ಶ್ರಾವಣ ಮಾಸ ನಿಮಿತ್ಯ ನಿತ್ಯ ವಚನೋತ್ಸವ.

ಶ್ರಾವಣ ಮಾಸ ನಿಮಿತ್ಯ ನಿತ್ಯ ವಚನೋತ್ಸವ.
 ಧಾರವಾಡ -  ಶ್ರಾವಣ ಮಾಸವು ಜುಲೈ 29 ರಿಂದ ಆರಂಭಗೊಳ್ಳಲಿದ್ದು ಒಂದು ತಿಂಗಳ ವರೆಗೆ ಪ್ರತಿನಿತ್ಯ ವಚನೋತ್ಸವ ಕಾರ್ಯಕ್ರಮವನ್ನು ಧಾರವಾಡ ಬಸವಕೇಂದ್ರವು ಶಹರದ 15 ಬಡಾವಣೆಯ 500 ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲಕ್ಕೆ ವಚನ ವಿಶ್ಲೇಷಣೆ ಹಾಗೂ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ  ಡಾ.ವೀರಣ್ಣ ರಾಜೂರ ತಿಳಿಸಿದರು.

   ಬಸವಾದಿ ಶರಣರ ವಿಚಾರಧಾರೆಯನ್ನು ಮನೆ ಮನ ತಲುಪಿಸುವ ನಿಟ್ಟಿನಲ್ಲಿ ಕಳೆದ ೨೫ ವರ್ಷದಿಂದ ನಿರಂತರವಾಗಿ ಪ್ರತಿ ಶ್ರಾವಣ ಮಾಸದ ಅವಧಿಯಲ್ಲಿ ಎಲ್ಲಾ ಬಡಾವಣೆಗಳ ಮನೆಯಲ್ಲಿ ನಿತ್ಯ ವಚನೋತ್ಸವ ನಡೆಯುತ್ತಾ ಬಂದಿದ್ದು ಈ ಬಾರಿ ವಿಶೇಷ ಸಮಾರಂಭ ಏರ್ಪಡಿಸುವ ಮೂಲಕ ಮಕ್ಕಳಿಗೆ ಹಾಗೂ ಯುವ ಜನರಿಗೆ ಮತ್ತು ಮಹಿಳೆಯರಿಗೆ ಆಧ್ಯತೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಇಷ್ಟಲಿಂಗ ಧಾರಣೆ ಹಾಗೂ ಬಸವತತ್ವ ಸಂದೇಶ ಸಾರುವ ಕಾರ್ಯಕ್ರಮ ಜರುಗಲಿದೆ.
ಬಸವ ಪಂಚಮಿ ನಿಮಿತ್ಯ ಆಗಸ್ಟ ೦2 ರಂದು ಬೆಳಗ್ಗೆ 10 ಗಂಟೆಗೆ ಕಲಕೇರಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು, ಉಂಡಿ ವಿತರಣೆ ಮಾಡಲಾಗುವುದು. ವಚನೋತ್ಸವ ಕಾರ್ಯಕ್ರಮದಲ್ಲಿ ಅನುಭಾವಗೋಷ್ಠಿ ಜರುಗಲಿದೆ.  
       ಜು.28 ರ ಸಂಜೆ ೦5 ಗಂಟೆಗೆ ಸಾಹಿತಿ ಸಂಶೋಧಕ ಡಾ.ವೀರಣ್ಣ ರಾಜೂರ ವಚನೋತ್ಸವ ಸಮಾರಂಭ ಉದ್ಘಾಟಿಸುವರು. ಮಹಾಪೌರ ಈರೇಶ ಅಂಚಟಗೇರಿ ಅವರು ವಚನ ಪರಿಮಳ ಭಾಗ .5 ಗ್ರಂಥ ಬಿಡುಗಡೆಗೊಳಿಸುವರು.  ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಹಿರಿಯ ವೈದ್ಯ ಡಾ.ಸುಧೀರ ಜಂಬಗಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಬಸವ ಕೇಂದ್ರ ಅಧ್ಯಕ್ಷ ಶಿವಣ್ಣ ಶರಣನವರ ಅಧ್ಯಕ್ಷತೆವಹಿಸಲಿದ್ದು ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ, ಉಪಾಧ್ಯಕ್ಷ ಎಮ್.ಎಮ್. ಚೌಧರಿ ಉಪಸ್ಥಿತರಿರುತ್ತಾರೆ. ಆಗಸ್ಟ 29 ರಂದು ವಚನ ಮಂಗಲೋತ್ಸವ ಜರುಗಲಿದ್ದು  ಈ ಎಲ್ಲಾ ಕಾರ್ಯಕ್ರಮದಲ್ಲಿ ಆಸಕ್ತರು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರುತ್ತೇವೆ.

ಪತ್ರಿಕಾಗೋಷ್ಠಿಯಲ್ಲಿ  ಶಿವಣ್ಣ ಶರಣನವರ. ಶಿವಶರಣ ಕಲಬಶೆಟ್ಟರ. ಎಮ್ ಎಮ್ ಚೌಧರಿ. ಉಮೇಶ್ ಕಟಗಿ. ಬಿ ಬಿ ಚಕ್ರಸಾಲಿ ಉಪಸ್ಥಿತರಿದ್ದವರು.  

ಹಲವು ಸುದ್ದಿಗಾಗಿ ನಮ್ಮ STAR 74 NEWS   youtub ಚಾನಲ್ ಗೆ subscribe ಮಾಡಿ ನಮ್ಮನ್ನು ಸಹಕರಿಸಿ.
ನವೀನ ಹಳೆಯದು

نموذج الاتصال