ವಿದ್ಯಾರ್ಥಿಗಳಿಗೆ ರಂಗಭೂಮಿ ಅರಿವು ಮುಖ್ಯ:ಡಾ.ಬಿ.ಎಮ್ ಪಾಟೀಲ್
ಧಾರವಾಡ: ಕಲಿಕೆಯೊಂದಿಗೆ ಜೀವನದ ಕುರಿತು ತಿಳುವಳಿಕೆಯನ್ನು ಮೂಡಿಸುವಲ್ಲಿ ನಾಟಕಗಳು ಸಹಕಾರಿಯಾಗಿದ್ದು, ಬಿ.ಎಡ್ ಶಿಕ್ಷಕ ವಿದ್ಯಾರ್ಥಿಗಳಿಗೆ ರಂಗಭೂಮಿಯ ಅರಿವು ಮುಖ್ಯವಾಗಿದೆ ಎಂದು ಕ.ವಿ.ವಿ ಪ್ರಭಾರಿ ಕುಲಪತಿ ಡಾ.ಬಿ.ಎಮ್ ಪಾಟೀಲ್ ಅವರು ಹೇಳಿದರು.
ಇಂದು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಧಾರವಾಡ ರಂಗಾಯಣ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನದಲ್ಲಿ ಆಯೋಜಿಸಿದ್ದ ಬಿ.ಎಡ್ ಶಿಕ್ಷಕ ವಿದ್ಯಾರ್ಥಿಗಳ ನಾಟಕ ಶಿಬಿರದ ಸಮಾರೋಪ ಹಾಗೂ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಬಿ.ಎಡ್ ಶಿಕ್ಷಕ ವಿದ್ಯಾರ್ಥಿಗಳಿಗೆ ರಂಗಭೂಮಿಯ ಕುರಿತು ಪಠ್ಯಚಟುವಟಿಕೆಗಳಿವೆ. ಆದ್ದರಿಂದ ರಂಗಭೂಮಿಯಲ್ಲಿನ ಕಲೆಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಂಡು ಅವುಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ನಾಟಕಗಳು ಸಮಾಜದಲ್ಲಿ ನಡೆಯುವ ಘಟನೆ, ವಿಚಾರ, ವಿಷಯಗಳನ್ನು ಒಳಗೊಂಡಿರುತ್ತವೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೇ ರಂಗಭೂಮಿಯಲ್ಲಿರುವ ಹಲವಾರು ಕಲೆಗಳ ಕುರಿತು ತಿಳುವಳಿಕೆಯನ್ನು ಪಡೆದು, ಅವುಗಳ ಕುರಿತ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಟಕ ಅಕಾಡೆಮಿ ಸದ್ಯರಾದ ಗಾಯತ್ರಿ ಮಹಾದೇವ, ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ವೀ ಹುಡೇದ, ಕ.ವಿ.ವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಡಾ ಪ್ರಭಾ ಗುಡ್ಡದಾನ್ವೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕ.ವಿ.ವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಡಾ ಸುರೇಶ ಎಸ್. ಸಮ್ಮಸಗಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ಮಿತಾ ಅಂಗಡಿ ನಿರೂಪಿಸಿದರು. ನಂತರ ಸೋಮಶೇಖರ ಕಾರಿಗನೂರು ಅವರು ರಂಗಪಠ್ಯ ಮತ್ತು ನಿರ್ದೇಶಿಸಿದ “ನಾನಾ-ನೀನಾ” ನಾಟಕವನ್ನು ಕ.ವಿ.ವಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು.