ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಇಂದು ಧಾರವಾಡದ ಪ್ರತಿಷ್ಠಿತ ವೈದ್ಯರು ಡಾ ಸುಧೀರ ಜಂಬಗಿ ಅವರನ್ನ ಮಹಾನಗರ ಪಾಲಿಕೆ ಮಹಾಪೌರರು ಈರೇಶ ಅಂಚಟಗೇರಿ ಅವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಇಂದು ಧಾರವಾಡದ ಪ್ರತಿಷ್ಠಿತ ವೈದ್ಯರು ಡಾ ಸುಧೀರ ಜಂಬಗಿ ಅವರನ್ನ ಮಹಾನಗರ ಪಾಲಿಕೆ ಮಹಾಪೌರರು ಈರೇಶ ಅಂಚಟಗೇರಿ ಅವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆಗಳು ಸಲ್ಲಿಸಿ ನರೇಂದ್ರ ಮೋದಿಯವರ ಪುಸ್ತಕ ನೀಡಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಡಿದ ಮಹಾಪೌರರು ವೈದ್ಯರು ಭಗವಂತನ ಎರಡನೇ ರೂಪ ಅವರ ಸೇವೆಗೆ ಎಷ್ಟೆ ಅಭಿನಂದಿಸಿದರು ಅದು ತೃಣಮಾತ್ರ.ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ವೈದ್ಯರು ತಮ್ಮ ಕುಟುಂಬ ಹಾಗು ಅವರಿಗಾಗುವ ತೊಂದರೆ ಬದಿಗಿಟ್ಟು ಜನಸೇವೆ ಮಾಡಿದ್ದು ಎಲ್ಲರ ಮನದಲ್ಲಿ ಅಚ್ಚಾಗಿ ಉಳಿದಿದೆ.ಸಮಸ್ತ ನಾಡಿನ ಜನತೆಗೆ ವೈದ್ಯರ ದಿನಾಚರಣೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಹಾಪೌರರು ಈರೇಶ ಅಂಚಟಗೇರಿ ಪಾಲಿಕೆ ಸದಸ್ಯರು ಅನಿತಾ ಚಳಗೇರಿ ಸುನೀಲಮೋರೆ ಶ್ರೀನಿವಾಸ ಕೋಟ್ಯಾನ ಹರೀಶ ಬಿಜಾಪುರ ಸಿದ್ದು ಕಲ್ಯಾಣಶೆಟ್ಟಿ ಬಸವರಾಜ ರುದ್ರಾಪುರ ಉಪಸ್ಥಿತರಿದ್ದರು