DHARWAD:ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ವಾಗ್ಧಾಳಿ

MANDYA:ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ವಾಗ್ಧಾಳಿ
ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ನೈತಿಕತೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹಿಸಿದರು.

ಸರಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯಲ್ಲಿ ಕ್ಷೇತ್ರದ ನೂರಾರೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಮಾಜಿ ಸಚಿವರು ಮಾತನಾಡಿದರು.

ರಾಜ್ಯದಲ್ಲಿ ಭ್ರಷ್ಟ ವ್ಯವಸ್ಥೆ ದಿನೇ ದಿನೇ ಹೆಚ್ಚಾಗಿದೆ. ಸಾಮಾನ್ಯ ಜನರ ದಿಕ್ಕು ತಪ್ಪಿಸಿ ಹಣವನ್ನ ಕೊಳ್ಳೆ ಹೊಡೆಯಲಾಗುತ್ತಿದೆ. ಅಧಿಕಾರ ಸಿಕ್ಕ ತಕ್ಷಣವೇ ಲೂಟಿಗೆ ಇಳಿದಿರುವುದು ನಾಡಿನ ಜನತೆಗೆ ಗೊತ್ತಾಗಿದೆ ಎಂದು ಮುನೇನಕೊಪ್ಪ ಅವರು ಆಕ್ರೋಶವ್ಯಕ್ತಪಡಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ,

ಜಿಪಂ ಮಾಜಿ ಅಧ್ಯಕ್ಷ ಅಡಿವೆಪ್ಪ ಮನಮಿ, ಸಿದ್ದಣ್ಣ ಕಿಟಗೇರಿ, ರಾಜಶೇಖರ ಕಂಪ್ಲಿ, ರೋಹಿತ ಮತ್ತಿಹಳ್ಳಿ, ಶಂಕರ ಯಾದವಾಡ, ಮುತ್ತು ಗಾಳಪ್ಪನವರ, ಫಕ್ಕೀರಪ್ಪ ಚಾಕಲಬ್ಬಿ, ಮುತ್ತು ಕೊಳ್ಳಿ, ಪ್ರಭು ಬುಳಗಣ್ಣನವರ, ಸೋಮು ಪಟ್ಟಣಶೆಟ್ಟಿ, ಪ್ರವೀಣ ಮಾಯಿನಕಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನವೀನ ಹಳೆಯದು

نموذج الاتصال