ವೃತ್ತಿಯಿಂದ ನಿವೃತ್ತಿ ಪ್ರವೃತ್ತಿಯಿಂದಲ್ಲ;

 ವೃತ್ತಿಯಿಂದ ನಿವೃತ್ತಿ ಪ್ರವೃತ್ತಿಯಿಂದಲ್ಲ; 


 ಕುಂಬಾರಕೊಪ್ಪ ಶಾಲೆಯಲ್ಲಿ ಶಿಕ್ಷಕ ಗುರುನಾಥ ತೆಗ್ಗಿನಳ್ಳಿ ಅವರಿಗೆ ಬಿಳ್ಕೋಡುವ ಸಮಾರಂಭ



ಧಾರವಾಡ: ಅಳ್ನಾವರ ತಾಲ್ಲೂಕಿನ ಕುಂಬಾರಕೊಪ್ಪ ಶಾಲೆಯಲ್ಲಿ ಶಿಕ್ಷಕರಾದ ಗುರುನಾಥ ತೆಗ್ಗಿನಳ್ಳಿ ಯವರ ನಿವೃತ್ತಿ ನಿಮಿತ್ಯ ಬಿಳ್ಕೋಡುವ ಸಮಾರಂಭ ಶಾಲೆಯಲ್ಲಿ ನೆರವೇರಿತು. 


ನಂತರ ಗುರುನಾಥ ತೆಗ್ಗಿನಳ್ಳಿ ಮಾತನಾಡಿ, ಸಿದ್ಧಾರೂಢರ ನೆಲದಲ್ಲಿ ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನನ್ನ ಪುಣ್ಯ ಹಾಗೂ ಊರಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಸಮಾಜದ ಉತ್ತಮ ಕೊಡುಗೆಗಳಾಗಿ ಬೆಳೆಯಿರಿ ಎಂದು ಕಿವಿಮಾತು ಹೇಳಿದರು. ಕುಂಬಾರಕೊಪ್ಪ ಶಾಲೆಯ ಮಕ್ಕಳು ಜಗತ್ತಿನಾದ್ಯಂತ ಹೆಸರು ಗಳಿಸಲಿ ಎಂದು ಆಶಿಸಿದರು. 

 ಪ್ರಧಾನ ಗುರುಮಾತೆಯಾದ ಶಾಂತಾ ಟಿ ಬೆಟಗೇರಿ ಮಾತನಾಡಿ, ಗುರುನಾಥ್ ತೆಗ್ಗಿನಳ್ಳಿ ಗುರುಗಳು ನಮ್ಮ ಮಾರ್ಗದರ್ಶಕರಾಗಿದ್ದರು ಹಾಗೂ ಶಾಲಾ ಕುಟುಂಬಕ್ಕೆ ಹಿರಿಯರು ಆಗಿದ್ದರು. ಅವರ ಜೊತೆಯಲ್ಲಿ ಸೇವೆಗೈದ ಕ್ಷಣಗಳು  ತುಂಬಾ ಅವಿಸ್ಮರಣೀಯ ಎಂದರು. 

ಇನ್ನೋರ್ವ ಸಹಶಿಕ್ಷಕರಾದ ಟಿ.ಪಿ.ಪಾಟೀಲ ಮಾತನಾಡಿ, ಅವರೊಂದಿಗೆ ಕಳೆದ ಕ್ಷಣಗಳು ತುಂಬಾ ನೆನಪಿನಲ್ಲಿ ಉಳಿಯುವಂತದ್ದು, ಹಿಂದೆ ಮಾರ್ಗದರ್ಶಕರಾದಂತೆ ಮುಂದೆಯೂ ಕೂಡ ಮಾರ್ಗದರ್ಶಕರಾಗಿರಿ ಎಂದರು. 

ಈ ಸಂದರ್ಭದಲ್ಲಿ ಸಹಶಿಕ್ಷಕರಾದ ಟಿ ಪಿ ಪಾಟೀಲ , ಬಿ ಎನ್ ಖಾನಾಪುರ , ಎಸ್ ಎ ಹೀರೆಮಠ, ಎನ್ ಬಿ ದುರ್ಗದ, ಕೃಷ್ಣಾ ಕುಂದಗೋಳ, ಎಸ್ ಎನ್ ಕೋಡದ ಹಾಗೂ ಅರವಟಗಿ ಗ್ರಾಮ ಪಂಚಾಯತ ಸದಸ್ಯರಾದ ಅಶೋಕ ಜೋಡಟ್ಟಿಯವರ, ಸೈಯದ ಮಂಗಳಗಟ್ಟಿ ಹಾಗೂ ಊರಿನ ನಾಗರೀಕರಾದ ಅಶೋಕ ಸಾವಂತ .ನಾಮದೇವ ಕರ್ಚಕಟ್ಟಿ ಊರಿನ ಹಿರಿಯರು, ಯುವಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕರಿಂದ ಭಾವಪೂರ್ಣ ವಿದಾಯ ಜರುಗಿತು.

ನವೀನ ಹಳೆಯದು

نموذج الاتصال