

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಂಗರೇಶ್ ಹಿರೇಮಠ್ .. ರಾಜಶೇಖರ ಮೆನಸಿನಕಾಯಿ. ಸುರೇಶ್ ಸವಣೂರು . ಶ್ರೀಮತಿ ಸುಮಾದೇವಿ ಹಿರೇಮಠ್ . ಅಶೋಕ ಬೇನಕಟ್ಟಿ . ಪುಂಡಲೀಕ ಜಾಧವ . ಮಹದೇವಪ್ಪ ಮೆಣಸಿನಕಾಯಿ . ಬಸವರಾಜ್ ಕೊಟಗಿ . ಸಿದ್ದಪ್ಪ ಮೆಣಸಿನಕಾಯಿ. ಗುರು ಕೆಂಚನ್ನವರ್ . ಶಿವಾನಂದ್ ಶಿರಗುಪ್ಪಿ . ಗುರುಸಿದ್ದಪ್ಪ ಬೆಂಗೆರಿ . ಗುರನ್ನ ಕುಸ್ಗಲ್. ಚಿಂತಾಮಣಿ ಸಿಂದಗಿ . ಬಸವರಾಜ ಹುಲ್ಲೊಳೆ . ಇರಯ ಮಠಪತಿ . ಸಿದ್ದೇಶ್ವರ ದೊಡ್ಡವಾಡ .. ಮುಂತಾದವರು ಉಪಸ್ತಿತರಿದ್ದರು
ನವೀನ ಹಳೆಯದು

نموذج الاتصال