ಜು.22 ರಂದು ಪ್ರಶಸ್ತಿ ಪ್ರದಾನ ಸಮಾರಂಭ| ಛಾಯಾಗ್ರಾಹಕ ಪ್ರಶಸ್ತಿಗೆ ಮಹಾದೇವ ಆಯ್ಕೆ
ಪಾಪು ಪ್ರಶಸ್ತಿಗೆ ವಿಠ್ಠಲದಾಸ ಕಾಮತ್ ಆಯ್ಕೆ
ಧಾರವಾಡ: ಸಾಧನಾ ಸಂಸ್ಥೆ ಕೊಡುವ 2022 ನೇ ಸಾಲಿನ ಪಾಪು ಸಾಧನಾ ರಾಷ್ಟಿçÃಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿಗೆ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಕಚೇರಿ ಸ್ಥಾನಿಕ ವ್ಯವಸ್ಥಾಪಕರಾದ ವಿಠ್ಠಲದಾಸ ಕಾಮತ್ ಹಾಗೂ ರಾಜ್ಯ ಶ್ರೇಷ್ಠ ಪತ್ರಿಕಾ ಛಾಯಾಗ್ರಾಹಕ ಪ್ರಶಸ್ತಿಗೆ ಮಹಾದೇವ ಪಾಟೀಲ ಅವರಿಗೆ ಆಯ್ಕೆ ಮಾಡಿದೆಂದು ಸಂಸ್ಥೆ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪತ್ರಿಕೋದ್ಯಮದ ಸೇವೆ, ಬದುಕು, ಬರಹ ಗಮನಿಸಿ ಆಯ್ಕೆ ಸಮಿತಿಯು ಉಭಯ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜು.22 ರಂದು ಬೆಳಿಗ್ಗೆ 10 :30 ಕ್ಕೆ ಧಾರವಾಡ ಜಿಲ್ಲಾ ಕಸಾಪ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರೂ.10 ಸಾವಿರ ನಗದು, ಸ್ಮರಿಣಿಕೆ, ಫಲಪುಷ್ಪದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಮಾಹಿತಿ ನೀಡಿದರು.
ಸಾಧನಾ ಸಂಸ್ಥೆ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸುವರು. ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಹಳ್ಳಿ, ಜಿಲ್ಲಾ ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಳ್ಳಿನ, ವಕೀಲರಾದ ಪ್ರಕಾಶ ಉಡಕೇರಿ ಅತಿಥಿಗಳಾಗಿ ಆಗಮಿಸಲಿದ್ದು, ಪತ್ರಿಕೋದ್ಯಮ ಪ್ರಸ್ತುತ ಸವಾಲುಗಳ ಬಗ್ಗೆ ಪತ್ರಕರ್ತರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಉಪನ್ಯಾಸ ನೀಡುವರು ಎಂದರು.
ಡಾ.ಇಸಾಬೆಲ್ಲಾ ಝೇವಿಯರ್ ಮಾತನಾಡಿ, ಸಾಧನಾ ಸಂಸ್ಥೆ ಕಳೆದ ಮೂರು ದಶಕಗಳಿಂದಲೂ ನೊಂದವರ, ಕೆಳಸ್ಥರದ, ಮಹಿಳೆ ಹಾಗೂ ಮಕ್ಕಳ ಪರ ಕೆಲಸ ಮಾಡುತ್ತಿದೆ. ಐದು ಜಿಲ್ಲೆಗಳಲ್ಲಿ ಕೌಟುಂಬಕ ಆಪ್ತ ಸಮಾಲೋಚನೆ ಕೇಂದ್ರ ಸ್ಥಾಪಿಸಿ, ಬೇರೆಯಾದ 400 ಹೆಚ್ಚು ಕುಟುಂಬ ಒಗ್ಗೂಡಿಸಿದೆ. 100 ಕ್ಕೂ ಹೆಚ್ಚು ಅಂತರ್ಜಾತಿ ವಿವಾಹ ಮಾಡಿಸಿದೆ ಕೀರ್ತಿ ಹೊಂದಿದೆ ಎಂದು ಹೇಳಿದರು.
ಅಲ್ಲದೇ, ಲಿಂಗಸಮಾನತೆ, ಮಾನವ ಹಕ್ಕುಗಳ ಬಗ್ಗೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಸ್ವಯಂ ಸೇವಾ ಸಂಸ್ಥೆ ಸಿಬ್ಬಂದಿ, ಪೊಲೀಸರು ಹಾಗೂ ವಕೀಲರು ಸೇರಿ ಸುಮಾರು 19 ಸಾವಿರಕ್ಕೂ ಜಾಗೃತಿ ಮೂಡಿಸಿದೆ. ಜೊತೆಗೆ ಸಂಸ್ಥೆ ತೆರೆಮರೆ ಸಾಧಕರನ್ನು ಗುರುತಿಸಿ, ಸನ್ಮಾನಿಸುವ ಕೆಲಸ 2003 ರಿಂದಲೂ ಕೈಗೊಂಡಿದೆ. ವಿವಿಧ ಪ್ರಶಸ್ತಿಗಳನ್ನು ಸಹ ನೀಡುತ್ತಿದೆ ಎಂದು ತಿಳಿಸಿದರು,
ಶ್ರೇಷ್ಠ ದಂಪತಿ, ಶ್ರೇಷ್ಠ ಮಹಿಳಾ ಸಾಧಕಿ, ಶ್ರೇಷ್ಠ ಸಾಹಿತಿ, ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ನೀಡುತ್ತಿದೆ.
ಜು.22 ರಂದು ನಡೆಯುವ 2022 ನೇ ಸಾಲಿನ ಶ್ರೇಷ್ಠ ಪತ್ರಕರ್ತ ಮತ್ತು ಛಾಯಾಗ್ರಾಹಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾರ್ವಜನಿಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಾಧನಾ ಸಂಸ್ಥೆಯ ಉಪಾಧ್ಯಕ್ಷೆ ವೆಂಕಮ್ಮ ಸೋಮಾಪೂರ, ಮಾರ್ತಾಂಡಪ್ಪ ಕತ್ತಿ ಇದ್ದರು.
-