ಮಾತೃವಂದನ ಸಂಯೋಜಕರ ಹುದ್ದೆ ಅರ್ಜಿ ಆಹ್ವಾನ

ಮಾತೃವಂದನ ಸಂಯೋಜಕರ ಹುದ್ದೆ ಅರ್ಜಿ ಆಹ್ವಾನ

ಧಾರವಾಡ (ಕರ್ನಾಟಕ ವಾರ್ತೆ) ಜು.15: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಮಾತೃವಂದನ ಯೋಜನೆಯಡಿ ಖಾಲಿ ಇರುವ ಜಿಲ್ಲಾ ಕಾರ್ಯಕ್ರಮ ಸಂಯೋಜಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.   ಸಮಾಜಶಾಸ್ತ್ರ, ಜೀವ ವಿಜ್ಞಾನ, ನ್ಯೂಟ್ರಿಷಿಯನ್, ಮೆಡಿಸಿನ್, ಹೆಲ್ತ್ ಮ್ಯಾನೆಜಮೆಂಟ್, ಸೋಶಿಯಲ್ ವರ್ಕ, ಗ್ರಾಮೀಣಾಭಿವೃದ್ಧಿ ತತ್ಸಮಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ ಒಂದು ವರ್ಷ ಸೇವಾನುಭವ ಹೊಂದಿರಬೇಕು. ಕಂಪ್ಯೂಟರ್, ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ  ಹೊಂದಿರಬೇಕು.

ಅರ್ಹ ಆಸಕ್ತರು ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಧಾರವಾಡ ಕಚೇರಿ ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಜುಲೈ 22 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ 0836-2447850 ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
************
ನವೀನ ಹಳೆಯದು

نموذج الاتصال