DHARWAD:ನಿವೃತ್ತ ಯೋಧನಿಗೆ ತವರಿನಿಂದ ಅದ್ಧೂರಿ ಸ್ವಾಗತ

ನಿವೃತ್ತ ಯೋಧನಿಗೆ ತವರಿನಿಂದ ಅದ್ಧೂರಿ ಸ್ವಾಗತ
ಆರತಿ ಎತ್ತಿ ಮನೆ ಮಗನನ್ನು ಸ್ವಾಗತಿಸಿದ ಕುಟುಂಬಸ್ಥರ.
ಈ ದೇಶದಲ್ಲಿ ನಮ್ಮನ್ನು ರಕ್ಷಣೆ ಮಾಡುವವರು ರೈತ ಹಾಗೂ ಸೈನಿಕರು ಇಬ್ಬರು. ರೈತ ಅನ್ನ ಕೊಟ್ಟರೆ, ಸೈನಿಕ ನಮಗೆ ರಕ್ಷಣೆ ಕೊಡುತ್ತಾರೆ. ನಿವೃತ್ತ ಯೋಧರು 
ನಮ್ಮೂರಿಗೆ,  ನಮ್ಮ ನಾಡಿಗೆ , ನಮ್ಮ ಓಣಿಗೆ, ನಮ್ಮ ಮಹಿಳೆಯರ ರಕ್ಷಣೆ ಮಾಡಿದ ಹಬ್ಬದ ದಿನವಾಗಿ ಆಚರಣೆ ಮಾಡಲಾಗುತ್ತಿದೆ.‌ ಈ ಸುಸಂದರ್ಭದಲ್ಲಿ ಸುಮಾರು 24 ವರ್ಷ 1 ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದಿರುವ ವೀರ ಯೋಧನ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನಗೆ ತುಂಬ ಸಂತೋಷವಾಗುತ್ತದೆ ಎಂದು ಕವಿವಿ ನಿವೃತ್ತ ಸಿಂಡಿಕೇಟ್ ಸದಸ್ಯ ಕಲ್ಮೇಶ ಹಾವೇರಿ ಪೇಟೆ ಹೇಳಿದರು.