ಕೇಂದ್ರ ಬಸವ ಸಮಿತಿಯಿಂದ* l *ವೈದ್ಯರ ದಿನಾಚರಣೆ*

 *ಕೇಂದ್ರ ಬಸವ ಸಮಿತಿಯಿಂದ*

              *ವೈದ್ಯರ ದಿನಾಚರಣೆ* 


   


   

ಬೈಲಹೊಂಗಲ : ನಗರದ ಪ್ರತಿಷ್ಠಿತ ಮಲಪ್ರಭಾ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್ ದಲ್ಲಿ ಕೇಂದ್ರ ಬಸವ ಸಮಿತಿಯಿಂದ ವೈದ್ಯರ ದಿನಾಚರಣೆ ಆಚರಿಸಲಾಯಿತು.ಎಲುವು ಕೀಲು ರೋಗ ಶಸ್ತ್ರತಜ್ಞರಾದ ಡಾ.ಮಂಜುನಾಥ ಮುದಕನಗೌಡರ, ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಅಶೋಕ ದೊಡವಾಡ, ನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ತಜ್ಞರಾದ ಡಾ. ಶರಣಕುಮಾರ ಅಂಗಡಿ ಹಾಗೂ ಇನ್ನುಳಿದ ವೈದ್ಯರಿಗೆ ವೈದ್ಯ ಸಂಗಣ್ಣ ಮತ್ತು ವಚನ ಸಾಹಿತ್ಯದ ಗ್ರಂಥಗಳನ್ನು ನೀಡಿ ಗೌರವಿಸಲಾಯಿತು.


ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ ಅವರು ಹನ್ನೆರಡನೆಯ ಶತಮಾನದಲ್ಲಿ ಶಿವಶರಣ ವೈದ್ಯ ಸಂಗಣ್ಣ ಮತ್ತು ಮತ್ತು ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ಧ ವೈದ್ಯ, ಶಿಕ್ಷಣ ತಜ್ಞ ಹಾಗೂ ಅದಕ್ಕಿಂತ ಮುಖ್ಯವಾಗಿ ರಾಜಕಾರಣಿಯಾಗಿ ದಶಕದ ವರೆಗೆ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ.ಬಿ.ಸಿ.ರಾಮ್ ಅವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.

         ಕೇಂದ್ರ ಬಸವ ಸಮಿತಿ ನಿರ್ದೇಶಕರಾದ  ಮೋಹನ ಬಸನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವದತ್ತಿ ತಾಲ್ಲೂಕಿನ ಚಿಕ್ಕೊಪ್ಪ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಡಾ.ಮಲ್ಲಿಕಾರ್ಜುನ ಛಬ್ಬಿ ಅವರು ಸ್ವಾಗತಿಸಿ ವಂದಿಸಿದರು.

ನವೀನ ಹಳೆಯದು

نموذج الاتصال