ವೀರಶೈವ ಲಿಂಗಾಯತ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ.




ವೀರಶೈವ  ಲಿಂಗಾಯತ ಸಮುದಾಯಗಳಾದ ಬೇಡಜಂಗಮ ಮತ್ತು ಪಂಚಮಸಾಲಿ ಸಮುದಾಯವು ಸರಕಾರ  ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದುಳಿದಿದ್ದು, ಈ ಹಿನ್ನಲೆಯಲ್ಲಿ  ವೀರಶೈವ ಲಿಂಗಾಯತ ಒಳಪಂಗಡಗಳ ಎಲ್ಲಾ ಸಮುದಾಯಕ್ಕೂ ಮೀಸಲಾತಿ ಸೌಲಭ್ಯ ನೀಡುವದು  ಅತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ  ಸರ್ಕಾರ  ಪಂಚಮಸಾಲಿ ಸಮಾಜಕ್ಕೆ 2A ಹಾಗೂ ಬೇಡ ಜಂಗಮ ಸಮಾಜಕ್ಕೆ ಪರಶಿಷ್ಠ ಜಾತಿ ಪ್ರಮಾಣ ಪತ್ರ ನೀಡುವದರ ಮೂಲಕ ನ್ಯಾಯಯುತ ಬೇಡಿಕೆಯನ್ನು ಈಡೇರಿಸಕೆಂದು   ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಶರಣಪ್ಪ ಕೊಟಗಿ  ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವೀರಶೈವ ಲಿಂಗಾಯತ ಸಮುದಾಯವು ಸಾಮಾಜಿಕ,    ಶೈಕ್ಷಣಿಕ ಹಾಗೂ  ಆರ್ಥಿಕವಾಗಿ ಹಿಂದುಳಿದಿದೆ.   ೨ ಎ ಮೀಸಲಾತಿಯನ್ನು ಹಾಗೂ ಈಗಾಗಲೇ ನಿಗದಿಪಡಿಸಿದ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ಅನುಷ್ಠಾನಗೊಳಿಸಿದರೇ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. 

ಪ್ರಸ್ತುತವಾಗಿ ರೈತರು ಆರ್ಥಿಕ ಸಮಸ್ಯೆಯ ಸುಳಿಯಲ್ಲಿದ್ದು, ಕೃಷಿ ನಂಬಿರುವ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ.  ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹಾಗೂ ಸರ್ವ ವೀರಶೈವ ಲಿಂಗಾಯತ ಪಂಚಮಸಾಲಿ ಅಭಿವೃದ್ಧಿಗೆ ೨ ಎ ಮೀಸಲಾತಿ ಅನಿವಾರ್ಯವಿದ್ದು, ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ವಿಷಯವನ್ನಜ  ಗಂಭೀರವಾಗಿ ಪರಿಗಣಿಸಿ  ಕಾಲ ವಿಳಂಬ ಮಾಡದೇ    ೨ ಎ ಮೀಸಲಾತಿಯನ್ನು  ಪಂಚಮಸಾಲಿ ಸಮಾಜಕ್ಕೆ ಅದೇರೀತಿ ಅತ್ಯಂತ ಆರ್ಥಿಕವಾಗಿ ಹಿಂದುಳಿದ ಧಾರ್ಮಿಕ ಭಿಕ್ಷಾಟನೆ ಮೂಲಕ ಮತ್ತು ಪೂಜೆ ಪುನಸ್ಕಾರದ ಮೂಲಕ ಜೀವನ ಸಾಗಿಸುವ  ಬೇಡಜಂಗಮ ಸಮಾಜಕ್ಕೆ ಈಗಾಗಲೇ ನಿಗದಿ ಪಡಿಸಿದ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ನ್ಯಾಯ ಒದಗಿಸಲು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಶರಣಪ್ಪ ಕೊಟಗಿ .ರಾಜಶೇಖರ ಮೆಣಸಿನಕಾಯಿ . ಬಂಗಾರೇಶ ಹಿರೇಮಠ್. ಡಾ. ಪ್ರಕಾಶಗೌಡ ಪಾಟೀಲ್. ಸುರೇಶ್ ಸವಣೂರು . ಶಿವಯೋಗಿ ತೆಂಗಿನಕಾಯಿ.  ರಾಜಣ್ಣ ಬಾಗೇವಾಡಿ . ಮಹೇಶಗೌಡ ಪಾಟೀಲ ಮುಂತಾದವರು ಒತ್ತಾಯಿಸಿದ್ದಾರೆ. 
ನವೀನ ಹಳೆಯದು

نموذج الاتصال