*ಅತ್ಯತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪುರಸ್ಕøತ ಡಿಸಿ ದಿವ್ಯ ಪ್ರಭು ಅವರಿಗೆ ಸರಕಾರಿ ನೌಕರರ ಸಂಘದಿಂದ ಸನ್ಮಾನ*
*ಧಾರವಾಡ (ಕರ್ನಾಟಕ ವಾರ್ತೆ) ಅಕ್ಟೋಬರ್ 02:* ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪುರಸ್ಕøತರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಮತ್ತು ಉತ್ತಮ ಜಿಲ್ಲಾ ವಿಪತ್ತು ಸಮಾಲೋಚಕ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬುಳ್ಳಾ ಹಾಗೂ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ಪುರಸ್ಕೃತ ರಾಕೇಶ ತಂಗಡಗಿ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಸನ್ಮಾನಿಸಿ, ಗೌರವಿಸಲಾಯಿತು.
ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪ್ರಶಸ್ತಿ ಪುರಸ್ಕøತರನ್ನು ಸನ್ಮಾಸಿದರು. ಮತ್ತು ಸರಕಾರಿ ನೌಕರ ಸಂಘದ ಪದಾಧಿಕಾರಿಗಳಾದ ದೇವಿದಾಸ್ ಶಾಂತಿಕರ, ಆರ್. ಬಿ. ಲಿಂಗದಾಳ, ಮಲ್ಲಿಕಾರ್ಜುನ ಸೊಲಗಿ, ಮಂಜುನಾಥ ಯಡಹಳ್ಳಿ, ರಾಜಶೇಖರ ಬಾಣದ್, ಪಿ. ಎಫ್. ಗುಡೇನಕಟ್ಟಿ, ಸುರೇಶ ಹಿರೇಮಠ, ಮಹೆಬೂಬ ನದಾಫ, ಆರ್. ಎಂ. ಕಂಠೆಪ್ಪಗೌಡ್ರ, ರಾಜೇಶ ಕೋನರಡ್ಡಿ, ಸುರೇಶ ಜಟ್ಟೆಣ್ಣವರ, ಶಾಂತಾ ಶೀಲವಂತ, ರೇಣುಕಾ ಮದಬಾವಿ, ಆರ್. ಎಸ್. ಹೊನ್ನಪ್ಪನವರ, ಪಿ. ವಿ. ಕುರಬೆಟ್ ಉಪಸ್ಥಿತರಿದ್ದರು.
*********