ವೈದ್ಯ ವೃತ್ತಿ ಜತೆಗೆ ಸಮಾಜ ಸೇವೆ ಅಗತ್ಯ- ಡಾ. ನವೀನ ಮಂಕಣಿ.
ಧಾರವಾಡ: ಇಲ್ಲಿಯ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ಧಾರವಾಡ ಐಎಂಎ ಶಾಖೆಯ ಅಧ್ಯಕ್ಷರಾಗಿ ಡಾ. ನವೀನ ಮಂಕಣಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಅವರು, "ವೈದ್ಯರಲ್ಲಿ ಏಕತೆ ಇರಬೇಕು, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ವೈದ್ಯ ವೃತ್ತಿಗೆ ತನ್ನಿಂದ ತಾನೇ ಗೌರವ ಪ್ರಾಪ್ತವಾಗುತ್ತದೆ. ನಮ್ಮ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಸಮಾಜ ಸೇವೆಗೆ ಮುಂದಾಗುತ್ತೇವೆ,'' ಎಂದು ಪ್ರತಿಜ್ಞೆ ತೆಗೆದುಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ. ಅಧ್ಯಕ್ಷರು, ಕೆಎಂಸಿ, ಬೆಂಗಳೂರು ಡಾ. ಯೋಗಾನಂದ ರೆಡ್ಡಿ ಮಾತನಾಡಿ ವೈದ್ಯರು ಯಾವಾಗಲೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ ಮತ್ತು ವೃತ್ತಿ ಬದ್ಧತೆಯನ್ನು ಹೆಚ್ಚಿಗೆ ತೋರುತ್ತಾರೆ, ಇದರೋಂದಿಗೆ ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಬದುಕಿನತ್ತ ಕೂಡ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು. ಅವರು ಕೆಎಂಸಿನ ಸಾಮಾಜಿಕ ಭದ್ರತೆ ಮತ್ತು ಪಿಪಿಎಸ್ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯದರ್ಶಿಯಾಗಿ ಡಾ. ಸುಹಾಸ ಹಂಚಿನಮನಿ ಮತ್ತು ಖಜಾಂಚಿಯಾಗಿ ಡಾ. ಸಪನ್ ಡಿ.ಎಸ್. ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸತೀಶ ಇರಕಲ್, ನಿಕಟಪೂರ್ವ ಕಾರ್ಯದರ್ಶಿ ಡಾ. ಕಿರಣ ಕುಲಕರ್ಣಿ, ಕಾರ್ಯಕ್ರಮದ ಅಧ್ಯಕ್ಷ ಡಾ. ಸುಧೀರ ಜಂಬಗಿ, ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಡಾ. ಕವಿತಾ ಮಂಕಣಿ, ಡಾ. ಲಕ್ಕೋಳ, ಡಾ. ಮಧುಸೂದನ ಕೆ., ಡಾ. ವಿ.ಆರ್. ಸೊರಗಾವಿ, ಡಾ. ಪವನ್ ಪಾಟೀಲ ಮತ್ತು ಡಾ. ಸಂತೋಷ ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.