ಕ್ರೀಡಾ ಸಾಧನೆ
ಕರ್ನಾಟಕ ವಿಶ್ವವಿದ್ಯಾಲಯ ದಿನಾಂಕ 11. ರಿಂದ 13. ರ ವರಗೆ ರೋಪ್ ಸ್ಕಿಪಿಂಗ ಪುರುಷರು ಹಾಗೂ ಮಹಿಳಾ ತಂಡಗಳು ಪೂರ್ಣಿಮಾ ವಿಶ್ವವಿದ್ಯಾಲಯ, ಜೈಪುರ (ರಾಜಸ್ಥಾನ)ದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು ನಾಲ್ಕು ಬಂಗಾರದ ಪದಕ, ಏಳು ಬೆಳ್ಳಿಯ ಪದಕ ಮತ್ತು ಎರಡು ಕಂಚಿನ ಪದಕ ಪಡೆದು ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೆದ್ದಿದ್ದಾರೆ.
ವೈಯಕ್ತಿಕವಾಗಿ ಮಹಿಳಾ ಕ್ರೀಡಾಪಟುಗಳಾದ ಪ್ರೀತಿ ಸಂದಿಮನಿ ಸ್ಪೀಡ್ ಸ್ಪ್ರಿಂಟ (Speed Sprint) ನಲ್ಲಿ ಬಂಗಾರದ ಪದಕ, ಕೃತ್ತಿಕಾ ಹಟ್ಟಿ ಟ್ರಿಪಲ್ ಅಂಡರ್ (Tripple Under) ದಲ್ಲಿ ಬಂಗಾರದ ಪದಕ,ಭಿ ಮಾಂಬಿಕಾ ನಸಬಿ ಎಸ್.ಆರ್. ಫ್ರೀಸ್ಟೈಲ್ (SR freestyle) ನಲ್ಲಿ ಬಂಗಾರದ ಪದಕ, ಸಂಪ್ರೀತಾ ಗುಂಜಲ ಸ್ಪೀಡ್ ಹೋಪ್ (Speed Hop)ದಲ್ಲಿ ಬೆಳ್ಳಿ ಪದಕ, ನೇತ್ರಾ ತಳವಾರ ಸ್ಪೀಡ್ ಎಂಡುರನ್ಸ್ (Speed Endurance)ದಲ್ಲ ಬೆಳ್ಳಿ ಪದಕ, ಪೂಜಾ ತಳವಾರ ಡಬಲ್ ಅಂಡರ್ (Double Under)ನಲ್ಲಿ ಬೆಳ್ಳಿ ಪದಕ ಪಡೆದರೆ ಭಿಮಾಂಬಿಕಾ ನಸಬಿ, ಕೃತ್ತಿಕಾ ಹಟ್ಟಿ, ನೇತ್ರಾ ತಳವಾರ ಹಾಗೂ ಪ್ರೀತಿ ಸಂದಿಮನಿ ಒಳಗೊಂಡ ಸ್ಪೀಡ್ ರಿಲೇ (Speed Relay) ತಂಡ ಬಂಗಾರದ ಪದಕ ಪಡದಿದೆ , ಹಾಗೂ ಭಿಮಾಂಬಿಕಾ ನಸಬಿ, ಕೃತ್ತಿಕಾ ಹಟ್ಟಿ, ನೇತ್ರಾ ತಳವಾರ ಮತ್ತು ಪ್ರೀತಿ ಸಂದಿಮನಿ ಒಳಗೊಂಡ ಡಬಲ್ ಡಚ್ ಸ್ಪೀಡ್ ರಿಲೇ (Double Dutch Speed Relay) ತಂಡವು ಕಂಚಿನ ಪದಕ ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ರೋಪ್ ಸ್ಕಿಪಿಂಗ ತಂಡ ಪ್ರಥಮವಾಗಿ ಭಾಗವಹಿಸಿ ಒಟ್ಟು ನಾಲ್ಕು ಬಂಗಾರ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲ 21 ವಿಶ್ವದ್ಯಾಲಯಗಳಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡು ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಿದ್ದಾರೆ.
ಅದೇ ರೀತಿ ಪುರುಷರ ತಂಡವು ಸಹಿತ ಸ್ಪೀಡ್ ಸ್ಟ್ರೀಂಟ್ (Speed Sprint) ವೈಯಕ್ತಿಕ ವಿಭಾಗದಲ್ಲಿ ಭೀಮಸೇನ್ ಪರಸಾಪೂರ ಬೆಳ್ಳಿ ಪದಕ, ಸ್ಪೀಡ್ ಹೋಪ್ (Speed Hop) ವಿಭಾಗದಲ್ಲಿ ಮಲ್ಲಕಾರ್ಜುನ ನಾಯ್ಕರ ಬೆಳ್ಳಿ ಪದಕ ಸ್ಪೀಡ್ ಎಂಡುರನ್ಸ್ (Speed Endurance)ನಲ್ಲಿ ಶ್ರವಣಕುಮಾರ ಕಿಂದರಿ ಬೆಳ್ಳಿಯ ಪದಕ. ಟ್ರಿಪಲ್ ಅಂಡರ್ (Tripple Under) ವಿಭಾಗದಲ್ಲಿ ಹರೀಶ್ ವೆಂಕನಗೌಡ ಕಂಚಿನ ಪದಕ, ಎಸ್.ಆರ್. ಪ್ರೀಸ್ಟೈಲ್ (SR freestyle) ನಲ್ಲಿ ನಿತಿನ ಕುರಕುರಿ ಕಂಚಿನ ಪದಕ ಪಡೆದಿದ್ದಾರೆ. ಹಾಗೂ ಸ್ಪೀಡ್ ರಿಲೇ (Speed Relay) ವಿಭಾಗದಲ್ಲಿ ಭೀಮಸೆನ್ ಪರಸಾಪೂರ, ಹರೀಶ ವೆಂಕನಗೌಡ, ಸಂದೀಪ ಪವಾರ ಮತ್ತು ಶ್ರವಣಕುಮಾರ ಕಿಂದರಿ ಒಳಗೊಂಡ ತಂಡ ಬೆಳ್ಳಿ ಪದಕವನ್ನು ಮತ್ತು ಡಬಲ್ ಡಚ್ ಸ್ವೀಡ್ ಲಲೇ (Double Dutch Speed Relay)ಯಲ್ಲಿ ಭೀಮಸೇನ್ ಪರಸಾಪೂರ, ಹರೀಶ ವೆಂಕನಗೌಡ, ಮಲ್ಲಕಾರ್ಜುನ ನಾಯ್ಕರ ಮತ್ತು ಶ್ರವಣಕುಮಾರ ಕಿಂದರಿ ಒಳಗೊಂಡ ತಂಡ ಕಂಚಿನ ಪದಕ ಪಡೆದು ಒಟ್ಟು ನಾಲ್ಕು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಪಡೆದು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ.
ಈ ಒಂದು ಕ್ರೀಡಾ ಸಾಧನೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ. ಗುಡಿಸಿ, ಕುಲಸಚಿವರಾದ , ಯಶಪಾಲ್ ಕ್ಷೀರಸಾಗರ, ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ. ಸಿ. ಕೃಷ್ಣಮೂರ್ತಿ ಹಣಕಾಸು ಅಧಿಕಾರಿಗಳಾದ, ಪ್ರೋ. (ಶ್ರೀಮತಿ) ಎ. ಎನ್. ತಾಮ್ರಗುಂಡಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ, ಬಿ.ಎಂ.ಪಾಟೀಲ ಹಾಗೂ ವಿಶ್ವವಿದ್ಯಾಲಯದ ಆಡಳಿತ ವರ್ಗ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಪುರುಷರ ರೋಪ್ ಸ್ಕಿಪಿಂಗ ತಂಡಕ್ಕೆ . ನಾಗೇಶ ಕಾಂಬಳೆ ಮತ್ತು ಮಹಿಳಾ ರೋಪ್ ಸ್ತ್ರೀಪಿಂಗ್ ತಂಡಕ್ಕೆ . ಸಿ.ಕೆ. ಪಾಟೀಲ ಇವರುಗಳು ತಂಡದ ವ್ಯವಸ್ಥಾಪಕರಾಗಿ ಸಮರ್ಥ ಕಾರ್ಯ ನಿರ್ವಹಿಸಿದ್ದಾರೆ.ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.