ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ.
ಹಾವೇರಿ ಜಿಲ್ಲೆ ಬ್ಯಾಡಗಿ ಯೋಜನಾ ವ್ಯಾಪ್ತಿಯ ಮೋಟೆಬೆನ್ನೂರು ವಲಯದ ಕಲ್ಲೇದೇವರು ಗ್ರಾಮದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.
ಜಗನ್ಮಾತೆಯ ಆರಾಧನೆಯ ಮೂಲಕ ನಮ್ಮ ಧಾರ್ಮಿಕ ಪರಂಪರೆಯನ್ನು ಉಳಿಸುವ ಪ್ರಯತ್ನ ಶ್ಲಾಘನೀಯ ಎಂದು ಶ್ರೀ ಷ. ಭ್ರ. ಗುರುಶಾoತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ನೆಗಳೂರು ಇವರು ಹೇಳಿದರು.
ಅವರು ಕಲ್ಲೇದೇವರು ಗ್ರಾಮದ ಶ್ರೀ ವಾಲ್ಮೀಕಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೋಟೆಬೆನ್ನೂರ ವಿಭಾಗ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ನಡೆದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತಮ್ಮ ತಮ್ಮ ಮನೆಗಳಲ್ಲಿ ಮಾಡುವ ಪೂಜೆಯು ಕುಟುಂಬ ಸದಸ್ಯರ ಭಾಗವಹಿಸುವಿಕೆಯಲ್ಲಿ ನಡೆಯುತ್ತೆ ಆದರೆ ಸಾಮೂಹಿಕವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜಾತಿ ಧರ್ಮ ಮೇಲು ಕೀಳು ಬೇದವಿಲ್ಲದೆ "ಸರ್ವೇಜನ ಸುಖೀನೋ ಭವಂತು" ಎಂಬ ತತ್ವದಲ್ಲಿ ನಡೆಯುವ ಈ ಪೂಜಾ ಪರಿಕಲ್ಪನೆ ಅದ್ಭುತ. ಧರ್ಮಸ್ಥಳದ ಹೆಗ್ಗಡೆಯವರು ನಡೆಸುವ ಎಲ್ಲಾ ಕಾರ್ಯಕ್ರಮಗಳು ಇಂದು ಎಲ್ಲರ ಮನಗಳಲ್ಲಿಯೂ ಅಚ್ಚಳಿಯದಂತೆ ನಿಂತಿದೆ. ನಿಮ್ಮ ಸಾಧನೆ ಹಿಂಗೇ ನಿರಂತರವಾಗಿ ನಡೆಯಲಿ ನಿಮಗೆಲ್ಲರಿಗೂ ಶುಭವಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲೇದೇವರು ಗ್ರಾಮಪಂಚಾಯತ್ ಅಧ್ಯಕ್ಷರಾದ ವೀರಣ್ಣ ಬಸುರಾಜಯ್ಯ ಹಿರೇಮಠ ರವರು ವಹಿಸಿದ್ದರು. ಎಸ್ ಕೆ ಡಿ ಆರ್ ಡಿ ಪಿ ಹಾವೇರಿ ಜಿಲ್ಲಾ ನಿರ್ದೇಶಕರಾದ ಶಿವರಾಯಪ್ರಭು ರವರು ಪ್ರಾಸ್ತವಿಕವಾಗಿ ಮಾತನಾಡಿದರು.ಮಲ್ಲಿಕಾರ್ಜುನ ವೀರಣ್ಣ ಬಳ್ಳಾರಿ ( ಕಾರ್ಯದರ್ಶಿಗಳು ಕ. ರಾ. ರೈತ ಸಂಘ ಮತ್ತು ಹಸಿರು ಸೇನೆ ), ಮಲ್ಲಿಕಾರ್ಜುನ ವೀ. ಬೇವಿನಮರದ, ಊರಿನ ಮುಖಂಡರು, ಸ್ವ ಸಹಾಯ ಸಂಘಗಳ ಸದಸ್ಯರು, ಉಪಸ್ಥಿತರಿದ್ದರು.
ತಾಲೂಕಿನ ಯೋಜನಾಧಿಕಾರಿಗಳಾದ ರಘುಪತಿ ಗೌಡ ಕಾರ್ಯಕ್ರಮ ನಿರೂಪಿಸಿದರು, ವಲಯದ ಮೇಲ್ವಿಚಾರಕರ ಚಂದ್ರಪ್ಪ ಸ್ವಾಗತಿಸಿದರು. ಸೇವಾಪ್ರತಿನಿಧಿ ಗಳು, ಒಕ್ಕೂಟ ಪದಾಧಿಕಾರಿಗಳು, ಹಾಗೂ ಸಂಘಗಳ ಮಾತೆಯರು ಸದಸ್ಯರು ಉಪಸ್ಥಿತಿ ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.