ಧಾರವಾಡ ತಾಲೂಕು 11 ನೇ ಸಾಹಿತ್ಯ ಸಮ್ಮೇಳನ.
ಧಾರವಾಡ. ಮಾರ್ಚ ತಿಂಗಳ 25 ನೇ ತಾರಿಖನಂದು ಕುಲ ಪುರೋಹಿತ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆದ ಧಾರವಾಡ ದ ಜನಪ್ರಿಯ ಕಾಮಣಿ ವೈದ್ಯರಾದ ಡಾ. ನೀತಿನ ಚಂದ್ರ ಹತ್ತಿಕಾಳ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಮಾಡಿ ಆಮಂತ್ರಿಸಲಾಯಿತು. ಸರ್ವಾಧ್ಯಕ್ಷರಾದ ಡಾ. ನೀತಿನ ಚಂದ್ರ ಹತ್ತಿಕಾಳ ಅವರು ತಾವು ವೇದ್ಯಕೀಯ ಸೇವೆಯಲ್ಲಿ ರೋಗಿಗಳಿಗೆ ಅವರ ಹೆಸರನ್ನು ಹಾಗೂ ಔಷಧ ತೆಗೆದುಕೊಳ್ಳುವ ವಿವರವನ್ನು ಕನ್ನಡದಲ್ಲಿಯೇ ಬೆರೆಯುವ ರೂಢಿಯನ್ನು ಇಟ್ಟುಕೊಂಡದ್ದನ್ನು ತಿಳಿಸಿದರಲ್ಲದೇ ಕುವೆಂಪು ಮತ್ತು ಜನಪ್ರಿಯ ಕನ್ನಡ ಪರ ಚಿತ್ರಗೀತೆಗಳನ್ನು ಹಾಗೂ ನಿಜಗುಣ ಶಿವಯೋಗಿಗಳ ತತ್ವ ಪದಗಳನ್ನು ಹಾಡುವ ಹವ್ಯಾಸವನ್ನು ಹೊಂದಿದ್ದನ್ನು ನೆನಪು ಮಾಡಿಕೊಂಡರು.
ಕನ್ನಡ ಸೇವೆಗೆ ಕಂಕಣಬದ್ದರಾಗಿರುತ್ತೇನೆ ಎಂದರು. ಡಾ. ನೀತಿನ ಚಂದ್ರ ಹತ್ತಿಕಾಳ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕುರಿತು ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ ಎಸ್ ಕೌಜಲಗಿ, ಪತ್ರಕರ್ತ ಗಣೇಶ್ ಕದಮ, ಚಂದ್ರಕಾಂತ ಮಹಾಜನ್ ಶೆಟ್ಟರ್, ರೇಖಾ ಜೋಶಿ, ಗುರು ತಿಗಡಿ, ಡಾ . ಬಸವರಾಜ ಅಂಗಡಿ,ಮಲ್ಲಿಕಾರ್ಜುನ ಮಠಪತಿ, ಎಮ್ ಎ ಭಾವಿಕಟ್ಟಿ, ಎ ಎಲ್ ಗೊರೆಬಾಳ, ಶಿವಾನಂದ ಕವಳಿ, ಶಾಂತವೀರ ಬೆಟಗೇರಿ ಮಾತನಾಡಿದರು. ಗುರು ಪೋಳ, ನಾರಾಯಣ ಭಜೆಂತ್ರಿ, ಪ್ರಮಿಳಾ ಜಕ್ಕನ್ನವರ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಎಚ್ ಎಸ್ ಪ್ರತಾಪ್, ಸುನಂದಾ ದಂಡಿನ, ಬಸವಣ್ಣೆಪ್ಪ ಗೆದ್ದಕೇರೀ, ಪಿ ಎಸ್ ಲಗಮನ್ನವರ, ಎಚ್ ಎಸ್ ಬಡಿಗೇರ, ಅಕ್ಕಬರ ಅಲಿ ಸೋಲಾಪುರ, ಅಶೋಕ್ ಶೆಟ್ಟರ್, ರಾಜೇಶ್ವರಿ ಹತ್ತಿಕಾಳ ಮುಂತಾದವರು ಉಪಸ್ಥಿತರಿದ್ದರು.ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರ್ತಾಂಡಪ್ಪಾ ಕತ್ತಿ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.