ಸಿದ್ಧಾರೂಢರ ಮಠದಲ್ಲಿ ಸಡಗರದ ತೆಪ್ಪೋತ್ಸವ. ಸದ್ಗುರು ಶ್ರೀ ಸಿದ್ಧಾರೂಢರ 93ನೇಪುಣ್ಯರಾಧನೆ ಅಂಗವಾಗಿ ಸಿದ್ಧಾರೂಢ ಮಠ ಅಂಗಳದಲ್ಲಿ

ಸಿದ್ಧಾರೂಢರ  ಮಠದಲ್ಲಿ ಸಡಗರದ ತೆಪ್ಪೋತ್ಸವ.      ಸದ್ಗುರು ಶ್ರೀ ಸಿದ್ಧಾರೂಢರ 93ನೇ
ಪುಣ್ಯರಾಧನೆ ಅಂಗವಾಗಿ ಸಿದ್ಧಾರೂಢ ಮಠ ಅಂಗಳದಲ್ಲಿ ಇರುವ  ಕೆರೆಯಲ್ಲಿ ಪ್ರತಿ ವರ್ಷದಂತೆ
ಶನಿವಾರದಂದು ಜಲ ರಥೋತ್ಸವ
ಆಚರಿಸಲಾಯಿತು.
ಮಠದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಜಲ ರಥೋತ್ಸವ ಕಾರ್ಯಕ್ರಮಕ್ಕೆ ಸಿದ್ಧಾರೂಢ ಮಠದ ಮುಖ್ಯ ಆಡಳಿತ ಅಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ  ಶ್ರೀಮತಿ ಕೆ.ಜಿ ಶಾಂತಿ ಇವರು ಚಾಲನೆ ನೀಡಿದರು.  ಕೋವಿಡ ನಿರ್ಭಂದಗಳಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಜಲ ರಥೋತ್ಸವ ಈ ಬಾರಿ ಅತ್ಯಂತ ಸಂಭ್ರಮ , ಸಡಗರ ,ವಿಜ್ರಂಭಣೆಯಿಂದ 
ಆಚರಿಸಲಾಗುತ್ತಿದೆ ಎಂದು ಸಮಾಜ ಸೇವಕ ಮಹೇಂದ್ರ ಸಿಂಘಿ  ಹೇಳಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು, ಬ್ರಹ್ಮವಿದ್ಯಾನಗರ ಹೊಸದುರ್ಗ ಪರಮಪೂಜ್ಯ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು
ಕಬಿರಾನಂದ ಆಶ್ರಮ ಚಿತ್ರದುರ್ಗ ಮತ್ತು
ಜಿಲ್ಲಾ ನ್ಯಾಯಾಧೀಶರಾದ ಜಿ ಎ ಮೂಲಿಮನಿ, ಟ್ರಸ್ಟ್ ಕಮಿಟಿಯ ಛೇರ್ಮನ್ನರಾದ ಧರಣೇಂದ್ರ ಜವಳಿ
ವಾಯ್ಸ್ ಚೆರ್ಮನರಾದ ಡಾಕ್ಟರ್ ಗೋವಿಂದ ಮನ್ಸೂರ್ ಗೌರವ
ಕಾರ್ಯದರ್ಶಿಗಳಾದ  ಎಸ್‌ ಐ
ಕೋಳಕೂರ, ಧರ್ಮದರ್ಶಿಗಳಾದ , ಕೆ ಎಲ್ ಪಾಟೀಲ್  ದೇವೇಂದ್ರಪ್ಪ
ಮಾಳಗಿ, ಗಣಪತಿ ನಾಯಕ್  ಮಹೇಶಪ್ಪ
ಹನಗೋಡಿ, ಜಗದೀಶ್ ಮಗಜಿ ಕೊಂಡಿ , ಪ್ರಕಾಶ್ ಉಡಿಕೇರಿ  ಶಾಮಾನಂದ ಪೂಜಾರಿ, ಹಾಗೂ ಅಪಾರ ಭಕ್ತರು ಹಾಜರಿದ್ದರು.
ನವೀನ ಹಳೆಯದು

نموذج الاتصال