ಕಟ್ಟಡ ಸಾಮಗ್ರಿಗಳ ಮಾರ್ಗದರ್ಶಿ "ನಿರ್ಮಾಣ-2022" ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರಿಂದ ಬಿಡುಗಡೆ*

*ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಲೋಕಲ್ ಸೆಂಟರ್ ಧಾರವಾಡ ಇವರಿಂದ ಕಟ್ಟಡ ಸಾಮಗ್ರಿಗಳ ಮಾರ್ಗದರ್ಶಿ "ನಿರ್ಮಾಣ-2022"  ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರಿಂದ ಬಿಡುಗಡೆ*
ಅಸೋಸಿಯೇಷನ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಲೋಕಲ್ ಸೆಂಟರ್, ಧಾರವಾಡದ ವತಿಯಿಂದ ಮನೆಯನ್ನು ಕಟ್ಟುವವರಿಗಾಗಿ ಮಾಹಿತಿ ಕೈಪಿಡಿ ಪುಸ್ತಕ *"ನಿರ್ಮಾಣ-2022"*  ಬಿಡುಗಡೆ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ನಿರ್ಮಾಣ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ, ಸಂಘಟನೆ ಮೂಲಕ ಏಲ್ಲಾ ಕಾರ್ಯಗಳನ್ನು ಒಗಟ್ಟಿನಿಂದ ಮಾಡಲು ಸಹಾಯಕವಾಗುತ್ತದೆ. ಅಲ್ಲದೇ ಬದುಕಿನ ಮಜಲುಗಳನ್ನು ಸಹಬಾಳ್ವೆಯಿಂದ ಜೀವಿಸುವುದನ್ನು ಕಲಿಸುತ್ತದೆ. ಜನ ಸಮುದಾಯದ ನೋವುಗಳನ್ನು ಅರ್ಥೈಸಿಕೊಂಡು ಬದುಕ ಬೇಕು. ಅಂತಹ ಕಾರ್ಯವನ್ನು ಈ ಇಂಜಿನಿಯರ್ ಸಂಘ ಮಾಡುತ್ತಿರುವುದು ಸಂತಸ ತಂದಿದೆ. ವ್ಯವಸ್ಥೆಯನ್ನು ಬದಲಾಯಿಸುವುದು ಕಷ್ಟ, ಆದರೆ ವ್ಯವಸ್ಥೆಯ ಅಂಶಗಳನ್ನು ನೋಡಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ನೋಡಿ ಅವರನ್ನು ಗೌರವಿಸಬೇಕಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಬದುಕಿದಾಗ ಕಷ್ಟಗಳು ಹೆಚ್ಚು ಬರುತ್ತವೆ. 
ಅವುಗಳನ್ನು ನಿಷ್ಠೆಯಿಂದ ಎದುರಿಸಿದಾಗ ಎಲ್ಲರೂ ಗೌರವಿಸುವಂತ ಕ್ಷಣಗಳು ಸಹಜವಾಗಿ ಬರುತ್ತವೆ ಎಂದು ಹೇಳಿದರು. ಅಲ್ಲದೇ ಕಷ್ಟದ ಸಮಯದಲ್ಲಿ ಆಸರೆಯಾದವರನ್ನು ಎಂದು ಮರೆಬಾರದು, ಅಲ್ಲದೇ ನಾನು ಶಿಕ್ಷಕರ ಕಷ್ಷಗಳನ್ನು ಎಂದು ಮರೆಯದೇ ಅವರ ಋಣದಲ್ಲಿ ನಾನು ಬದುಕುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
 ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷರಾದ ಸುನಿಲ ಬಾಗೇವಾಡಿ ಮಾತನಾಡಿ ವೈಯಕ್ತಿಕವಾಗಿ ಮಾಡದ ಕಾರ್ಯವನ್ನು ನಮ್ಮ ಸಂಘದಿಂದ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗಟ್ಟಾಗಿ ಕಷ್ಷದ ಕಾರ್ಯವನ್ನು ಸಹ ಸರಳವಾಗಿ ಮಾಡಲು ಸಹಾಯಕವಾಗಿದೆ. ಇದರಿಂದ ಎಲ್ಲರೂ ನಮ್ಮ ಜೊತೆ ಇದ್ದಾರೆ ಎಂಬ ಭಾವನೆಯಿಂದ ಸಮೃದ್ದ ಬದುಕು ಕಾಣಲು ಸಹಾಯಕವಾಗಿದೆ ಎಂದು ಹೇಳಿದರು.
 ನಿರ್ಮಾಣ-2022ರ ಮಾಹಿತಿ ಕೈಪಿಡಿಯ ಪ್ರಧಾನ ಸಂಪಾದಕರಾದ ಇಂ.ವಿಜಯೇಂದ್ರ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ಪುಸ್ತಕ ಹೊರಬರಲು ಸಹಕರಿಸದ ಎಲ್ಲರನ್ನೂ ಸ್ಮರಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಇಂ.ಅರುಣಕುಮಾರ ಶೀಲವಂತ, ಖಜಾಂಚಿ ಇಂ.ಸಿದ್ದನಗೌಡ ಪಾಟೀಲ, ಇದ್ದರು. ಶ್ರೀಮತಿ ಪುಷ್ಪಾ ಬಸನಗೌಡರ ನಿರೂಪಿಸಿದರು. ಇಂ.ದಯಾನಂದ ಮಾಸೂರ ಗಣ್ಯರನ್ನು ಪರಿಚಯಿಸಿದರು. ಶ್ರೀಮತಿ.ವಿದ್ಯಾ ಕಬ್ಬೂರ ಅವರ ತಂಡದವರು ಪ್ರಾರ್ಥಿಸಿದರು. ಇಂ.ಅರುಣ ಶೀಲವಂತ ವಂದಿಸಿದರು. ನಂತರ ಸಂಘದ ಸದಸ್ಯರಿಂದ ನಾಟಕ: ಲಾಟರಿ ರಚನೆ: ಶ್ರೀಮತಿ.ಮಿಲನ ತೋಟಗೇರ, ನಿರ್ದೇಶನ : ಸಂಜಯ ಕಬ್ಬೂರ ಎಲ್ಲರನ್ನೂ ರಂಜಿಸಿತು. ಪ್ರಸಾದನದಲ್ಲಿ ಸಂತೋಷ ಮಹಾಲೆಯವರ ಕೈಚಳಕ ಎದ್ದು ಕಾಣುತ್ತಿತು. ಇಂಜಿನಿಯರ್ಸ ಯಾರಿಗೂ ಕಮ್ಮಿ ಇಲ್ಲದಂತೆ ನಟನೆ ,ಹಾಸ್ಯ, ಮನರಂಜನೆಯ ಕಾರ್ಯಕ್ರಮವನ್ನು ನೀಡಿದರು. ಆರಂಭದಲ್ಲಿ ಹಾಸ್ಯ ಕಲಾವಿದರಾದ ಮಲ್ಲಪ್ಪ ಹೊಂಗಲ, ಸುನೀಲ ಪತ್ರಿ ಹಾಸ್ಯದ ರಸದೌತಣ ನೀಡಿದರು.
 ಈ ಕಾರ್ಯಕ್ರಮದಲ್ಲಿ ಇಂಜಿನಿಯರಗಳಾದ ಸಂಜಯ ಕಬ್ಬೂರ, ಕಭೀರ ನದಾಫ್, ಅಲ್ತಾಪಲಿ ಹತ್ತಿಮತ್ತೂರ, ವಿಜಯ ಹಳ್ಳಿಕೇರಿ,ರಾಜಶೇಖರ ಇಟಗಿ, ಸುನಿಲ ಗೂಗಿ,ಅಶೋಕ ಕೌಜಗೇರಿ, ಸಾಹಿತಿ ಮಾರ್ತಾಂಡಪ್ಪ ಕತ್ತಿ, ಬಸವರಾಜ ಲಂಗೋಟಿ, ಅಜಿತ ಕರೋಗಲ್ಲ,ವಿಜಯ ತೋಟಗೇರ,ಅಸ್ಪಾಕಹಮದ್ ಮೊರಬದ, ಗೌತಮ ರೆವಣಕರ, ಸೋಹನ ತೋಟಗೇರ, ಪವನ ಬೇಟಗೇರಿ, ಎಸ್.ಎಚ್.ಚಕ್ರವರ್ತಿ ಹಾಗೂ ಸಂಘದ ಸದಸ್ಯರು ಇದ್ದರು
ನವೀನ ಹಳೆಯದು

نموذج الاتصال