ದರೋಡೆ ಪ್ರಕರಣ ಪತ್ತೆ
ಧಾರವಾಡ :
ಗರಗ ಪೊಲೀಸ್ ಠಾಣೆ ಗುನ್ನಾ ನಂ 162/2024 ಕಲಂ 310(2), 311 ಬಿ.ಎನ್.ಎಸ್ ಕಾಯ್ದೆ
ಗರಗ ಪೊಲೀಸ್ ಠಾಣೆಯ ಹದ್ದಿನ ಪುಣಾ ಬೆಂಗಳೂರ ರಸ್ತೆ ಹೊಸ ತೇಗೂರ ಗ್ರಾಮದ ಹತ್ತಿರ ಗ್ರೀನ್ ದಾಬಾ ಮುಂದೆ ಹೆದ್ದಾರಿಯ ಮೇಲೆ ದಿ 02 ರಂದು ರಾತ್ರಿ 08:30 ಗಂಟೆಗೆ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾದ 07 ಜನ ಆರೋಪಿತರ ಆರೋಪಿತರಾದ 06 ಜನರ ಬಂದನ
ನವೀನ ತಂದೆ ಬಸವರಾಜ ಹುಣಶ್ಯಾಳ ವಯಾ-34 ವರ್ಷ ಸಾ: ಕಿತ್ತೂರ ,ಸಂತೋಷ ತಂದೆ ಚನ್ನಬಸಯ್ಯ ಬಿಡಿಮಠ ವಯಾ-25 ವರ್ಷ ಸಾ: ಕಿತ್ತೂರ, ವೀರುಪಾಕ್ಷ ತಂದೆ ಈರಪ್ಪ ಎಮ್ಮಿ ವಯಾ-21 ವರ್ಷ, ಸಾ: ಮಲಾಪೂರ,ಅಕ್ಷಯ ತಂದೆ ಪರಶೂರಾಮ ಕೋಳಿ ವಯಾ-19 ವರ್ಷ ಸಾ: ಕಿತ್ತೂರ ,ಸಾಗರ ಫಕ್ಕೀರಪ್ಪ ಗುಂಜಿ ವಯಾ-21 ವರ್ಷ ಸಾ: ಮಲಾಪೂರ,ಸಾಗರ ತಂದೆ ಯಲಪ್ಪ ಗುಂಜಿ ವಯಾ
-20 ವರ್ಷ, ಸಾ: ಕಿತ್ತೂರ ಇವರುಗಳನ್ನು ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ
ಪೋಲೀಸ ವರಿಷ್ಠಾಧಿಕಾರಿ
ಗೋಪಾಲ ಬ್ಯಾಕೋಡ ,ಅಡಿಷನಲ್ ಎಸ್.ಪಿ ನಾರಾಯಣ ಭರಮನಿ , ಡಿ.ಎಸ್.ಪಿ ಎಸ್.ಎಮ್. ನಾಗರಾಜ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ಸಮೀರ ಮುಲ್ಲಾ ಸಿಪಿಐ ರವರ ನೇತೃತ್ವದ ತಂಡದಲ್ಲಿ ಪಿ.ಎಸ್.ಐ ಸಿದ್ಧರಾಮಪ್ಪ ಉನ್ಮದ ಹಾಗೂ ಸಿಬ್ಬಂದಿ ಜನರು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ದಸ್ತಗೀರಾದ ಆರೋಪಿತರಿಂದ ದರೋಡೆಯಾದ 25.000/- ರೂ ಹಣ ಹಾಗೂ ದರೋಡೆಗೆ ಉಪಯೋಗಿಸಿದ ಇರ್ಟಿಗಾ ಕಾರ ನಂ KA-22ME-0322 ವಶಪಡಿಸಿಕೊಂಡಿರುವರು, ಸದರ ಪತ್ತೆ ಕಾರ್ಯಕೆ ಎಸ್.ಪಿ ಧಾರವಾಡ ರವರು ಶ್ಲಾಘನೆ ವ್ಯಕ್ತಪಡಿಸಿರುವರು.