DHARWAD:ಮಾನವೀಯ ಮೌಲ್ಯ ಇಂದಿನ ಸಮಾಜಕ್ಕೆ ಅತ್ಯವಶ್ಯ ಈಶಪ್ಪ ಭೂತೆ. ಮಾನವ ಹಕ್ಕುಗಳ ದಿನ"

DHARWAD:ಮಾನವೀಯ ಮೌಲ್ಯ ಇಂದಿನ ಸಮಾಜಕ್ಕೆ ಅತ್ಯವಶ್ಯ  ಈಶಪ್ಪ ಭೂತೆ. ಮಾನವ ಹಕ್ಕುಗಳ ದಿನ"      


  ಧಾರವಾಡ  11 : ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತ್ವ ಮಾನವ ಹಕ್ಕುಗಳ ಅಡಿಗಲ್ಲು ಅದು ಸಮಾಜದಲ್ಲಿ ನೆಲೆಸಲು ಕುಟುಂಬದಿಂದಲೇ ಪ್ರಾರಂಭವಾಗಬೇಕು ಮಕ್ಕಳನ್ನು ಬೆಳೆಸುವಾಗಲೇ ಸಮಾನ ಅವಕಾಶ ಒದಗಿಸಬೇಕು ಜಾತಿಯತೆಯ ಸಂಕುಚಿತ ಮನೋಭಾವನೆಯಿಂದ ಹೊರ ತರಬೇಕು ಹಾಗೂ ನ್ಯಾಯದ ದೃಷ್ಟಿಯಲ್ಲಿ  ಸರ್ವರು
 ಸರಿಸಮಾನರು   ಎಂಬ ಭಾವನೆ ಬೆಳೆಸಬೇಕು. ಕಾನೂನು ರೀತಿ  ಹಕ್ಕುಒದಗಿಸುವುದಕ್ಕಿಂತ ಪರಸ್ಪರ ಪ್ರೀತಿ, ಆತ್ಮೀಯತೆ, ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಬೆಳೆದರೆ ದೇಶದ ಪ್ರಗತಿ ಸಾಧ್ಯ ಎಂದು ಅಧ್ಯಕ್ಷರು ಜಿಲ್ಲಾ ಗ್ರಾಹಕರು, ವಿವಾದಗಳು ಮತ್ತು ಪರಿಹಾರ ಆಯೋಗ, ಧಾರವಾಡ    ಈಶಪ್ಪ ಭೂತೆ ಮಾತನ್ನು ತಮ್ಮ ಮುಖ್ಯ ಅತಿಥಿಗಳ ನುಡಿಯಲ್ಲಿ ತಿಳಿಸಿದರು. ಅಂಜುಮನ್ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಮತ್ತು ಪಿಜಿ ಅಧ್ಯಯನ ಕೇಂದ್ರ  ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ಕೋಶ, ಇ ಎಲ್ ಸಿ  ದಿನಾಚರಣೆ ಸಮಿತಿಯ ಸಹಯೋಗದಲ್ಲಿ "ಮಾನವ ಹಕ್ಕುಗಳ ದಿನ"  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ. ಏನ್ ಎಮ್  ಮಕಾನದಾರ  ಮಕ್ಕಳಿಗೆ ಉತ್ತಮ ಜ್ಞಾನ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಅಂದಾಗ ಕುಟುಂಬ, ಸಮಾಜದ ಪ್ರಗತಿ  ಸಾಧ್ಯ ಎಂದು ತಿಳಿಸಿದರು.      ಐಕ್ಯೂಎಸ್ ಸಂಯೋಜಕರಾದ ಡಾ. ಎನ್. ಬಿ  .ನಾಲತವಾಡ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.  ಆಸ್ಮಾ  ನಾಜ್  ಬಳ್ಳಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಕಾರ್ಯಕ್ರಮ ಕುಮಾರಿ   ಅಫೀಫಾ ಕುರಾನ್  ಪಠಣದೊಂದಿಗೆ ಪ್ರಾರಂಭಿಸಲಾಯಿತು. ಕುಮಾರ್ ಪ್ರವೀಣ್ ರಾಠೋಡ್ ಶ್ಲೋಕವನ ಪಠಿಸಿದರು.     ಪ್ರೊ. ನಾಗರಾಜ್  ಕನಕಣಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಸರ್ವರನ್ನು ಸ್ವಾಗತಿಸಿದರು ಮತ್ತು ಅತಿಥಿಗಳನ್ನು ಪರಿಚಯಿಸಿದರು.   ದಿನಾಚರಣೆ ಸಮಿತಿ ಚೇರ್ಮನರಾದ ಡಾ. ಸೌಭಾಗ್ಯ ಜಾದವ್ ಕಾರ್ಯಕ್ರಮವನ್ನು ನಿರೂಪಿಸಿದರು.ಪ್ರೊ. ನೂರ್ ಜಹಾನ್ ಗಲಗಲಿ ವಂದನಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ನವೀನ ಹಳೆಯದು

نموذج الاتصال