ನಮ್ಮ ಹೊಲ ನಮ್ಮ ರಸ್ತೆ -- ಸಿ.ಎಂ ಬೇಟಿಯಾದ ಶಾಸಕ ವಿನಯ್

ನಮ್ಮ ಹೊಲ ನಮ್ಮ ರಸ್ತೆ -- ಸಿ.ಎಂ ಬೇಟಿಯಾದ ಶಾಸಕ ವಿನಯ್ 
     ಧಾರವಾಡ:--- ಧಾರವಾಡ ಗ್ರಾಮೀಣ ಭಾಗದಲ್ಲಿ ನಮ್ಮ ಹೊಲ ನಮ್ಮ ರಸ್ತೆಯಿಂದ ರೈತರಿಗೆ ಆಗಿರುವ ಉಪಯೋಗದ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಶಾಸಕ ವಿನಯ ಕುಲಕರ್ಣಿ ಅವರು ವಿವರಣೆ ನೀಡಿದರು.
    ಕ್ಷೇತ್ರದಲ್ಲಿ ರಸ್ತೆ ಮಾಡಿದ್ದರ ಪರಿಣಾಮ ರೈತ ಸಮೂಹಕ್ಕೆ ಸಾಕಷ್ಟು ಅನುಕೂಲವಾಗಿದ್ದು, ಬೆಳೆದ ಬೆಳೆಯನ್ನ ತರಲು ಉಪಯೋಗವಾಗಿರುವ ಕುರಿತು ಛಾಯಾಚಿತ್ರಗಳನ್ನ ಸಿಎಂ ಅವರಿಗೆ ತೋರಿಸಲಾಗಿದೆ.
     ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು.
ಬೆಂಗಳೂರಿನಲ್ಲಿ  ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ  ಅವರನ್ನು ಭೇಟಿಮಾಡಿ ಉಭಯ ಕುಶಲೋಪರಿ ವಿಚಾರಿಸಿದೆ, ನಮ್ಮ ಧಾರವಾಡ ಗ್ರಾಮೀಣ ಭಾಗದಲ್ಲಿ ನಡೆದ ಅಭಿವೃದ್ಧಿ ಕೆಲಸ #ನಮ್ಮ_ಹೊಲ_ರಸ್ತೆ ಕಾರ್ಯದ ಬಗ್ಗೆ ವಿವರಣೆ ನೀಡಿ, ಕಾರ್ಯದ ಚಾಯಾಚಿತ್ರಣ ನೀಡಿದೆನು ಎಂದಿದ್ದಾರೆ.
   
  ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು ಹಾಗು ಈ ತರಹದ ಅಭಿವೃದ್ಧಿ ಕಾರ್ಯಕ್ಕೆ ಇನ್ನು ಹೆಚ್ಚಿನ ಅನುಧಾನ ನೀಡುವುದಾಗಿ ಹೇಳಿದರು.
     ಈ ಸಂದರ್ಭದಲ್ಲಿ ಶಾಸಕರಾದ  ಏನ್.ಎಚ್.ಕೋನರೆಡ್ಡಿ ,  ಧಾರವಾಡ ಗ್ರಾಮೀಣ ಭಾಗದ ಮುಖಂಡರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال